ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸರ್ಕಾರಕ್ಕೆ ಗೌಪ್ಯ ಮಾಹಿತಿ ಸಿಕ್ಕಿದ್ದೇಗೆ?: ರಾಜ್ಯಪಾಲ ಥಾವರಚಂದ್‌ ಗೆಹಲೋತ್‌

ಎಚ್‌ಡಿಕೆ, ನಿರಾಣಿ, ಜೊಲ್ಲೆ, ರೆಡ್ಡಿ ವಿರುದ್ಧದ ಮನವಿ: ರಾಜ್ಯಪಾಲ ಪ್ರಶ್ನೆ
Published : 20 ಸೆಪ್ಟೆಂಬರ್ 2024, 23:45 IST
Last Updated : 20 ಸೆಪ್ಟೆಂಬರ್ 2024, 23:45 IST
ಫಾಲೋ ಮಾಡಿ
Comments

ಬೆಂಗಳೂರು: ‘ಎಚ್‌.ಡಿ.ಕುಮಾರಸ್ವಾಮಿ, ಮುರುಗೇಶ ನಿರಾಣಿ, ಶಶಿಕಲಾ ಜೊಲ್ಲೆ ಮತ್ತು ಜಿ. ಜನಾರ್ದನ ರೆಡ್ಡಿ ಅವರ ವಿರುದ್ಧ ತನಿಖೆ ಮತ್ತು ವಿಚಾರಣೆಗೆ ಅನುಮತಿ ಕೋರಿ ಲೋಕಾಯುಕ್ತವು ರಾಜ್ಯಪಾಲರಿಗೆ ಮನವಿ ಸಲ್ಲಿಸಿದೆ ಎಂಬ ಗೌಪ್ಯ ಮಾಹಿತಿ ರಾಜ್ಯ ಸರ್ಕಾರಕ್ಕೆ ಗೊತ್ತಾಗಿದ್ದಾದರೂ ಹೇಗೆ’ ಎಂದು ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಅವರು ರಾಜ್ಯ ಸರ್ಕಾರವನ್ನು ಪ್ರಶ್ನಿಸಿದ್ದಾರೆ.

ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಅವರಿಗೆ ಆಗಸ್ಟ್‌ 28ರಂದು ಪತ್ರ ಬರೆದಿರುವ ಪತ್ರದ ಪ್ರತಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ. 

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ರಾಜ್ಯಪಾಲರು ಅನುಮತಿ ನೀಡಿದ್ದನ್ನು, ಆಗಸ್ಟ್‌ 22ರಂದು ನಡೆದ ಸಂಪುಟ ಸಭೆಯ ಖಂಡಿಸಿತ್ತು. ಜತೆಗೆ ಮೇಲೆ ಉಲ್ಲೇಖಿಸಲಾದ ನಾಲ್ವರ ವಿರುದ್ಧ ತನಿಖೆ–ವಿಚಾರಣೆಗೆ ಅನುಮತಿ ನೀಡಬೇಕು ಎಂದೂ ಒತ್ತಾಯಿಸಿತ್ತು. 

‘ಈ ನಾಲ್ವರ ಪ್ರಕರಣಗಳಿಗೆ ಸಂಬಂಧಿಸಿದಂತೆ ಲೋಕಾಯುಕ್ತದಿಂದ ರಾಜಭವನಕ್ಕೆ ಸಲ್ಲಿಕೆಯಾಗಿರುವ ಮನವಿಗಳು ಮತ್ತು ಅವುಗಳ ದಿನಾಂಕಗಳನ್ನು ಸಂಪುಟ ಸಭೆಯ ನಿರ್ಣಯಗಳಲ್ಲಿ ಉಲ್ಲೇಖಿಸಲಾಗಿದೆ. ಈ ರಹಸ್ಯ ಮಾಹಿತಿ ರಾಜ್ಯ ಸರ್ಕಾರಕ್ಕೆ ಗೊತ್ತಾಗಿದ್ದಾದರೂ ಹೇಗೆ’ ಎಂದು ರಾಜ್ಯಪಾಲರು ಪ್ರಶ್ನಿಸಿದ್ದಾರೆ.

‘ಈ ದಾಖಲೆಗಳ ಪ್ರತಿಗಳು ಮಾಧ್ಯಮಗಳಲ್ಲೂ ಹರಿದಾಡುತ್ತಿರುವುದನ್ನು ನಾನು ನೋಡಿದ್ದೇನೆ. ಲೋಕಾಯುಕ್ತ ಪೊಲೀಸ್‌ ವಿಭಾಗವು ಒಂದು ಸ್ವತಂತ್ರ ಸಂಸ್ಥೆ. ಅನುಮತಿ ಕೋರಿ ರಾಜ್ಯಪಾಲರಿಗೆ ಸಲ್ಲಿಸಿದ ಮನವಿಯ ಮಾಹಿತಿಯ ಗೌಪ್ಯತೆಯನ್ನು ಅದು ಕಾಪಾಡಿಕೊಳ್ಳಬೇಕು. ಹೀಗಿರುವಾಗ ಆ ಮಾಹಿತಿಗಳನ್ನು ಸಂಬಂಧವೇ ಇಲ್ಲದವರೊಂದಿಗೆ ಹಂಚಿಕೊಂಡದ್ದು ಹೇಗೆ’ ಎಂದೂ ಪ್ರಶ್ನಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT