ಗೋಕರ್ಣ: ಇಲ್ಲಿನ ಮಹಾಬಲೇಶ್ವರ ದೇವಸ್ಥಾನದಲ್ಲಿ 2012ರ ಆಗಸ್ಟ್ 24 ರಂದು ನಡೆದಿದ್ದ ಹುಂಡಿ ಕಳ್ಳತನ ಪ್ರಕರಣದ ತನಿಖೆಯನ್ನು ಸರ್ಕಾರ ಸಿಐಡಿಗೆ ವಹಿಸಿದೆ.
ಸಿಐಡಿ ಇನ್‌ಸ್ಪೆಕ್ಟರ್ ಪ್ರಭುಶಂಕರ ನೇತೃತ್ವದ ತಂಡ ಗೋಕರ್ಣಕ್ಕೆ ಬಂದಿದ್ದು ತನಿಖೆ ಪ್ರಾರಂಭವಾಗಿದೆ. ಪ್ರಕರಣದ ತನಿಖೆಯನ್ನು ಹಿಂದೆ ಕುಮಟಾ ಇನ್ಪೆಕ್ಟರ್ ಕೆ.ಶ್ರೀಕಾಂತ್ ನೇತೃತ್ವದಲ್ಲಿ ಕೈಗೊಳ್ಳಲಾಗಿತ್ತು. ರಾತ್ರಿ ವೇಳೆ ದೇವಾಲಯದ ಹೊರಗಿನ ಯಾವುದೇ ಬೀಗ ಮುರಿಯದೇ ಒಳ ನುಗ್ಗಿದ್ದ ಕಳ್ಳರು, ಒಳಗಿನ ಬಾಗಿಲಿನ ಕಬ್ಬಿಣದ ಸರಳನ್ನು ಬಾಗಿಸಿ ಹುಂಡಿ ಕಳ್ಳತನ ನಡೆಸಿದ್ದರು. ಅದರಲ್ಲೂ ಸಾವಿರ, ಐನೂರು ರೂಪಾಯಿ ನೋಟುಗಳನ್ನೇ ಬೇರ್ಪಡಿಸಿ ಒಯ್ದಿದ್ದರು. ಹೊರಗಡೆ ದೇವಸ್ಥಾನದ ಸೆಕ್ಯುರಿಟಿ ಗಾರ್ಡ್ ಇದ್ದರು.
ದೇವಾಲಯದ ಪಕ್ಕದಲ್ಲೇ ಪೊಲೀಸ್ ಉಪ-ಠಾಣೆ ಇದ್ದರೂ ಕಳ್ಳತನ ನಡೆದಿತ್ತು. ಸಿ.ಸಿ.ಟಿ.ವಿ ಕ್ಯಾಮೆರಾ ಇತ್ತಾದರೂ ಗುಡುಗು ಸಿಡಿಲಿನ ಕಾರಣದಿಂದ ಅಂದು ರಾತ್ರಿ 9.30ಕ್ಕೆ ಬಂದ್ ಮಾಡಲಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.