ಉಪ ಚುನಾವಣೆ ನಡೆಯುತ್ತಿರುವ ದಾವಣಗೆರೆ ದಕ್ಷಿಣ, ಬಾಗಲಕೋಟೆ ಕ್ಷೇತ್ರದಲ್ಲಿ ಸೋಮವಾರ ಪ್ರಮುಖಪಕ್ಷಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಸಿದ್ದು, ಚುನಾವಣೆ ಕಣ ರಂಗೇರಿದೆ. ಪಕ್ಷಗಳ ಮುಖಂಡರು ಪರಸ್ಪರರ ವಿರುದ್ಧ ವಾಗ್ದಾಳಿ ನಡೆಸುವ ಮೂಲಕ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ

ಅಪಪ್ರಚಾರಕ್ಕೆ ಬಿಜೆಪಿ ನಿಸ್ಸೀಮ: ಸಿದ್ದರಾಮಯ್ಯ

ಬಾಗಲಕೋಟೆ: ‘ಸುಳ್ಳೇ ಬಿಜೆಪಿಯವರ ಮನೆ ದೇವರು. ಅವರೆಲ್ಲ ಬುರುಡೆ ದಾಸರು. ಅಪಪ್ರಚಾರ ಮಾಡುವುದರಲ್ಲಿ ನಿಸ್ಸೀಮರು. 2018ರ ಪ್ರಣಾಳಿಕೆಯಲ್ಲಿ
ನೀಡಿದ 600ರಲ್ಲಿ ಶೇ 10ರಷ್ಟು ಭರವಸೆಯನ್ನು ಅವರು ಈಡೇರಿಸಲಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಬಾಗಲಕೋಟೆ ಕ್ಷೇತ್ರದ ಉಪಚುನಾವಣೆಗೆ ಸೋಮವಾರ ಪಕ್ಷದ ಅಭ್ಯರ್ಥಿ ಉಮೇಶ ಮೇಟಿ ಅವರ ನಾಮಪತ್ರ ಸಲ್ಲಿಸಿದ ಬಳಿಕ ನಡೆದ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.

‘ತಬ್ಬಲಿ ಮಗ ಉಮೇಶ ಮೇಟಿ ಅವರನ್ನು ನಿಮ್ಮ ಜೋಳಿಗೆಗೆ ಹಾಕಿದ್ದೇವೆ. ಅವರ ಗೆಲುವು ನಿಮ್ಮ ಜವಾಬ್ದಾರಿ’ ಎಂದರು. ‘ಬಿಜೆಪಿಯವರು ಹಿಂದೂಗಳ ವಾರಸುದಾರರು ಎನ್ನುತ್ತಾರೆ. ನಾವು, ಮೇಟಿ ಹಿಂದೂಗಳಲ್ಲವಾ? ಬಿಜೆಪಿಯವರು ತೋರಿಕೆಗೆ ಮಾತ್ರ ಹೇಳಿಕೆ ನೀಡುತ್ತಾರೆ’ ಎಂದು ವಾಗ್ದಾಳಿ ನಡೆಸಿದರು.

‘ಮಹಿಳೆಯರಿಗೆ, ದಲಿತರಿಗೆ, ಅಲ್ಪ ಸಂಖ್ಯಾತರಿಗೆ ಶಕ್ತಿ ತುಂಬುವ ಕೆಲಸ ಮಾಡಿದ್ದೇವೆ. ಬಿಜೆಪಿಯವರು ಗ್ಯಾರಂಟಿ ಲಾಭ ಪಡೆಯುತ್ತಿಲ್ಲವೇ? ಎಲ್ಲರಿಗೂ ಸಾಮಾಜಿಕ ನ್ಯಾಯಒದಗಿಸಿರುವುದು ಕಾಂಗ್ರೆಸ್ ಮಾತ್ರ’ ಎಂದರು.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ‘ಇದು ಧರ್ಮ, ಅಧರ್ಮ ಹಾಗೂ ಸತ್ಯ, ಸುಳ್ಳಿನ ನಡುವೆ ನಡೆಯುವ ಚುನಾವಣೆ.
ಬಿಜೆಪಿಯವರದ್ದು ಬರೀ ಸುಳ್ಳು, ನಾವು ನುಡಿದಂತೆ ನಡೆದಿದ್ದೇವೆ’ ಎಂದರು.

ಸಚಿವ ಎಂ.ಬಿ. ಪಾಟೀಲ ಮಾತನಾಡಿ, ಗ್ಯಾರಂಟಿ ಯೋಜನೆಗಳ ಮೂಲಕ ನುಡಿದಂತೆ ನಡೆದಿದ್ದೇವೆ. ಮೇಟಿ ಅವರ ಪುತ್ರನಿಗೆ ಬೆಂಬಲಿಸಬೇಕು ಎಂದು ಮನವಿ ಮಾಡಿದರು.

ಸಚಿವರಾದ ಸತೀಶ ಜಾರಕಿಹೊಳಿ, ಶಿವಾನಂದ ಪಾಟೀಲ, ಆರ್.ಬಿ. ತಿಮ್ಮಾಪುರ ಇದ್ದರು. ಇದಕ್ಕೂ ಉಮೇಶ ಮೇಟಿ ಅವರ ನೇತೃತ್ವದಲ್ಲಿ ಕಾರ್ಯಕರ್ತರು ಮತ್ತು ಬೆಂಬಲಿಗರ ಮೆರವಣಿಗೆ ನಡೆಯಿತು.

