ಬೆಂಗಳೂರು: ನಗರದಲ್ಲಿ ಬೇಸಿಗೆ ಧಗೆಯು ಈ ಬಾರಿ ರಕ್ತದಾನ ಶಿಬಿರಗಳಿಗೂ ತಟ್ಟಿದ್ದು, ದಾನಿಗಳ ಕೊರತೆಯಿಂದಾಗಿ ಅಗತ್ಯ ಪ್ರಮಾಣದಲ್ಲಿ ರಕ್ತ ಹೊಂದಿಸಲು ರಕ್ತ ನಿಧಿ ಕೇಂದ್ರಗಳು ಪರದಾಡುತ್ತಿವೆ.

ಶಾಲಾ–ಕಾಲೇಜುಗಳಿಗೆ ರಜೆ ಇರುವುದರಿಂದ, ಐಟಿ–ಬಿಟಿ ಕಂಪನಿಗಳು ಹೈಬ್ರಿಡ್ ಮಾದರಿಯಲ್ಲಿ (ವಾರದಲ್ಲಿ ಕೆಲ ದಿನ ಮನೆಯಿಂದಲೇ ಕಚೇರಿ ಕೆಲಸ) ಕಾರ್ಯನಿರ್ವಹಿಸುತ್ತಿರುವುದರಿಂದ ರಕ್ತದಾನ ಶಿಬಿರಗಳಿಗೆ ಹಿನ್ನಡೆಯಾಗಿದೆ. ವಾತಾವರಣದಲ್ಲಿ ಉಷ್ಣಾಂಶ ಹೆಚ್ಚಳ ವಾದ ಕಾರಣದಿಂದಲೂ ದಾನಿಗಳು ರಕ್ತದಾನಕ್ಕೆ ಆಸಕ್ತಿ ತೋರುತ್ತಿಲ್ಲ. ನಗರದ ಕೆಲವೆಡೆ ನಡೆಯುತ್ತಿರುವ ರಕ್ತ
ದಾನ ಶಿಬಿರಗಳಿಗೂ ಸ್ವಯಂಪ್ರೇರಿತರಾಗಿ ರಕ್ತ ನೀಡಲು ಜನರು ಬರುತ್ತಿಲ್ಲ. ಇದರಿಂದಾಗಿ ರಕ್ತದ ಬೇಡಿಕೆ ಮತ್ತು ಪೂರೈಕೆ ನಡುವೆ ಶೇ 50ರಷ್ಟು ವ್ಯತ್ಯಾಸ ಉಂಟಾಗಿದೆ.

ನಗರದಲ್ಲಿ ಈ ಬಾರಿ ವಾತಾವರಣದಲ್ಲಿ ಉಷ್ಣಾಂಶ ಹೆಚ್ಚಳವಾಗುತ್ತಿದ್ದು, ಮಧ್ಯಾಹ್ನದ ಅವಧಿಯಲ್ಲಿ ಹೊರಗಡೆ ಓಡಾಟ ಕಷ್ಟಸಾಧ್ಯವಾಗುತ್ತಿದೆ. ಕಳೆದ ತಿಂಗಳು ಬಹುತೇಕ ದಿನಗಳು ಗರಿಷ್ಠ ಉಷ್ಣಾಂಶ 36 ಡಿಗ್ರಿ ಸೆಲ್ಸಿಯಸ್ನಷ್ಟಿತ್ತು. ಸಾಮಾನ್ಯಕ್ಕಿಂತ ಎರಡರಿಂದ ಮೂರು ಡಿಗ್ರಿ ಸೆಲ್ಸಿಯಸ್ನಷ್ಟು ಹೆಚ್ಚು ವರದಿಯಾಗುತ್ತು. ಈ ತಿಂಗಳು ನಗರದ ಕೆಲವೆಡೆ ಮಳೆಯಾದ ಕಾರಣ, ಗರಿಷ್ಠ ಉಷ್ಣಾಂಶ ವಾರದಿಂದ 34 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲಿದೆ. ಮಧ್ಯಾಹ್ನದ ಅವಧಿಯಲ್ಲಿ ಅತಿಯಾದ ಬಿಸಿಲಿನಿಂದಾಗಿ ಮಕ್ಕಳು ಸೇರಿ ವಿವಿಧ ವಯೋಮಾನದವರಿಗೆ ನಿರ್ಜಲೀಕರಣದಂತಹ ಸಮಸ್ಯೆಗಳೂ ಕಾಣಿಸಿಕೊಳ್ಳುತ್ತಿವೆ. ಇದರಿಂದಾಗಿ ಜನರು ರಕ್ತನಿಧಿ ಕೇಂದ್ರಗಳ ಮನವಿಗಳನ್ನು ತಿರಸ್ಕರಿಸುತ್ತಿದ್ದಾರೆ.

