ಆಳಂದ: ‘ರಾಜಕೀಯ ಕ್ಷೇತ್ರದಲ್ಲಿ ಅಧಿಕಾರ, ಯಶಸ್ಸು ಮತ್ತು ಜನರ ಮೆಚ್ಚುಗೆ ಗಳಿಸಲು ನಿರಂತರ ಸಮಾಜ ಸೇವೆಗೈಯುವುದು ಮುಖ್ಯವಾಗಿದೆ’ ಎಂದು ಜಿಡಗಾ-ಮುಗಳಖೋಡ ಮಠದ ಪೀಠಾಧಿಪತಿ ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು.

ಪಟ್ಟಣದ ವಿವೇಕ ವರ್ಧಿನಿ ಪಬ್ಲಿಕ್ ಶಾಲೆಯ ಆವರಣದಲ್ಲಿ ಸಹಕಾರಿ ಹಾಲು ಒಕ್ಕೂಟದ ಅಧ್ಯಕ್ಷ ಆರ್.ಕೆ.ಪಾಟೀಲ ದಂಪತಿಯ 25ನೇ ವಿವಾಹ ವಾರ್ಷಿಕೋತ್ಸವ ನಿಮಿತ್ತ ಭಾನುವಾರ ಪಿಯು ಮತ್ತು ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಾಗೂ ಸಾಧನೆಗೈದ ಶಾಲೆಗಳ ಮುಖ್ಯಶಿಕ್ಷಕರಿಗೆ ಸನ್ಮಾನಿಸಿ ಅವರು ಮಾತನಾಡಿದರು.

‘ಶಾಸಕ ಬಿ.ಆರ್.ಪಾಟೀಲ ಅವರು ತತ್ವಸಿದ್ಧಾಂತವುಳ್ಳ ರಾಜಕಾರಣಿಗಳು, ಅವರ ದೂರದೃಷ್ಟಿಯಿಂದ ತಾಲ್ಲೂಕಿನಲ್ಲಿ ಅಭಿವೃದ್ಧಿ ಕಾರ್ಯಗಳು ಕೈಗೊಂಡಿದ್ದಾರೆ. ಅವರ ಸೇವಾ ಕಾರ್ಯ ಮುನ್ನಡೆಸುವ ಕ್ಷಮತೆಯು ಆರ್.ಕೆ.ಪಾಟೀಲ ಅವರು ಸಮರ್ಥವಾಗಿ ಕೈಗೊಳ್ಳುತ್ತಿದ್ದಾರೆ’ ಎಂದು ಹೇಳಿದರು.

ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಹಾಗೂ ಶಾಸಕ ಬಿ.ಆರ್.ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ನಮ್ಮ ಭಾಗದ ವಿದ್ಯಾರ್ಥಿಗಳು, ಯುವಕರು ಇಂದಿನ ಶೈಕ್ಷಣಿಕ ಸೌಲಭ್ಯಗಳು ಸದುಪಯೋಗ ಪಡೆದುಕೊಂಡರೆ ತಾಲ್ಲೂಕಿನ ಸರ್ವಾಂಗೀಣ ಪ್ರಗತಿ ಸಾಧ್ಯವಿದೆ’ ಎಂದು ನುಡಿದರು.

ಪ್ರಸಕ್ತ ಎಸ್ಎಸ್ಎಲ್ಸಿ ಮತ್ತು ಪಿಯು ದ್ವಿತೀಯ ಪರೀಕ್ಷೆಯಲ್ಲಿ ಶೇ 90ಕ್ಕೂ ಹೆಚ್ಚು ಅಂಕ ಪಡೆದ 120 ವಿದ್ಯಾರ್ಥಿಗಳಿಗೆ ಹಾಗೂ ಶೇ 85ರಷ್ಟು ಶಾಲಾ, ಕಾಲೇಜು ಫಲಿತಾಂಶ ಪಡೆದ ಶಾಲಾ ಮುಖ್ಯಶಿಕ್ಷಕರಿಗೆ ಸನ್ಮಾನಿಸಿ ಅಭಿನಂದಿಸಲಾಯಿತು.

ಇದೇ ಸಂದರ್ಭದಲ್ಲಿ ಆರ್.ಕೆ.ಪಾಟೀಲ ದಂಪತಿಗೆ ವಿವಿಧ ಮಠಾಧೀಶರು, ರಾಜಕೀಯ ನಾಯಕರು, ಅಭಿಮಾನಿಗಳು ಶುಭಕೋರಿದರು. ಸಂಗೀತ ಕಲಾವಿದರಿಂದ ಗಾಯನ ಕಾರ್ಯಕ್ರಮ ಜರುಗಿತು.

ಕಡಗಂಚಿಯ ವೀರಭದ್ರ ಶಿವಾಚಾರ್ಯರು, ಮಾಡಿಯಾಳದ ಮರುಳಸಿದ್ಧ ಸ್ವಾಮೀಜಿ, ಹಿರೇಮಠನ ಸಿದ್ದೇಶ್ವರ ಸ್ವಾಮೀಜಿ, ಕಿಣ್ಣಿಸುಲ್ತಾನದ ಶಾಂತಲಿಂಗ ಸ್ವಾಮೀಜಿ, ಹತ್ತಿಕಣಮಸನ ಪ್ರಭು ಶಾಂತವೀರ ಸ್ವಾಮೀಜಿ, ದೇವಾಪುರದ ಶಿವಮೂರ್ತಿ ಸ್ವಾಮೀಜಿ, ನಿಂಬರ್ಗಾ, ಹೊದಲೂರು, ಚಲಗೇರಾ ಮಠಗಳ ಮಠಾಧೀಶರು ಹಾಗೂ ಶಾಸಕ ಬಸವರಾಜ ಮತ್ತಿಮಡು, ಜಗದೇವ ಗುತ್ತೇದಾರ, ಸುಭಾಷ ರಾಠೋಡ, ನೀಲಕಂಠರಾವ ಮುಲಗೆ, ಬಸವರಾಜ ದೇಶಮುಖ, ಸುಧಾ ಹಾಲಕಾಯಿ, ಭಾರತಿಬಾಯಿ ಬಿ.ಪಾಟೀಲ, ಮಂಗಲಾಬಾಯಿ ಕೆ.ಪಾಟೀಲ, ಶರಣಕುಮಾರ ಮೋದಿ, ಶರಣು ಪಾಟೀಲ ಮೊತಕಪಲ್ಲಿ, ಸೋಮಶೇಖರ ಗೋನಾಯಕ, ರಾಜು ಭೀಮಳ್ಳಿ, ಮಜರ್ ಹುಸೇನ್, ರೇವಣಸಿದ್ದಪ್ಪ ಪಾಟೀಲ, ಗುರಶರಣ ಪಾಟೀಲ, ಸಿದ್ದರಾಮ ಪ್ಯಾಟಿ, ಗುರುಲಿಂಗಜಂಗಮ ಪಾಟೀಲ, ಶರಣಗೌಡ ಪಾಟೀಲ, ಸುಭಾಷ ಮುರುಡ, ಶಿವಪುತ್ರಪ್ಪ ಪಾಟೀಲ ಉಪಸ್ಥಿತರಿದ್ದರು. ನವಲಿಂಗ ಪಾಟೀಲ ಪಾಟೀಲ ನಿರೂಪಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260513-31-2036273235

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.