ಭಾನುವಾರ, 24 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ವೆ, ಪೋಡಿಗೆ ಪಂಚಾಯಿತಿಗಳಲ್ಲೇ ಅರ್ಜಿ

ಬಾಪೂಜಿ ಸೇವಾ ಕೇಂದ್ರಗಳಲ್ಲೇ ಅರ್ಜಿ ಸಲ್ಲಿಸಬಹುದು.
Published 24 ಆಗಸ್ಟ್ 2023, 20:59 IST
Last Updated 24 ಆಗಸ್ಟ್ 2023, 20:59 IST
ಅಕ್ಷರ ಗಾತ್ರ

ಬೆಂಗಳೂರು: ಗ್ರಾಮೀಣ ಜನರು ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆಗೆ ಸಂಬಂಧಿಸಿದ ಕಾರ್ಯಗಳಿಗೆ ಇನ್ನು ಮುಂದೆ ಆಯಾ ಗ್ರಾಮ ಪಂಚಾಯಿತಿಗಳ ಬಾಪೂಜಿ ಸೇವಾ ಕೇಂದ್ರಗಳಲ್ಲೇ ಅರ್ಜಿ ಸಲ್ಲಿಸಬಹುದು.

ಭೂ ಪರಿವರ್ತನೆ, ತತ್ಕಾಲ್‌ ಪೋಡಿ, ಹದ್ದುಬಸ್ತು, 11–ಇ ನಕ್ಷೆ ಸೇರಿದಂತೆ ಇಲಾಖೆ ಒದಗಿ
ಸುವ ಸೇವೆಗಳಿಗೆ ಅರ್ಜಿ ಸಲ್ಲಿಸಲು ಇದುವರೆಗೂ ಹೋಬಳಿಮಟ್ಟದ ನಾಡಕಚೇರಿ, ಇಲ್ಲವೇ ತಾಲ್ಲೂಕು ಕಚೇರಿಗಳಲ್ಲಿನ ಅಟಲ್‌ಜಿ ಜನಸ್ನೇಹಿ ಕೇಂದ್ರಗಳಿಗೆ ತೆರಳಬೇಕಿತ್ತು.  ಪ್ರತಿ ತಾಲ್ಲೂಕು ಸುಮಾರು 30ರಿಂದ 40 ಹಾಗೂ ಹೋಬಳಿಗಳು ಐದಾರು ಗ್ರಾಮ ಪಂಚಾಯಿತಿಗಳನ್ನು ಒಳಗೊಂಡಿದ್ದು, ಸಾವಿರಾರು ಜನರು ಸೇವೆ ಪಡೆಯಲು ಸರದಿಯಲ್ಲಿ ನಿಲ್ಲುವ ಸ್ಥಿತಿ ಇದೆ. ಬಾಪೂಜಿ ಕೇಂದ್ರಗಳಲ್ಲೇ ಅರ್ಜಿ ಸಲ್ಲಿಕೆಗೆ ಅವಕಾಶ ನೀಡುವುದರಿಂದ ಅನಗತ್ಯ ಅಲೆದಾಟ ತಪ್ಪಲಿದೆ. ಸಮಯ, ವೆಚ್ಚದ ಉಳಿತಾಯವಾಗಲಿದೆ ಎಂದು ಗ್ರಾಮೀಣಾಭಿವೃದ್ಧಿ ಇಲಾಖೆ ವಿವರಿಸಿದೆ.

11–ಇ ನಕ್ಷೆಗೆ ₹1,500, ಭೂ ಪರಿರ್ತನೆಗೆ ಎರಡು ಎಕರೆವರೆಗೂ ₹1,500 ನಂತರ ಪ್ರತಿ ಎಕರೆಗೆ ₹ 400 ಹಾಗೂ ಪೋಡಿಗೆ ₹ 400 (ಎರಡು ಎಕರೆವರೆಗೆ) ದರ ನಿಗದಿ ಮಾಡಲಾಗಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT