ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಆರು ವಿವಿ ಪರೀಕ್ಷಾಂಗ ಕುಲಸಚಿವರ ಎತ್ತಂಗಡಿ

Published : 14 ಆಗಸ್ಟ್ 2024, 16:29 IST
Last Updated : 14 ಆಗಸ್ಟ್ 2024, 16:29 IST
ಫಾಲೋ ಮಾಡಿ
Comments

ಬೆಂಗಳೂರು: ನಿಯಮಗಳನ್ನು ಉಲ್ಲಂಘಿಸಿ ನೇಮಕಗೊಂಡಿದ್ದ ಆರು ವಿಶ್ವವಿದ್ಯಾಲಯಗಳ ಪರೀಕ್ಷಾಂಗ ಕುಲಸಚಿವರನ್ನು ಅವರ ಮಾತೃಸಂಸ್ಥೆಗೆ ಮರಳುವಂತೆ ಉನ್ನತ ಶಿಕ್ಷಣ ಇಲಾಖೆ ಸೂಚಿಸಿದೆ.

ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಕಾಯ್ದೆ–2020ರ ಪ್ರಕಾರ ಕರ್ನಾಟಕ ಆಡಳಿತ ಸೇವೆಗೆ ಸೇರಿದ ಹಿರಿಯ ಶ್ರೇಣಿಯ ಅಧಿಕಾರಿ ಅಥವಾ ವಿಶ್ವವಿದ್ಯಾಲಯದ ವ್ಯಾಸಂಗ ವಿಭಾಗದ ಹಿರಿಯ ಸದಸ್ಯರನ್ನು ರಾಜ್ಯ ಸರ್ಕಾರ ನೇಮಕ ಮಾಡಬಹುದು. ಆದರೆ, ಆರು ಕುಲಸಚಿವರು (ಮೌಲ್ಯಮಾಪನ) ವಿಶ್ವವಿದ್ಯಾಲಯಗಳ ವ್ಯಾಸಂಗ ವಿಭಾಗದ ಹಿರಿಯ ಸದಸ್ಯರಲ್ಲದ ಕಾರಣ ಅವರನ್ನು ಹುದ್ದೆಯಿಂದ ಬಿಡುಗಡೆ ಮಾಡಲಾಗುತ್ತಿದೆ. 

ಮಾತೃ ಸಂಸ್ಥೆಗೆ ಮರಳುವ ಕುಲಸಚಿವರ ವಿವರ:

ಕೊಡಗು ವಿಶ್ವವಿದ್ಯಾಲಯದ ಸೀನಪ್ಪ (ಪ್ರಾಂಶುಪಾಲ, ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜು, ಮೈಸೂರು), ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕೆ. ತಿಪ್ಪೇಸ್ವಾಮಿ (ಪ್ರಾಧ್ಯಾಪಕ, ವಿಟಿಯು, ಮೈಸೂರು), ಮಂಡ್ಯ ವಿಶ್ವವಿದ್ಯಾಲಯದ ಎಚ್‌.ಜಿ. ರಂಗರಾಜು (ಸಹಾಯಕ ಪ್ರಾಧ್ಯಾಪಕ, ಎಂಜನಿಯರಿಂಗ್ ಕಾಲೇಜು, ಚಾಮರಾಜನಗರ), ಹಾವೇರಿ ವಿಶ್ವವಿದ್ಯಾಲಯದ ವಿಜಯಲಕ್ಷ್ಮಿ ತಿರ್ಲಾಪುರ (ಇಂಗ್ಲಿಷ್‌ ವಿಭಾಗದ ಮುಖ್ಯಸ್ಥೆ, ಮರಾಠ ಮಂಡಳ ಕಲಾ ಮತ್ತು ವಾಣಿಜ್ಯ ವಿದ್ಯಾಲಯ, ಖಾನಾಪುರ), ಬೆಂಗಳೂರು ನಗರ ವಿಶ್ವವಿದ್ಯಾಲಯದ ಸಿ.ಎಸ್‌. ಆನಂದಕುಮಾರ್ (ಸಹ ಪ್ರಾಧ್ಯಾಪಕ, ವಿಟಿಯು, ಚಿಕ್ಕಬಳ್ಳಾಪುರ), ಬಾಗಲಕೋಟೆ ವಿಶ್ವವಿದ್ಯಾಲಯದ ಎಸ್‌.ಎ. ಅಂಗಡಿ (ಪ್ರಾಧ್ಯಾಪಕ, ವಿಟಿಯು, ಬೆಳಗಾವಿ). 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT