ರಾಮದುರ್ಗ: ಕೂಡಲಸಂಗಮ ಪಂಚಮಸಾಲಿ ಪೀಠದ ಅಧ್ಯಕ್ಷ ಬಸವಜಯ ಮೃತ್ಯುಂಜಯ ಶ್ರೀಗಳ ಮೇಲೆ ರಾಜಕೀಯ ವ್ಯಕ್ತಿಗಳು ಷಡ್ಯಂತ್ರ ನಡೆಸಿದ್ದಾರೆ. ಸಮಾಜ ಒಡೆಯುವ ಹುನ್ನಾರದಲ್ಲಿ ನಮ್ಮವರೇ ಮುತುವರ್ಜಿ ವಹಿಸಿದ್ದಾರೆ ಎಂದು ಪಂಚಮಸಾಲಿ ಪೀಠದ ಶ್ರೀಗಳ ಬೆಂಬಲಿಗರು ದೂರಿದರು.

ಪಟ್ಟಣದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾಜ ಬೇಡಿಕೆಯಾಗಿದ್ದ 2ಎ ಮೀಸಲಾತಿ ಹೋರಾಟವನ್ನು ಹತ್ತಿಕ್ಕಲು ಕೆಲವರು ಕಳೆದ ಎರಡು ವರ್ಷಗಳಿಂದ ಶ್ರೀಗಳನ್ನು ಸಿಕ್ಕಿಸಲು ಯತ್ನಿಸುತ್ತಿದ್ದರು. ಸಮಾಜವನ್ನು ಒಡೆದು ಆಳುವ ಕೆಲಸಕ್ಕೆ ಮುಂದಾಗುತ್ತಿದ್ದಾರೆ. ಅದನ್ನು ತಪ್ಪಿಸಲು ಕಿಡಿಗೇಡಿಗಳನ್ನು ಹತೋಟಿಗೆ ತರಲು ಸರ್ಕಾರ ಸೂಕ್ತ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು.

ಹರಿಹರ ಪೀಠದ ವಚನಾನಂದ ಶ್ರೀಗಳು ಪೀಠದ ಹಣಕಾಸಿನ ಮಾಹಿತಿ ಕೇಳಿದ್ದರಿಂದ ಅಲ್ಲಿದ್ದ ಟ್ರಸ್ಟಿಗಳು ವಿನಾಕಾರಣ ಆರೋಪ ಮಾಡಿ ದೂಷಣೆ ಮಾಡುತ್ತಿದ್ದಾರೆ. ಶ್ರೀಗಳಿಗೆ ಅಲ್ಲಿನ ಟ್ರಸ್ಟಿಗಳೇ ಮೋಸ ಮಾಡಿದ್ದಾರೆ. ಜೀವನದ ಕೊನೆ ಗಳಿಗೆಯಲ್ಲಿರುವ ವೃದ್ಧ ಟ್ರಸ್ಟಿಗಳು ಮನಸೋಇಚ್ಛೆ ವರ್ತಿಸುತ್ತಿದ್ದಾರೆ. ವೃದ್ಧರನ್ನು ಬದಲಾಯಿಸಿ ಯುವಕರ ಕೈಯಲ್ಲಿ ಟ್ರಸ್ಟಿಯ ಅಧಿಕಾರವನ್ನು ನೀಡಬೇಕು ಎಂದು ಆಗ್ರಹಿಸಿದರು.

ಕೂಡಲ ಸಂಗಮ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅಭಿಮಾನಿ ಬಳಗದ ಜಿ.ವಿ. ನಾಡಗೌಡರ, ಮಲ್ಲಿಕಾರ್ಜುನ ರಾಮದುರ್ಗ, ಬಿ.ಎಲ್. ಸಂಕನಗೌಡರ, ಮಂಜುನಾಥ ನವಲಗುಂದ ಮತ್ತು ಪತ್ರೆಪ್ಪ ಹರಗೋಲ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.