ಪೂರೈಕೆಯಲ್ಲಿ ವ್ಯತ್ಯಯ: ಐಟಿ–ಬಿಟಿ ಕಂಪನಿಗಳು ಸಹ ರಕ್ತದಾನ
ಶಿಬಿರಗಳನ್ನು ನಡೆಸಲು ಆಸಕ್ತಿ ತೋರದ ಕಾರಣ, ರಕ್ತನಿಧಿ ಕೇಂದ್ರಗಳಿಂದ ಆಸ್ಪತ್ರೆಗಳಿಗೆ ಪೂರೈಕೆಯಾಗುತ್ತಿದ್ದ ರಕ್ತದಲ್ಲಿಯೂ ವ್ಯತ್ಯಯವಾಗುತ್ತಿದೆ. ಪ್ರಮುಖ ರಕ್ತ ನಿಧಿ ಸಂಸ್ಥೆಯಾದ ಭಾರತೀಯ ರೆಡ್ ಕ್ರಾಸ್ ಸೊಸೈಟಿ ನಗರದ ವಿವಿಧ ಆಸ್ಪತ್ರೆಗಳಿಗೆ ರಕ್ತ ಪೂರೈಕೆ ಮಾಡುತ್ತಿದೆ. ಕೆಲ ದಿನಗಳಿಂದ ನಿರೀಕ್ಷಿತ ಪ್ರಮಾಣದಲ್ಲಿ ರಕ್ತ ಸಂಗ್ರಹವಾಗದಿದ್ದರಿಂದ, ಲಭ್ಯತೆಯ ಆಧಾರದಲ್ಲಿ ಕೇಂದ್ರವು ಆಸ್ಪತ್ರೆಗಳಿಗೆ ರಕ್ತವನ್ನು ಒದಗಿಸುತ್ತಿದೆ. ಪ್ರತಿ ತಿಂಗಳು 3 ಸಾವಿರ ಯೂನಿಟ್ವರೆಗೂ ರಕ್ತವನ್ನು ಸಂಗ್ರಹಿಸುತ್ತಿದ್ದ ಕೇಂದ್ರ, ಕಳೆದ ತಿಂಗಳು 2.5 ಸಾವಿರ ಯೂನಿಟ್ ರಕ್ತವನ್ನು ಸಂಗ್ರಹಿಸಿದೆ. ಈ ತಿಂಗಳ ಮೊದಲ ಐದು ದಿನಗಳಲ್ಲಿ ಕೇವಲ 100 ಯೂನಿಟ್ ಸಂಗ್ರಹಿಸಿದ್ದು, ಶಿಬಿರಗಳು ನೋಂದಣಿಯಾಗಿಲ್ಲ.

‘ವಾತಾವರಣದಲ್ಲಿ ಉಷ್ಣಾಂಶ ಹೆಚ್ಚಳದಿಂದಾಗಿ ಜನರು ರಕ್ತದಾನಕ್ಕೆ ಮುಂದೆ ಬರುತ್ತಿಲ್ಲ. ಐಟಿ ಕಂಪನಿಗಳು ರಕ್ತ ದಾನ ಶಿಬಿರಗಳನ್ನು ನಡೆಸಲು ಆಸಕ್ತಿ ತೋರುತ್ತಿಲ್ಲ. ಇದರಿಂದಾಗಿ ರಕ್ತದಾನ ಶಿಬಿರಗಳಿಗೆ ಹಿನ್ನಡೆಯಾಗಿ, ರಕ್ತದ ಕೊರತೆ ಎದುರಾಗುತ್ತಿದೆ. ಸದ್ಯ ಇರುವುದರಲ್ಲೇ ನಿರ್ವಹಣೆ ಮಾಡುತ್ತಿದ್ದೇವೆ. ಬೇಡಿಕೆಯಷ್ಟು ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ. ಯುವಜನರು ರಕ್ತದಾನದಂತಹ ಸಮಾಜಸೇವೆಗೆ ಹೆಚ್ಚಿನ ಒಲವು ತೋರಬೇಕು’ ಎಂದು ಭಾರತೀಯ ರೆಡ್ ಕ್ರಾಸ್ ಸೊಸೈಟಿ ಕರ್ನಾಟಕ ಶಾಖೆಯ ರಕ್ತದಾನ ಶಿಬಿರದ ಸಂಯೋಜಕ ಮಂಜುನಾಥ್ ತಿಳಿಸಿದರು.

‘ಶಾಲಾ–ಕಾಲೇಜುಗಳು ಹಾಗೂ ಕಾರ್ಪೊರೇಟ್ ಕಂಪನಿಗಳು ಈ ಮೊದಲಿನಂತೆ ಶಿಬಿರಗಳಿಗೆ ಸ್ಪಂದಿಸುತ್ತಿಲ್ಲ. ರಕ್ತ ದಾನದಿಂದ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದು ಮನವರಿಕೆ ಮಾಡಲು ಪ್ರಯತ್ನಿಸಿದರೂ, ಯುವಜನರು ರಕ್ತ ದಾನಕ್ಕೆ ಅಷ್ಟಾಗಿ ಆಸಕ್ತಿ ತೋರುತ್ತಿಲ್ಲ’ ಎಂದು ಲಯನ್ಸ್ ರಕ್ತನಿಧಿಯ ಪ್ರತಿನಿಧಿಯೊಬ್ಬರು ಬೇಸರ ವ್ಯಕ್ತಪಡಿಸಿದರು.

