ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಟಲ್ ಸೇತುವೆಯಿಂದ ಜಿಗಿದು ಮಹಿಳೆ ಆತ್ಮಹತ್ಯೆಗೆ ಯತ್ನ; ‘ಆಪದ್ಬಾಂಧವ’ರಾದ ಪೊಲೀಸರು

Published : 17 ಆಗಸ್ಟ್ 2024, 4:56 IST
Last Updated : 17 ಆಗಸ್ಟ್ 2024, 4:56 IST
ಫಾಲೋ ಮಾಡಿ
Comments

ಮಹಾರಾಷ್ಟ್ರ: ದೇಶದ ಉದ್ದನೆಯ ಸಾಗರ ಸೇತುವೆ ‘ಅಟಲ್‌ ಬಿಹಾರಿ ವಾಜಪೇಯಿ ಸ್ಮೃತಿ ಸೇವರಿ ನ್ಹಾವಾ ಶೇವಾ ಅಟಲ್ ಸೇತು’ವಿನಿಂದ ಜಿಗಿದು ಮಹಿಳೆಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದಾರೆ.

‘ಅಟಲ್ ಸೇತು’ವಿನ ತಡೆಗೋಡೆ ಮೇಲಿಂದ ಜಿಗಿಯಲು ಯತ್ನಿಸಿದ ಮಹಿಳೆಯನ್ನು ಕಾರಿನ ಚಾಲಕ ಮತ್ತು ಪೊಲೀಸ್ ಅಧಿಕಾರಿಗಳು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದೆ.

‘ಎಂಟಿಎಚ್‌ಎಲ್ ಅಟಲ್ ಸೇತುವಿನಲ್ಲಿ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಳ್ಳುವ ಪ್ರಯತ್ನಿಸುತ್ತಿದ್ದರು. ಕರ್ತವ್ಯದಲ್ಲಿದ್ದ ಪೊಲೀಸ್ ಇನ್‌ಸ್ಪೆಕ್ಟರ್‌ಗಳಾದ ಲಲಿತ್ ಶಿರ್ಸತ್, ಕಿರಣ್ ಮಹ್ತ್ರೆ, ಕಾನ್‌ಸ್ಟೆಬಲ್‌ಗಳಾದ ಯಶ್ ಸೋನಾವಾನೆ ಮತ್ತು ಮಯೂರ್ ಪಾಟೀಲ್ ಅವರು ಮಹಿಳೆಯನ್ನು ರಕ್ಷಿಸಿದ್ದಾರೆ’ ಎಂದು ಮುಂಬೈ ಪೊಲೀಸ್ ಕಮಿಷನರ್ ‘ಎಕ್ಸ್‌’ನಲ್ಲಿ ಪೋಸ್ಟ್‌ನಲ್ಲಿ ಮಾಡಿದ್ದಾರೆ.

‘ಯಾವುದೇ ಸಂದರ್ಭದಲ್ಲಾದರೂ ಪ್ರಚೋದನೆಗೆ ಒಳಗಾಗಿ ಯಾರೂ ಕೂಡ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಬಾರದು. ನಿಮ್ಮ ಪ್ರೀತಿಪಾತ್ರರನ್ನು ನೆನಪಿನಲ್ಲಿಟ್ಟುಕೊಳ್ಳಿ’ ಎಂದು ಅವರು ಉಲ್ಲೇಖಿಸಿದ್ದಾರೆ.

ಕೆಲವು ತಿಂಗಳ ಹಿಂದೆ ಹಣಕಾಸಿನ ಸಮಸ್ಯೆಯಿಂದಾಗಿ 38 ವರ್ಷದ ಎಂಜಿನಿಯರ್‌ರೊಬ್ಬರು ಅಟಲ್ ಸೇತುವೆಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT