ಔರಾದ್: ಮೂಲ ಸ್ಥಳ, ಜಾತಿ ಪ್ರಶ್ನಿಸಿ ಶಾಸಕ ಪ್ರಭು ಚವ್ಹಾಣ ಅವರ ವಿರುದ್ಧ ನರಸಿಂಗ ತುಕಾರಾಮ ಎಂಬುವರು ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಸುಪ್ರೀಂಕೋರ್ಟ್ ಮೇ 6ರಂದು ವಜಾಗೊಳಿಸಿದೆ.

ಈ ಹಿಂದೆ ನರಸಿಂಗ ಅವರು ಸಲ್ಲಿಸಿದ ತಕರಾರು ಅರ್ಜಿ ವಿಚಾರಣೆ ನಡೆಸಿದ್ದ ಕಲಬುರಗಿ ಹೈಕೋರ್ಟ್ 16 ಡಿಸೆಂಬರ್ 2025ರಂದು ಶಾಸಕ ಚವ್ಹಾಣ ಪರ ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ನರಸಿಂಗ ಅವರು ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ.

ವಿವಾದ ಹಿನ್ನೆಲೆ: ಶಾಸಕ ಪ್ರಭು ಚವ್ಹಾಣ 2008ರಲ್ಲಿ ಮೊದಲ ಬಾರಿಗೆ ಶಾಸಕರಾದ ನಂತರ ಅವರ ಜಾತಿ ಹಾಗೂ ಮೂಲ ಸ್ಥಾನದ ಬಗ್ಗೆ ವಿವಾದ ಹುಟ್ಟಿಕೊಂಡಿದೆ.

ಪ್ರಭು ಚವ್ಹಾಣ ಅವರು ಮಹಾರಾಷ್ಟ್ರ ಮೂಲದವರಾಗಿದ್ದು, ಮಹಾರಾಷ್ಟ್ರದಲ್ಲಿ ಲಂಬಾಣಿ ಸಮಾಜ ವಿಮುಕ್ತ ಜಾತಿ (ವಿಜೆ.ಎ) ಮೀಸಲಾತಿ ಹೊಂದಿದೆ. ಆದರೆ ಇವರು ಬೀದರ್ ಜಿಲ್ಲೆಯ ಬೋಂತಿ ತಾಂಡಾ ಮೂಲ ಎಂದು ರಹವಾಸಿ ಪತ್ರ ಪಡೆದು, ಕರ್ನಾಟಕದಲ್ಲಿ ಲಂಬಾಣಿ ಸಮಾಜ ಹೊಂದಿರುವ ಪಜಾ (ಎಸ್ಸಿ) ಮೀಸಲು ಪಡೆದು ಶಾಸಕರಾಗಿದ್ದಾರೆ. ಹೀಗಾಗಿ ಇವರ ಶಾಸಕತ್ವ ರದ್ದುಪಡಿಸಬೇಕು ಎಂದು ಕಾನೂನು ಹೋರಾಟ ಮಾಡಲಾಗಿತ್ತು.

‘ಕೊನೆಗೂ ಸತ್ಯಕ್ಕೆ ಜಯವಾಗಿದೆ’: ‘ನಾನು ಔರಾದ್ನ ಬೊಂತಿ ತಾಂಡಾದಲ್ಲೇ ಹುಟ್ಟಿ ಬೆಳೆದ್ದೇನೆ. ಸೌಲಭ್ಯ ಇಲ್ಲದ ಕಾರಣ ಶಿಕ್ಷಣ ಹಾಗೂ ಉದ್ಯೋಗ ಅರಸಿ ಮಹಾರಾಷ್ಟ್ರಕ್ಕೆ ಹೋದೆ. ಆದರೆ ವಿರೋಧಿಗಳು ಇದನ್ನೇ ಅಸ್ತ್ರ ಮಾಡಿಕೊಂಡು ನನಗೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಶಾಸಕ ಪ್ರಭು ಚವ್ಹಾಣ ಹೇಳಿದರು.

‘ಈ ವಿವಾದಲ್ಲಿ ಹೈಕೋರ್ಟ್ ಎರಡು ಸಲ ನನ್ನ ಪರವಾಗಿ ತೀರ್ಪು ನೀಡಿದೆ. ಇದೀಗ ಸುಪ್ರೀಂಕೋರ್ಟ್ ಸಹ ಮತ್ತೊಮ್ಮೆ ನನ್ನ ವಿರುದ್ಧದ ಅರ್ಜಿ ವಜಾಗೊಳಿಸಿದೆ. ಕೊನೆಗೂ ಸತ್ಯಕ್ಕೆ ಜಯವಾಗಿದೆ’ ಎಂದು ಹೇಳಿಕೆ ನೀಡಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260522-33-1968753510

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.