ಒಪ್ಪಂದ 117, ಅನುಷ್ಠಾನ 6

ರಾಜ್ಯದಲ್ಲಿ ಮೂರು ವರ್ಷಗಳ ಅವಧಿಯಲ್ಲಿ ಒಟ್ಟು ₹6.70 ಲಕ್ಷ ಮೊತ್ತದ 117 ಹೂಡಿಕೆಗಳ ಒಪ್ಪಂದಗಳನ್ನು ಮಾಡಿಕೊಳ್ಳಲಾಗಿದೆ. ಈ ಯೋಜನೆಗಳಿಂದ ಒಟ್ಟು 2.47 ಲಕ್ಷ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ನಿರೀಕ್ಷಿಸಲಾಗಿದೆ. ಈ ಪೈಕಿ ₹79,907 ಕೋಟಿ ಮೊತ್ತದ 57 ಯೋಜನೆಗಳಿಗೆ ಅನುಮೋದನೆ ನೀಡಲಾಗಿದ್ದು, ಅನುಷ್ಠಾನದ ಹಂತದಲ್ಲಿವೆ. ಇದರಲ್ಲಿ ₹6,900 ಕೋಟಿ ಮೊತ್ತದ ಆರು ಯೋಜನೆಗಳು ಅನುಷ್ಠಾನವಾಗಿದ್ದು, 6,654 ಉದ್ಯೋಗ ಸೃಷ್ಟಿಯಾಗಿದೆ.

ಉತ್ತರ: ಎಂ.ಬಿ.ಪಾಟೀಲ, ಬೃಹತ್ ಕೈಗಾರಿಕಾ ಸಚಿವ. ಪ್ರಶ್ನೆ: ಸಿ.ಟಿ.ರವಿ, ಬಿಜೆಪಿ

ಬಳ್ಳಾರಿ ವಿಮಾನ ನಿಲ್ದಾಣ: ಚರ್ಚಿಸಿ ನಿರ್ಧಾರ

ಬಳ್ಳಾರಿ ವಿಮಾನ ನಿಲ್ದಾಣ ನಿರ್ಮಾಣದ ಗುತ್ತಿಗೆ ಪಡೆದ ಕಂಪನಿ ಹಲವು ವರ್ಷಗಳ ನಂತರವೂ ಕಾಮಗಾರಿ ಆರಂಭಿಸಿರಲಿಲ್ಲ. ಹೀಗಾಗಿ ಗುತ್ತಿಗೆ ರದ್ದುಪಡಿಸಲಾಗಿದೆ. ಯೋಜನೆ ಅನುಷ್ಠಾನದ ಸಂಬಂಧ ಹೊಸದಾಗಿ, ವಿಸ್ತೃತ ಯೋಜನಾ ವರದಿ ಸಿದ್ಧಪಡಿಸುವ ಕಾರ್ಯ ಪ್ರಗತಿಯಲ್ಲಿದೆ. ಆದರೆ ವಿಜಯನಗರ ಮತ್ತು ಕೊಪ್ಪಳದಲ್ಲೂ ವಿಮಾನ ನಿಲ್ದಾಣ ಬೇಕು ಎಂಬ ಬೇಡಿಕೆ ಇದೆ. ಮೂರೂ ಜಿಲ್ಲೆಗಳ ಜನಪ್ರತಿನಿಧಿಗಳ ಜತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚರ್ಚೆ ನಡೆಸಲಿದ್ದಾರೆ.

ಉತ್ತರ: ಎಂ.ಬಿ.ಪಾಟೀಲ, ಬೃಹತ್ ಕೈಗಾರಿಕಾ ಸಚಿವ. ಪ್ರಶ್ನೆ: ವೈ.ಎಂ.ಸತೀಶ್, ಬಿಜೆಪಿ

ಜವಳಿ ಪಾರ್ಕ್ಗೆ ಕೇಂದ್ರವು ಜಮೀನು ನೀಡಲಿ

ಸಿಂಧನೂರಿನಲ್ಲಿ ಜವಳಿ ಪಾರ್ಕ್ ನಿರ್ಮಾಣಕ್ಕೆ 15 ಎಕರೆ ಜಮೀನು ಬೇಕಾಗಿದೆ. ಉದ್ದೇಶಿತ ಸ್ಥಳದಲ್ಲಿ ಒಂದೇ ಕಡೆ 15 ಎಕರೆ ಸರ್ಕಾರಿ ಜಮೀನು ಲಭ್ಯವಿಲ್ಲ. ಕೇಂದ್ರ ಸರ್ಕಾರಿ ಸ್ವಾಮ್ಯದ ಸಿಎಸ್ಎಫ್ ಬಳಿ 7,500 ಎಕರೆ ಇದೆ. ಸಿಎಸ್ಎಫ್ನ ಜಮೀನಿನಲ್ಲೇ 15 ಎಕರೆ ಒದಗಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸುವ ಬಗ್ಗೆ ಪರಿಶೀಲನೆ ನಡೆಸುತ್ತಿದ್ದೇವೆ. ಕೇಂದ್ರವು ಜಮೀನು ಒದಗಿಸಿದರೆ, ತಕ್ಷಣವೇ ಜವಳಿ ಪಾರ್ಕ್ ಕಾಮಗಾರಿ ಆರಂಭಿಸುತ್ತೇವೆ.

ಉತ್ತರ: ಶಿವಾನಂದ ಪಾಟೀಲ, ಜವಳಿ ಸಚಿವ. ಪ್ರಶ್ನೆ: ಬಸನಗೌಡ ಬಾದರ್ಲಿ, ಕಾಂಗ್ರೆಸ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.