ನವದೆಹಲಿ: ‘ನಾನೇ ಪ್ರಾದೇಶಿಕ ಪಕ್ಷ ಸ್ಥಾಪಿಸುತ್ತೇನೆ. ಬೇರೆಯವರ ಆಹ್ವಾನಕ್ಕಾಗಿ ಕಾದು ಕೂರಲು ನಾನು ಹುಚ್ಚನಲ್ಲ. 2028ರಲ್ಲಿ ನನ್ನ ಪಕ್ಷವೇ ಅಧಿಕಾರಕ್ಕೆ ಬರಲಿದ್ದು, ಮುಖ್ಯಮಂತ್ರಿ ಆಗುತ್ತೇನೆ’ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ಸೋಮವಾರ ಇಲ್ಲಿ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ‘ನಾನು ಸ್ವಾಭಿಮಾನದಿಂದ ಬದುಕಿದವನು. ಬಿಜೆಪಿ ಪ್ರಮುಖರ ಬಳಿಗೆ ಹೋಗಿ ಕೈ ಕಾಲು ಹಿಡಿದು ಪಕ್ಷಕ್ಕೆ ಸೇರಿಸಿಕೊಳ್ಳಿ ಎಂದು ಬೇಡುವ ಅವಶ್ಯಕತೆ ನನಗಿಲ್ಲ. ಆ ಉದ್ದೇಶದಿಂದ ಬಂದಿಲ್ಲ. ಬಿಜೆಪಿಗೆ ಸೇರಿಸಿಕೊಳ್ಳಿ ಎಂದು ಯಾರ ಬಳಿಯೂ ದುಂಬಾಲು ಬೀಳುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ಬಿ.ಎಸ್.ಯಡಿಯೂರಪ್ಪ, ಬಿ.ವೈ. ವಿಜಯೇಂದ್ರ ಹಾಗೂ ಬಿ.ವೈ. ರಾಘವೇಂದ್ರ ಕುಟುಂಬದ ಹಿಡಿತದಲ್ಲಿ ಪಕ್ಷ ಇರುವ ತನಕ ನಾನು ಬಿಜೆಪಿಗೆ ಸೇರುವುದಿಲ್ಲ. ಭ್ರಷ್ಟ ಕುಟುಂಬದ ನೇತೃತ್ವವನ್ನು ಒಪ್ಪುವುದಿಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.