ನವದೆಹಲಿ: ಕೆಲಸ ಮುಗಿಸಿ ನಡೆಯುತ್ತಾ ಮನೆಗೆ ತೆರಳುತ್ತಿದ್ದ ಮಹಿಳೆಯೊಬ್ಬರನ್ನು ಎಳೆದುಕೊಂಡು, ಚಲಿಸುತ್ತಿದ್ದ ಬಸ್ನಲ್ಲಿಯೇ ಸರತಿಯಲ್ಲಿ ಚಾಲಕ ಹಾಗೂ ನಿರ್ವಾಹಕ ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ದೆಹಲಿಯಲ್ಲಿ ನಡೆದಿದೆ. ಇಬ್ಬರೂ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಇಲ್ಲಿನ ರಾಣಿ ಭಾಗ್ ಪ್ರದೇಶದಲ್ಲಿ ಸೋಮವಾರ ರಾತ್ರಿ (ಮೇ 11) ನಡೆದ ಈ ಘಟನೆಯು 2012ರಲ್ಲಿ ದೆಹಲಿಯಲ್ಲಿಯೇ ನಡೆದಿದ್ದ ನಿರ್ಭಯಾ ಪ್ರಕರಣವನ್ನು ನೆನಪಿಸುವಂತಿದೆ. ಘಟನೆ ನಡೆದ ಮರುದಿನವೇ ಆರೋಪಿಗಳನ್ನು ಬಂಧಿಸಲಾಗಿದೆ. ಮಹಿಳೆಯು ವಿವಾಹಿತಳಾಗಿದ್ದು, ಅವರಿಗೆ ಮೂವರು ಮಕ್ಕಳಿದ್ದಾರೆ. ‘ಮಹಿಳೆಯ ದೂರಿನ ಅನ್ವಯ ವಿಳಂಬ ಮಾಡದೆಯೇ ಎಫ್ಐಆರ್ ದಾಖಲಿಸಲಾಗಿದೆ. ಆಕೆಯ ಹೇಳಿಕೆಯನ್ನೂದಾಖಲಿಸಿಕೊಳ್ಳಲಾಗಿದೆ. ಆಕೆಯ ಹೇಳಿಕೆ ಆಧರಿಸಿ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಡಿಸಿಪಿ ವಿಕ್ರಮ್ ಸಿಂಗ್ ಮಾಹಿತಿ ನೀಡಿದರು.

ಸಮಯ ಎಷ್ಟು ಎಂದು ಕೇಳಿದ ಮಹಿಳೆ ಮೇಲೆ ಎರಗಿದರು...

ಇಡೀ ದೇಶವನ್ನೇ ನಲುಗಿಸಿದ್ದ ದೆಹಲಿಯ ನಿರ್ಭಯಾ ಘಟನೆಯನ್ನೇ ಹೋಲುವಂತದ್ದೇ ಘಟನೆ 14 ವರ್ಷಗಳ ಬಳಿಕ ಮತ್ತೊಮ್ಮೆ ದೆಹಲಿಯಲ್ಲಿ ನಡೆದಿದೆ. ಸಮಯವೆಷ್ಟು ಎಂದು ಕೇಳಿದ 30 ವರ್ಷದ ಮಹಿಳೆಯನ್ನು ಹತ್ತಿರಕ್ಕೆ ಬರುವಂತೆ ಕರೆದ ವ್ಯಕ್ತಿಯು ಆಕೆಯನ್ನು ಬಸ್ನೊಳಗೆ ಎಳೆದುಕೊಂಡು, ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ.

‘ಆಕೆ ಇಲ್ಲಿನ ಮಂಗೋಲ್ಪುರಿ ಪ್ರದೇಶದಲ್ಲಿರುವ ಕಾರ್ಖಾನೆಯೊಂರಲ್ಲಿ ಕೆಲಸ ಮಾಡುತ್ತಿದ್ದರು. ಕೆಲಸ ಮುಗಿಸಿ ಪೀತಮಪುರ ಪ್ರದೇಶದ ಸ್ಲಂನಲ್ಲಿರುವ ತಮ್ಮ ಮನೆಗೆ ವಾಪಸಾಗುತ್ತಿದ್ದರು. ಸರಸ್ವತಿ ವಿಹಾರ ಬಸ್ ನಿಲ್ದಾಣ ತಲುಪಿದಾಗ, ಹತ್ತಿರದಲ್ಲಿಯೇಬಸ್ ನಿಂತಿರುವುದು ಕಂಡಿತು. ಬಸ್ನ ಬಾಗಿಲ ಬಳಿಯಲ್ಲಿಯೇ ನಿಂತಿದ್ದ ವ್ಯಕ್ತಿಯೊಬ್ಬರ ಬಳಿ ತೆರಳಿದ ಮಹಿಳೆಯು ಆತನ ಬಳಿ ಸಮಯ ಎಷ್ಟು ಎಂದು ವಿಚಾರಿಸಿದರು’ ಎಂದು ಪೊಲೀಸರು ಗುರುವಾರ ಘಟನೆಯನ್ನು ವಿವರಿಸಿದರು.

‘ಸಮಯ ಕೇಳುತ್ತಿದ್ದಂತೆಯೇ ತುಸು ಹತ್ತಿರ ಬರಲು ಹೇಳಿದ ವ್ಯಕ್ತಿಯು,ಬಳಿಕ ಮಹಿಳೆಯನ್ನು ಬಸ್ನೊಳಗೆ ಎಳೆದುಕೊಂಡಿದ್ದಾನೆ. ಬಸ್ ಅನ್ನು ನಂಗಲೋಯಿ ಎಂಬ ಪ್ರದೇಶಕ್ಕೆ ತೆಗೆದುಕೊಂಡು ಹೋಗಿ, ಚಾಲಕ ಹಾಗೂ ನಿರ್ವಾಹಕ ಒಬ್ಬರ ನಂತರ ಒಬ್ಬರಂತೆ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ಕೃತ್ಯದ ನಂತರ ನಂಗೋಲಿ ಪ್ರದೇಶದಲ್ಲಿನ ಮೆಟ್ರೊ ನಿಲ್ದಾಣದ ಬಳಿ ಬಸ್ ನಿಲ್ಲಿಸಿ, ಅಲ್ಲಿಯೇ ಮಹಿಳೆಯನ್ನು ಹೊರಗೆ ದೂಡಿ ಓಡಿಹೋಗಿದ್ದಾರೆ’ ಎಂದರು.

‘ಪತ್ನಿಯ ಮುಖ, ಕೈಗಳ ಮೇಲೆ ಗಾಯಗಳಾಗಿವೆ’ ಎಂದು ಸಂತ್ರಸ್ತೆಯ ಪತಿ ಹೇಳಿದ್ದಾರೆ. ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.