ಹಣಕ್ಕೆ ಮರುಳಾಗಬೇಡಿ: ವಿಜಯೇಂದ್ರ

ಬಾಗಲಕೋಟೆ: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿ ಸಚಿವ ಸಂಪುಟದ ಸದಸ್ಯರೆಲ್ಲ ಇಲ್ಲಿಯೇ ಇರುತ್ತಾರೆ. ಗೋಣಿಚೀಲದಲ್ಲಿ ಹಣ ತರುತ್ತಾರೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

ಬಾಗಲಕೋಟೆ ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರು ಸೋಮವಾರ ನಾಮಪತ್ರ ಸಲ್ಲಿಸಿದ ಬಳಿಕ ನಡೆದ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು. ‘ಈ ಹಿಂದೆ ಶಿರಾ, ಕೆ.ಆರ್.ಪೇಟೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಮುಖಂಡರು ಮಾಡಿದ ತಂತ್ರ, ಕುತಂತ್ರ ನೋಡಿದ್ದೇನೆ. ವಾಲ್ಮೀಕಿ ಅಭಿವೃದ್ಧಿ ನಿಗಮ, ಎಸ್ಸಿಪಿಟಿಎಸ್ಪಿ ಲೂಟಿ ಮಾಡಿದ ಹಣ ತರುತ್ತಾರೆ. ಅದಕ್ಕೆ ಮರುಳಾಗಬೇಡಿ’ ಎಂದರು.

‘ಇದು ಭ್ರಷ್ಟ ಸರ್ಕಾರ. ರಾಜ್ಯ ಸರ್ಕಾರದ ಆಡಳಿತದಿಂದ ಜನ ಬೇಸತ್ತಿದ್ದು ಬಿಜೆಪಿ ಬೆಂಬಲಿಸುವರು. 2028ರ ಚುನಾವಣೆಗೆ ಈ ಉಪಚುನಾವಣೆ ಫಲಿತಾಂಶಗಳು ದಿಕ್ಸೂಚಿಯಾಗಲಿವೆ’ ಎಂದರು.

ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಾತನಾಡಿ, ‘ಬಾಗಲಕೋಟೆಯಲ್ಲಿ ಮಗ, ದಾವಣಗೆರೆಯಲ್ಲಿ ಮೊಮ್ಮಗ ಮನೆಗೆ ಹೋಗಲಿದ್ದಾರೆ. ಪಕ್ಷದ ನಾಯಕರೆಲ್ಲ ಈ ಬಾರಿ ಒಗ್ಗಟ್ಟಿನಿಂದ ಗೆಲುವು ಸಾಧಿಸಲಿದ್ದೇವೆ’ ಎಂದರು.

ಇದಕ್ಕೂ ಮೊದಲು ಬೃಹತ್ ಮೆರವಣಿಗೆ ನಡೆಯಿತು. ಅಭ್ಯರ್ಥಿ ವೀರಣ್ಣ ಚರಂತಿಮಠ ಅವರೊಂದಿಗೆ ಬಿ.ವೈ.ವಿಜಯೇಂದ್ರ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಸಂಸದರಾದ ಜಗದೀಶ ಶೆಟ್ಟರ್, ಪಿ.ಸಿ. ಗದ್ದಿಗೌಡರ, ಗೋವಿಂದ ಕಾರಜೋಳ ಮತ್ತಿತರರು ಪಾಲ್ಗೊಂಡಿದ್ದರು.

ಪಕ್ಷಕ್ಕೆ ದುಡಿದವರು ಅವಕಾಶ ಕೇಳುವುದು ತಪ್ಪಲ್ಲ. ಗೆಲುವಿನ ಮಾನದಂಡ ಆಧರಿಸಿ ಟಿಕೆಟ್ ನೀಡಲಾಗಿದೆ. ಮುಸ್ಲಿಂ ನಾಯಕರ ಮನವೊಲಿಸುತ್ತೇವೆ
ಡಿ.ಕೆ. ಶಿವಕುಮಾರ್, ಉಪ ಮುಖ್ಯಮಂತ್ರಿ

ಎರಡೂ ಕ್ಷೇತ್ರಗಳಲ್ಲಿ ಬಿಜೆಪಿಗೆ ಪೂರಕ ವಾತಾವರಣವಿದೆ. ಈ ಸರ್ಕಾರದ ಬಗ್ಗೆ ಜನ ಬೇಸತ್ತಿದ್ದಾರೆ. ‘ಕೈ’ ಆಡಳಿತದ ಅಂತ್ಯಕ್ಕೆ ಈ ಚುನಾವಣೆ ನಾಂದಿ ಹಾಡಲಿದೆ
ಬಿ.ಎಸ್.ಯಡಿಯೂರಪ್ಪ, ಬಿಜೆಪಿ ಸಂಸದೀಯ ಮಂಡಳಿ ಸದಸ್ಯ

ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಫಲಿತಾಂಶವು 2028ರ ವಿಧಾನಸಭೆಯ ಸಾರ್ವತ್ರಿಕ ಚುನಾವಣೆಗೆ ದಿಕ್ಸೂಚಿ ಆಗಲಿದೆ
ಸಿದ್ದರಾಮಯ್ಯ, ಮುಖ್ಯಮಂತ್ರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.