ಬೆಂಗಳೂರು: ಕಲಬುರಗಿ ಜಿಲ್ಲೆ ವಾಡಿಯ ಕಣ್ಣೂರು ಲೈಮ್ಸ್ಟೋನ್ ಬ್ಲಾಕ್ ಗುತ್ತಿಗೆ ಪಡೆದಿದ್ದ ಅದಾನಿ ಒಡೆತನದ ಎಸಿಸಿ ಕಂಪನಿ ರಾಜಧನ ಹಾಗೂ ದಂಡದ ಮೊತ್ತ ಸೇರಿ ₹850 ಕೋಟಿ ಬಾಕಿ ಉಳಿಸಿಕೊಂಡಿದೆ.

ವಿಧಾನ ಪರಿಷತ್ನಲ್ಲಿ ಕಾಂಗ್ರೆಸ್ನ ಆರತಿ ಕೃಷ್ಣ ಅವರ ಪ್ರಶ್ನೆಗೆ ಗಣಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಅವರ ಪರವಾಗಿ ಉತ್ತರಿಸಿದ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಈ ಮಾಹಿತಿ ನೀಡಿದರು.

‘ಕಲಬುರಗಿ ಜಿಲ್ಲೆಯ ಇಂಗಳಗಿ ಹಾಗೂ ರಾವೂರ ಗ್ರಾಮಗಳ ವ್ಯಾಪ್ತಿಯಲ್ಲಿ ಎಸಿಸಿ ಕಂಪನಿಗೆ 471.03 ಹೆಕ್ಟೇರ್ ಸುಣ್ಣದ ಕಲ್ಲಿನ ಗಣಿ ಗುತ್ತಿಗೆಗೆ ನೀಡಲಾಗಿದೆ. ಈ ವರ್ಷದ ಜನವರಿಯಲ್ಲೇ ಗುತ್ತಿಗೆ ಅವಧಿ ಮುಗಿದಿದ್ದು, ಹೊಸದಾಗಿ ಅನುಮತಿ ನೀಡಿಲ್ಲ. ರಾಜಧನ ಮತ್ತು ದಂಡದ ಮೊತ್ತ ಪ್ರಶ್ನಿಸಿ ಕಂಪನಿ ಕಾನೂನು ಹೋರಾಟ ನಡೆಸುತ್ತಿದೆ. ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆ ನಡೆಯುತ್ತಿದೆ. ಪಾವತಿಸಬೇಕಾದ ಮೊತ್ತ ಇತ್ಯರ್ಥವಾಗಿಲ್ಲ. ಅಲ್ಲಿಯವರೆಗೆ ಗಣಿಗಾರಿಕೆ ನಡೆಸಲು ಕೋರ್ಟ್ ಅವಕಾಶ ನೀಡಿದೆ’ ಎಂದರು.

‘ಕಾಂಗ್ರೆಸ್ ನಾಯಕರು ಅದಾನಿ ಅವರನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಸ್ನೇಹಿತ ಎಂದು ಟೀಕಿಸುತ್ತಾರೆ. ಅದಾನಿ ಒಡೆತನದ ಕಂಪನಿ ಭಾರಿ ಮೊತ್ತ ಬಾಕಿ ಉಳಿಸಿಕೊಂಡರೂ ರಾಜ್ಯ ಸರ್ಕಾರ ಗಣಿಗಾರಿಕೆಗೆ ಅವಕಾಶ ನೀಡಿದೆ. ಇದರ ಹಿಂದಿನ ಹಿತಾಸಕ್ತಿ ಏನು’ ಎಂದು ಬಿಜೆಪಿಯ ಸಿ.ಟಿ.ರವಿ ಪ್ರಶ್ನಿಸಿದರು.

‘ರಾಜಧನ ಬಾಕಿ ಉಳಿಸಿಕೊಂಡರೂ ಗಣಿಗಾರಿಕೆ ನಡೆಸಲು ಅವಕಾಶ ನೀಡಿದ್ದು ಸರಿಯಲ್ಲ. ಬಾಕಿ ವಸೂಲಿಗೆ ಕ್ರಮ ಕೈಗೊಳ್ಳಬೇಕು’ ಎಂದು ಕಾಂಗ್ರೆಸ್ನ ಕೆ.ಶಿವಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು.

‘ಅದಾನಿ ಸೇರಿದಂತೆ ಯಾರೇ ಆದರೂ ರಾಜ್ಯ ಸರ್ಕಾರ ಮುಲಾಜಿಗೆ ಒಳಗಾಗುವುದಿಲ್ಲ. ಪ್ರಕರಣ ಕುರಿತು ಕಾನೂನು ತಜ್ಞರ ಅಭಿಪ್ರಾಯ ಕೇಳಲಾಗಿದೆ. ಕ್ರಿಮಿನಲ್ ಪ್ರಕರಣ ದಾಖಲಿಸಲು ಅಡ್ವೊಕೇಟ್ ಜನರಲ್ ಸಲಹೆ ನೀಡಿದ್ದಾರೆ. ಸಮಗ್ರ ಸಮಾಲೋಚನೆ ನಡೆಸಿದ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.