ಥಲಸ್ಸೇಮಿಯಾ ರೋಗಿಗಳಿಗೆ ಸಮಸ್ಯೆ

ರಾಷ್ಟ್ರೋತ್ಥಾನ ರಕ್ತ ಕೇಂದ್ರವು ಸಂಕಲ್ಪ್ ಇಂಡಿಯಾ ಫೌಂಡೇಷನ್ನ ಸಹಯೋಗದಲ್ಲಿ ‘ಸಂರಕ್ಷ’ ಥಲಸ್ಸೇಮಿಯಾ ಡೇ ಕೇರ್ ಸೆಂಟರ್ ನಡೆಸುತ್ತಿದೆ. ಈ ಕೇಂದ್ರದಲ್ಲಿ ಥಲಸ್ಸೇಮಿಯಾದಿಂದ ಬಳಲುತ್ತಿರುವ ಮಕ್ಕಳನ್ನು ಆರೈಕೆ ಮಾಡಲಾಗುತ್ತಿದೆ. ಸದ್ಯ 390 ಮಕ್ಕಳು ಈ ಕೇಂದ್ರದಲ್ಲಿದ್ದು, ಅವರಿಗೆ ನಿಯಮಿತವಾಗಿ ರಕ್ತ ಒದಗಿಸಬೇಕಿದೆ. ಆದರೆ, ರಕ್ತದಾನ ಶಿಬಿರಗಳು ನಡೆಯದ ಕಾರಣ ಆ ಮಕ್ಕಳಿಗೂ ರಕ್ತ ಒದಗಿಸುವುದು ಕಷ್ಟಸಾಧ್ಯವಾಗಿದ್ದು, ಕೇಂದ್ರವು ದಾನಿಗಳನ್ನು ಸಂಪರ್ಕಿಸುತ್ತಿದೆ.

‘ರಕ್ತ ದಾನ ಶಿಬಿರಗಳು ನಡೆಯದ ಪರಿಣಾಮ ರಕ್ತ ಸಂಗ್ರಹಿಸಲು ಕಷ್ಟ ಪಡುತ್ತಿದ್ದೇವೆ. ನಿತ್ಯ 120 ಯೂನಿಟ್ ರಕ್ತ ಅಗತ್ಯವಿದೆ. ಕಾಯಂ ದಾನಿಗಳನ್ನು ಸಂಪರ್ಕಿಸಿ, ಮನವಿ ಮಾಡಿಕೊಳ್ಳುತ್ತಿದ್ದೇವೆ. ಆದರೂ ಅಗತ್ಯ ಪ್ರಮಾಣದ ರಕ್ತವನ್ನು ಸಂಗ್ರಹಿಸಿ, ಒದಗಿಸುವುದು ಸವಾಲಾಗಿದೆ’ ಎಂದು ರಾಷ್ಟ್ರೋತ್ಥಾನ ರಕ್ತನಿಧಿ ಕೇಂದ್ರದ ಅಧಿಕಾರಿ ರಾಧಾ ತಿಳಿಸಿದರು.

ರಾಷ್ಟ್ರೋತ್ಥಾನ ರಕ್ತನಿಧಿ ಕೇಂದ್ರದ ಸಂಪರ್ಕ ಸಂಖ್ಯೆ: 080 26608870 ಅಥವಾ 9945299369

ಭಾರತೀಯ ರೆಡ್ ಕ್ರಾಸ್ ಕರ್ನಾಟಕ ಶಾಖೆಯ ಸಂಪರ್ಕ ಸಂಖ್ಯೆ: 080 22268435 ಅಥವಾ 22264205

ಮೊಬೈಲ್ ವ್ಯಾನ್ ಬಳಕೆ

ರಕ್ತ ನಿಧಿ ಕೇಂದ್ರಗಳು ಮೊಬೈಲ್ ವ್ಯಾನ್ಗಳ ನೆರವಿನಿಂದಲೂ ನಗರದ ವಿವಿಧೆಡೆ ತೆರಳಿ, ರಕ್ತ ಸಂಗ್ರಹಕ್ಕೆ ಪ್ರಯತ್ನಿಸುತ್ತಿವೆ. ಭಾರತೀಯ ರೆಡ್ ಕ್ರಾಸ್ ಸೊಸೈಟಿ ಕರ್ನಾಟಕ ಶಾಖೆಯು ಎರಡು ವ್ಯಾನ್ಗಳನ್ನು ಹೊಂದಿದೆ. ರಾಷ್ಟ್ರೋತ್ಥಾನ ರಕ್ತ ಕೇಂದ್ರವೂ ಈ ರೀತಿ ವಾಹನ ಹೊಂದಿದ್ದು, 8–10 ಜನ ದಾನಿಗಳು ಇರುವ ಕಡೆಯೂ ತೆರಳಿ ರಕ್ತ ಸಂಗ್ರಹಿಸಲು ಮುಂದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.