ಪ್ರಜಾವಾಣಿ ವಾರ್ತೆ

ತಿರುವನಂತಪುರ: ಕೇರಳದಿಂದ ತಮಿಳುನಾಡಿಗೆ ತೆರಳುತ್ತಿದ್ದ ಪಾಲರುವಿ ಎಕ್ಸ್ಪ್ರೆಸ್ ರೈಲಿನಲ್ಲಿ ಬಾಲಕಿ ಮೇಲೆ ನಡೆಯುತ್ತಿದ್ದ ಲೈಂಗಿಕ ದೌರ್ಜನ್ಯ ಮಹಿಳೆಯೊಬ್ಬರ ಸಮಯಪ್ರಜ್ಞೆಯಿಂದ ತಪ್ಪಿದೆ. ಪೊಲೀಸರು ಆರೋಪಿಯನ್ನು ಸೆರೆ ಹಿಡಿದಿದ್ದಾರೆ.

ರೈಲಿನ ಸಾಮಾನ್ಯ ಬೋಗಿಯಲ್ಲಿ ಶನಿವಾರ ರಾತ್ರಿ ತೆನ್ಮಲ ಬಳಿ ಘಟನೆ ನಡೆದಿದೆ. ಕೊಲ್ಲಂ ಜಿಲ್ಲೆಯ ಸಾನೀಶ್ (46) ಎಂಬಾತ ದೌರ್ಜನ್ಯಕ್ಕೆ ಯತ್ನಿಸಿದ ವ್ಯಕ್ತಿ.

ತಾತನ ಜೊತೆ ತೆರಳುತ್ತಿದ್ದ ಆರು ವರ್ಷದ ಬಾಲಕಿ ಮೇಲೆ ದೌರ್ಜನ್ಯ ಯತ್ನ ನಡೆದಿತ್ತು. ಅದೇ ರೈಲಿನಲ್ಲಿದ್ದ ಕೊಲ್ಲಂ ಜಿಲ್ಲೆಯ ವಿ.ಎಸ್.ವೀಣಾ ಎಂಬುವರು ಬಾಲಕಿಯ ರಕ್ಷಣೆಗೆ ಧಾವಿಸಿದ್ದಾರೆ.

ಮೊದಲು ವೀಣಾ ಅವರ ಜೊತೆ ಆರೋಪಿ ಅನುಚಿತವಾಗಿ ವರ್ತಿಸಿದ್ದ. ಅವರು ಪ್ರಶ್ನಿಸಿದ ನಂತರ ಪಕ್ಕದ ಬೋಗಿಗೆ ತೆರಳಿ ಬೆಡ್ಶೀಟ್ನಲ್ಲಿ ಬಾಲಕಿಯೊಬ್ಬಳನ್ನು ಮುಚ್ಚಿಕೊಂಡು ಸಾನೀಶ್ ಕರೆತರುತ್ತಿರುವುದನ್ನು ಹಾಗೂ ಆಕೆಯ ಜೊತೆ ಅನುಚಿತವಾಗಿ ನಡೆದುಕೊಳ್ಳುತ್ತಿರುವುದನ್ನು ವೀಣಾ ಗಮನಿಸಿದ್ದರು.

ಬಾಲಕಿಗೆ ಆತ ಸಂಬಂಧಿಯೇ ಎಂದು ವೀಣಾ ಅಕ್ಕಪಕ್ಕದವರ ಬಳಿ ವಿಚಾರಿಸಿದ್ದಾರೆ. ಕೊನೆಗೆ ವ್ಯಕ್ತಿಯ ಅಸಭ್ಯ ವರ್ತನೆಯನ್ನು ಪ್ರಶ್ನಿಸಿ, ಮೊಬೈಲ್ನಲ್ಲಿ ಚಿತ್ರೀಕರಿಸಿದ್ದಾರೆ. ಈ ವೇಳೆ ಗದ್ದಲ ಉಂಟಾಗಿ ಬಾಲಕಿಯ ಸಂಬಂಧಿಕರು ಅಲ್ಲಿಗೆ ಬಂದಿದ್ದಾರೆ.

ಕೂಡಲೇ ಪರಾರಿಯಾಗಲು ಸಾನೀಶ್ ಯತ್ನಿಸಿದ್ದಾನೆ. ವೀಣಾ ಅವರು ಸೆರೆ ಹಿಡಿದಿದ್ದ ದೃಶ್ಯಗಳ ನೆರವಿನಿಂದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.