ಬೆಂಗಳೂರು: ರಾಜ್ಯದಲ್ಲಿ ಜಾರಿಯಲ್ಲಿರುವ ‘ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನಾರೋಗ್ಯ ಯೋಜನೆ–ಮುಖ್ಯಮಂತ್ರಿಯವರ ಆರೋಗ್ಯ ಕರ್ನಾಟಕ ಯೋಜನೆಯಡಿ’ ರೂಟ್ ಕೆನಾಲ್ ಚಿಕಿತ್ಸೆಯನ್ನು ಸೇರ್ಪಡೆ ಮಾಡಲಾಗಿದೆ.

ಈ ಬಗ್ಗೆ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ. ರೂಟ್ ಕೆನಾಲ್ ಚಿಕಿತ್ಸೆಯು ಹುಳುಕು ಹಲ್ಲು ಅಥವಾ ಸೋಂಕಿನಿಂದ ಹಾನಿಗೊಳಗಾದ ಹಲ್ಲನ್ನು ಉಳಿಸಲು ಬಳಸುವ ಅತ್ಯಂತ ಪರಿಣಾಮಕಾರಿ ವಿಧಾನವಾಗಿದೆ. ಬಾಯಿಯ ಆರೋಗ್ಯ ಸುಧಾರಣೆಗೆ ಇದು ಸಹಕಾರಿಯಾಗಿದೆ. ಅಧಿಕ ಚಿಕಿತ್ಸಾ ವೆಚ್ಚ ಮತ್ತು ಜಾಗೃತಿ ಕೊರತೆಯಿಂದಾಗಿ ಹೆಚ್ಚಿನ ಜನರು ರೂಟ್ ಕೆನಾಲ್ ಬದಲಿಗೆ, ದಂತ ತೆಗೆಯುವ ವಿಧಾನವನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಆದ್ದರಿಂದ ಈ ಚಿಕಿತ್ಸೆಯನ್ನು ಯೋಜನೆಯಡಿ ಸೇರ್ಪಡೆ ಮಾಡಲಾಗಿದೆ.

ಯೋಜನೆಯಡಿ ಮುಂಭಾಗದ ಮತ್ತು ಹಿಂಭಾಗದ ಹಲ್ಲುಗಳಿಗೆ ರೂಟ್ ಕೆನಾಲ್ ಚಿಕಿತ್ಸೆ ಒದಗಿಸಲಾಗುತ್ತದೆ. ಇವುಗಳನ್ನು ಸಂಕೀರ್ಣ ದ್ವಿತೀಯ ಕಾರ್ಯವಿಧಾನಗಳು (2ಬಿ) ಎಂದು ವರ್ಗೀಕರಿಸಲಾಗಿದೆ. ಚಿಕಿತ್ಸೆಗೆ ಕೇಂದ್ರ ಸರ್ಕಾರದ ಆರೋಗ್ಯ ಯೋಜನೆಯ (ಸಿಜಿಎಚ್ಎಸ್) ದರಗಳನ್ನು ಅಳವಡಿಸಿಕೊಳ್ಳಲು ನಿರ್ದೇಶಿಸಲಾಗಿದೆ. ಅದರಂತೆ, ಮುಂಭಾಗದ ಹಲ್ಲುಗಳಿಗೆ ₹1,360 ಮತ್ತು ಹಿಂಭಾಗದ ಹಲ್ಲುಗಳಿಗೆ ₹2,040 ನಿಗದಿಪಡಿಸಲಾಗಿದೆ.

ಯೋಜನೆಯಡಿ ಬಿಪಿಎಲ್ ಹಾಗೂ ಎಪಿಎಲ್ ಕುಟುಂಬದ ಸದಸ್ಯರು ಪ್ರಯೋಜನ ಪಡೆಯಬಹುದಾಗಿದೆ. ಯೋಜನೆಯ ಸೌಲಭ್ಯವನ್ನು ಸರ್ಕಾರವು 50 ಸಾವಿರ ಪ್ರಕರಣಗಳಿಗೆ ಅಥವಾ 5 ಕೋಟಿ ಆರ್ಥಿಕ ವೆಚ್ಚಕ್ಕೆ ಮಿತಿಗೊಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.