ಬೆಂಗಳೂರು: ಸಂವಿಧಾನದ ಪ್ರತಿ ಹಿಡಿದು ನಾಟಕ ಮಾಡುವ ರಾಹುಲ್ ಗಾಂಧಿ ಹಿಂಬಾಲಕರ ನಡೆ ಬೌದ್ಧಿಕ ಅವನತಿಗೆ ಸಾಕ್ಷಿ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ.

ಮರು ಮತ ಎಣಿಕೆಯಲ್ಲಿ ಶೃಂಗೇರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯ ಗೆಲುವಿನ ಬಗ್ಗೆ ಸಿದ್ದರಾಮಯ್ಯ ಅವರು ಓಟ್ ಚೋರಿ ಅಲ್ಲ, ಡಕಾಯಿತಿ ನಡೆದಿದೆ ಎಂದು ಹೇಳಿರುವ ‘ಪ್ರಜಾವಾಣಿ’ ವರದಿ ಹಂಚಿಕೊಂಡು ಅವರು ಟ್ವೀಟ್ ಮಾಡಿದ್ದಾರೆ.

ಸಿದ್ದರಾಮಯ್ಯ ಅವರೇ, ನ್ಯಾಯಾಲಯದ ಆದೇಶದಂತೆ ನಡೆದ ಪ್ರಕ್ರಿಯೆಯನ್ನ ಡಕಾಯಿತಿ ಎನ್ನುವ ನಿಮ್ಮದು ಬೌದ್ಧಿಕ, ನೈತಿಕ ಅವನತಿಗೆ ಸಾಕ್ಷಿ. ಕೈಯಲ್ಲಿ ಸಂವಿಧಾನದ ಪ್ರತಿಯನ್ನು ಹಿಡಿದು ನಾಟಕ ಮಾಡುವ ರಾಹುಲ್ ಗಾಂಧಿ ಅವರ ಹಿಂಬಾಲಕರಾದ ಸಿದ್ದರಾಮಯ್ಯನವರಿಗೆ ಸಂವಿಧಾನದ ಆಧಾರಸ್ತಂಭವಾದ ನ್ಯಾಯಾಂಗದ ಮೇಲೆ ನಂಬಿಕೆ ಇಲ್ಲದಿರುವುದು ದುರಂತ ಎಂದು ಛೇಡಿಸಿದ್ದಾರೆ.

ಹೈಕೋರ್ಟ್ ಆದೇಶದಂತೆ ನಡೆಯುವ ಪ್ರಕ್ರಿಯೆಯನ್ನು ಡಕಾಯಿತಿ ಎನ್ನುವುದು ನ್ಯಾಯಾಂಗಕ್ಕೆ ಮಾಡಿದ ಅಪಮಾನವಲ್ಲವೇ? ಮರುಎಣಿಕೆ ಎಂದ ಕೂಡಲೇ ಕಾಂಗ್ರೆಸ್ ಇಷ್ಟೊಂದು ಬೆದರುತ್ತಿರುವುದೇಕೆ? ಅಕ್ರಮ ಬಯಲಾಗುವ ಭಯ ಕಾಡುತ್ತಿದೆಯೇ? ಎಂದು ಪ್ರಶ್ನಿಸಿದ್ದಾರೆ.

ಕಾನೂನು ಪದವೀಧರರಾದ ನೀವು, ಕಾನೂನು ಪಾಲನೆಯನ್ನೇ ಡಕಾಯಿತು ಎನ್ನುತ್ತಿರುವುದು ನಿಮ್ಮ ನೈತಿಕ ದಿವಾಳಿತನ ತೋರಿಸುತ್ತದೆ. ಒಮ್ಮೆ ವೋಟ್ ಚೋರಿ ಎನ್ನುತ್ತೀರಿ. ಇನ್ನೊಮ್ಮೆ ಇವಿಎಂ ಹ್ಯಾಕಿಂಗ್ ಎನ್ನುತ್ತೀರಿ. ಈಗ ನ್ಯಾಯಾಲಯದ ಆದೇಶವನ್ನೇ ಡಕಾಯಿತಿ ಎನ್ನುತ್ತಿದ್ದೀರಿ. ನಿಮ್ಮ ಈ ಬಣ್ಣ ಬದಲಿಸುವ ಊಸರವಳ್ಳಿ ನಾಟಕವನ್ನು ಕರ್ನಾಟಕದ ಜನತೆ ಗಮನಿಸುತ್ತಿದ್ದಾರೆ. ನೆನಪಿರಲಿ, ಇದು ಡಕಾಯಿತಿ ಅಲ್ಲ. ನಿಮ್ಮ ಅಕ್ರಮಕ್ಕೆ ಹಿಡಿದ ಕನ್ನಡಿ ಎಂದು ತಿರುಗೇಟು ನೀಡಿದ್ದಾರೆ.

ದಮ್ಮಿದ್ದರೆ, ತಾಕತ್ತಿದ್ದರೆ ಮೈಕ್ ಮುಂದೆ ಗರ್ಜಿಸುವುದನ್ನು ಬಿಟ್ಟು ನ್ಯಾಯಾಲಯದಲ್ಲಿ ನಿಮ್ಮ ವಾದ ಮಂಡಿಸಿ ಎಂದು ಗುಡುಗಿದ್ದಾರೆ.

ಮರು ಮತ ಎಣಿಕೆಯಲ್ಲಿ ಕಾಂಗ್ರೆಸ್ನ ರಾಜೇಗೌಡ ವಿರುದ್ಧ ಬಿಜೆಪಿಯ ಡಿ.ಎನ್. ಜೀವರಾಜ್ ಗೆದ್ದಿರುವುದು ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.