ಅಪಘಾತದಲ್ಲಿ ಕರ್ನಾಟಕದ ಸೂರ್ಯಕಾಂತ್ ಎಂಬುವರು ಮೃತಪಟ್ಟಿದ್ದರು. ಅವರ ತಾಯಿ ಮೀನಾಕ್ಷಿ 2017ರ ಆಗಸ್ಟ್‌ನಲ್ಲಿ ಹೈಕೋರ್ಟ್ ನೀಡಿದ್ದ ಆದೇಶ ಪ್ರಶ್ನಿಸಿ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಗೆ ₹1,04,01,000 ಮೊತ್ತ ಪರಿಹಾರ ನೀಡಬೇಕು ಎಂದು ವಾಹನ ಅಪಘಾತ ಕ್ಲೈಮ್ ಟ್ರಿಬ್ಯೂನಲ್ ನೀಡಿದ್ದ ಆದೇಶವನ್ನು ಮಾರ್ಪಡಿಸಿದ್ದ ಹೈಕೋರ್ಟ್ ಪರಿಹಾರ ಮೊತ್ತವನ್ನು ₹49,47,035ಕ್ಕೆ ಇಳಿಸಿತ್ತು. ಇದನ್ನು ಮೇಲ್ಮನವಿಯಲ್ಲಿ ಪ್ರಶ್ನಿಸಲಾಗಿತ್ತು.