ಯಾದಗಿರಿ: ‘ಬಿಜೆಪಿಯು ಒಂದು ವೈಜ್ಞಾನಿಕವಾದಂತಹ ತತ್ವ ಸಿದ್ಧಾಂತಗಳನ್ನು ಹೊಂದಿದ್ದು, ಸಮಾಜದಲ್ಲಿ ಇರುವಂತಹ ಕಟ್ಟಕಡೆಯ ವ್ಯಕ್ತಿಗೂ ಪಕ್ಷದ ವಿಚಾರಗಳನ್ನು ವೈಜ್ಞಾನಿಕವಾಗಿ ತಿಳಿಸಿಕೊಡಬೇಕಿದೆ’ ಎಂದು ಕೇಂದ್ರ ಮಾಜಿ ಸಚಿವ ಭಗವಂತ ಖೂಬಾ ಹೇಳಿದರು.

ನಗರ ಹೊರವಲಯದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಶನಿವಾರ ಬಿಜೆಪಿ ಜಿಲ್ಲಾ ಘಟಕ ಆಯೋಜಿಸಿದ್ದ ಪಂಡಿತ್ ದೀನದಯಾಳ್ ಉಪಾಧ್ಯಾಯ ಜಿಲ್ಲಾ ಮಟ್ಟದ ಪ್ರಶಿಕ್ಷಣ ವರ್ಗದ ಎರಡು ದಿನಗಳ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಸಾಮಾನ್ಯ ಜನರ ನಡುವೆ ಹೋಗಿ ಪಕ್ಷದ ಸಿದ್ಧಾಂತಗಳನ್ನು ಪ್ರಚಾರ ಮಾಡಬೇಕು. ಅಂತ್ಯೋದಯದ ಪರಿಕಲ್ಪನೆ ಕೊಟ್ಟಂತಹ ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ ಕನಸು ನನಸು ಮಾಡಬೇಕು. ದೇಶದ ಪ್ರಜೆಯಾಗಿ ನಮ್ಮ ಕರ್ತವ್ಯಗಳನ್ನು ಸಮಾಜ ಸೇವೆಯ ರೂಪದಲ್ಲಿ ಯಾವ ರೀತಿ ಮಾಡಬೇಕು ಎಂಬುದನ್ನು ಬಿಜೆಪಿ ಕಲಿಸಿಕೊಡುತ್ತದೆ’ ಎಂದರು.

‘ಬಿಜೆಪಿ ವಿಶ್ವದಲ್ಲಿಯೇ ಅತಿ ಹೆಚ್ಚು ಸದಸ್ಯರನ್ನು ಹೊಂದಿರುವ ರಾಜಕೀಯ ಪಕ್ಷವಾಗಿದೆ. ಸುಮಾರು 13 ಕೋಟಿಗೂ ಸದಸ್ಯರಿದ್ದು, 22 ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ರಾಷ್ಟ್ರಪತಿ, ಉಪರಾಷ್ಟ್ರಪತಿ ಬಿಜೆಪಿಯವರೇ ಇದ್ದಾರೆ. ಇಷ್ಟೊಂದು ದೊಡ್ಡ ಪಕ್ಷವಾಗಿದ್ದರೂ ಪ್ರತಿ ಮೂರು ವರ್ಷಗಳಿಗೆ ಒಮ್ಮೆ ಸದಸ್ಯತ್ವ ನೋಂದಣಿ ಮಾಡಿಸಿ, ಹೊಸ ಪದಾಧಿಕಾರಿಗಳಿಗೆ ಪ್ರಶಿಕ್ಷಣವನ್ನು ಕೊಡುತ್ತಿದೆ. ಇದು ಒಂದು ರೀತಿಯಲ್ಲಿ ವ್ಯಕ್ತಿತ್ವ ನಿರ್ಮಾಣ ಮಾಡುತ್ತದೆ. ಇಂತಹದ್ದು ಬೇರೆ ಪಕ್ಷಗಳಲ್ಲಿ ಇಲ್ಲ’ ಎಂದು ಹೇಳಿದರು.

ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ‘ಹಿಂದೂತ್ವ ಈ ದೇಶದ ನಾಗರಿಕತೆ, ಜೀವನ ಮಾರ್ಗವಾಗಿದೆ. ಆದರೆ, ಕೆಲವರು ಹಿಂದುತ್ವ ಎಂದ ತಕ್ಷಣವೇ ದೆವ್ವ ಬಂದಂತೆ ವರ್ತಿಸುತ್ತಾರೆ. ಮೇಲೂ ಕೀಳು, ಜಾತಿಯ ತಾರತಮ್ಯವನ್ನು ಹೋಗಲಾಡಿಸಲು ಆರ್ಎಸ್ಸ್, ಬಿಜೆಪಿ ಹೋರಾಟ ಮಾಡುತ್ತಿದೆ’ ಎಂದರು.

‘ಪ್ರಧಾನಿ ನರೇಂದ್ರ ಮೋದಿ ಅವರು ಒಂದು ದಿನವೂ ಯಾವುದೇ ಧರ್ಮ, ಜಾತಿಯನ್ನು ನಿಂದಿಸಿಲ್ಲ. ಆದರೆ, ರಾಹುಲ್ ಗಾಂಧಿ ಅವರು ಒಂದು ದಿನವೂ ಪುರುಸೊತ್ತ ಇಲ್ಲದೆ ಹಿಂದೂಗಳನ್ನು ನಿಂದಿಸುತ್ತಾರೆ. ಇಂತಹುದ್ದನ್ನು ಬದಿಗೆ ಇರಿಸಿ ಎಲ್ಲರೂ ಒಟ್ಟಾಗಿ ಇಡೀ ದೇಶವನ್ನು ತೆಗೆದುಕೊಂಡು ಹೋಗಬೇಕು. ಹಿಂದುತ್ವ, ಬಂಧುತ್ವ, ಸಿಂಧುತ್ವ ಬಿಡಬಾರದು’ ಎಂದು ಹೇಳಿದರು.

ಕಲಬುರಗಿ ವಿಭಾಗ ಪ್ರಭಾರಿ ಅರುಣ ಶಹಾಪುರ ಮಾತನಾಡಿ, ‘ಶಿಬಿರದಲ್ಲಿ ಭಾಗವಹಿಸಿದವರು ಉತ್ತಮ ಜ್ಞಾನ ಪಡೆದು ಪಕ್ಷದ ಸಂಘಟನೆಗೆ ಕೆಲಸ ಮಾಡಬೇಕು’ ಎಂದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ, ಜಿಲ್ಲಾ ಅಧ್ಯಕ್ಷ ಬಸವರಾಜ ವಿಭೂತಿಹಳ್ಳಿ, ಸಹ ಪ್ರಭಾರಿ ಶರಣಪ್ಪ ತಳವಾರ, ಪ್ರಶಿಕ್ಷಣ ರಾಜ್ಯ ಸಂಚಾಲಕ ರಾಜಶೇಖರ ನಾಗಮುರ್ತಿ, ರಾಜ್ಯ ಕಾರ್ಯದರ್ಶಿ ಲಲಿತಾ ಅನಪುರ, ರಾಜ್ಯ ಕಾರ್ಯಕಾರಿಣಿ ಸದಸ್ಯ ಮಹೇಶರೆಡ್ಡಿ ಮುದ್ನಾಳ, ರಾಜಶೇಖರ್ ಗೂಗಲ್, ಮುಖಂಡರಾದ ಅಮೀನರೆಡ್ಡಿ ಯಾಳಗಿ, ಡಾ.ಶರಣಭೂಪಾಲರೆಡ್ಡಿ, ರಾಚನಗೌಡ ಮುದ್ನಾಳ, ದೇವಿಂದ್ರನಾಥ ನಾದ, ಚಂದ್ರಶೇಖರ ಮಾಗನೂರ, ನಾಗರತ್ನ ಕುಪ್ಪಿ, ಸಿದ್ದಪ್ಪ ಹೊಟ್ಟಿ, ಮಲ್ಲಿಕಾರ್ಜುನ ಚಿಲ್ಲಾಳ, ಸುರೇಶ ಸಜ್ಜನ, ಸಿದ್ದಣ್ಣಗೌಡ ಕಾಡಂನೊರ, ಸುಜಾತಾ ಜೇವರ್ಗಿ, ವೀಣಾ ಮೋದಿ, ಮೋನೇಶ ಬೆಳಿಗೇರ ಉಪಸ್ಥಿತರಿದ್ದರು.

ಶಿವರಾಜ ದೇಶಮುಖ ಸ್ವಾಗತಿಸಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪರುಶುರಾಮ ಕುರುಕುಂದಿ ವಂದಿಸಿದರು. ಜಿಲ್ಲಾ ಪ್ರಧಾನ ಮೆಲ್ಲಪ್ಪ ಗುಳಗಿ ನಿರೂಪಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260531-30-1990280307

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.