ಬಾಗಲಕೋಟೆ: ‘ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ನಡೆದ ಭ್ರಷ್ಟಾಚಾರದ ಪರಿಣಾಮವೇ ಮುಖ್ಯ ಎಂಜಿನಿಯರ್ ಅಮಾನತಾದರು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಹೇಳಿದರು.

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಡಿಮೆ ಭೂಮಿ ಕಳೆದುಕೊಂಡು ಹೆಚ್ಚು ಭೂಮಿಯನ್ನು ವೀರಣ್ಣ ಚರಂತಿಮಠರು ಪಡೆದಿದ್ದಾರೆ. ಇದು ಭ್ರಷ್ಟಾಚಾರ ಅಲ್ಲವೇ?’ ಎಂದು ಪ್ರಶ್ನಿಸಿದರು.

ಗೋವಿಂದ ಕಾರಜೋಳ ಅವರು ಆಲಮಟ್ಟಿ ಹಿನ್ನೀರಿನಲ್ಲಿ ಮುಳುಗಡೆಯಾಗಲಿದೆ ಎಂದು ಗೊತ್ತಿರುವ ಭೂಮಿಯನ್ನು ಬಾಗಲಕೋಟೆಯಲ್ಲಿ ಖರೀದಿಸುತ್ತಾರೆ. ಮುಂದೆ ಅದನ್ನು ಬಿಟಿಡಿಎ ಭೂಸ್ವಾಧೀನ ಮಾಡಿಕೊಂಡು ಪರಿಹಾರ ನೀಡುತ್ತದೆ. ಪರಿಹಾರ ಕಡಿಮೆಯಾಗಿದೆ ಎಂದು ನ್ಯಾಯಾಲಯಕ್ಕೆ ಹೋಗಿದ್ದರು. ನ್ಯಾಯಾಲಯದಲ್ಲಿ ಪ್ರತಿ ಸ್ಕ್ವಾಯರ್ ಮೀಟರ್ಗೆ ₹17 ಸಾವಿರ ಆಗಿದೆ’ ಎಂದರು.

‘ಗೋವಿಂದ ಕಾರಜೋಳ, ವೀರಣ್ಣ ಚರಂತಿಮಠ ಬಾಗಲಕೋಟೆ ಅಭಿವೃದ್ಧಿಗೆ ಹಿನ್ನಡೆಯುಂಟು ಮಾಡಿದ್ದಾರೆ. ಜಿಲ್ಲೆಯಲ್ಲಿ ಒಂದು ಕಡೆ ಇದ್ದರೆ, ಇವರಿಬ್ಬರೇ ಒಂದು ಕಡೆ ಇದ್ದಾರೆ. ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರಕ್ಕೆ ₹630 ಕೋಟಿ ಅನುದಾನ ತಂದ್ದಿದ್ದೆವು. ಗೇಟ್ ಹಾಕಿ ನೀರು ನಿಲ್ಲಿಸಿದ್ದೂ ನಾವೇ. ಅದು ಕಾಂಗ್ರೆಸ್ ಬದ್ಧತೆ’ ಎಂದು ಹೇಳಿದರು.

‘ಬಾಗಲಕೋಟೆಯನ್ನು ಚಂಢೀಗಡ ಮಾದರಿಯಲ್ಲಿ ಅಭಿವೃದ್ಧಿ ಪಡಿಸಿದ್ದು ನಾವು. ಆದರೆ, ಅದನ್ನು ಅವರು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಭೂಮಿ ಕಳೆದುಕೊಳ್ಳುವ ರೈತರಿಗೆ ₹3 ಸಾವಿರ ಕೋಟಿ ಅನುದಾನ ತೆಗೆದಿರಿಸಲಾಗಿದೆ. ಪರಿಹಾರ ವಿತರಣೆ ಮಾಡಲಾಗುತ್ತಿದೆ’ ಎಂದರು.

‘ಮುಳುಗಡೆಯಾಗುವ ಭೂಮಿಗೆ ₹20 ಲಕ್ಷ ಹಾಗೂ ₹24 ನಿಗದಿ ಮಾಡಿ ರೈತರಿಗೆ ಅನ್ಯಾಯ ಮಾಡಲಾಗಿತ್ತು. ಅದನ್ನು ನಮ್ಮ ಸರ್ಕಾರ ₹30 ಲಕ್ಷ ಹಾಗೂ ₹40 ಲಕ್ಷಕ್ಕೆ ಹೆಚ್ಚು ಮಾಡಿದೆ. ನಾಟಕ ಮಾಡಿಕೊಂಡೇ ಬಂದಿದ್ದಾರೆ’ ಎಂದು ಟೀಕಿಸಿದರು.

‘ಕಾಲೇಜಿಗೆ ಮತ ಕೇಳಲು ಹೋದ ಯುವಕರ ಮೇಲೆ ಹಲ್ಲೆ ಮಾಡಲಾಗಿದೆ. ಪ್ರಜಾಪ್ರಭುತ್ವ ಹರಣ ಮಾಡಲಾಗುತ್ತಿದೆ. ಕೋಮು ಗಲಭೆಯಿಂದಾಗ ಹೂಡಿಕೆದಾರರು ಬಾಗಲಕೋಟೆಗೆ ಬರುತ್ತಿಲ್ಲ. ವ್ಯಾಪಾರ ಕುಸಿದಿದೆ. ಅಭಿವೃದ್ಧಿಗೆ ಕಾಂಗ್ರೆಸ್ ಬದ್ಧವಾಗಿದೆ’ ಎಂದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260406-20-2091166097

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.