ಕೊಪ್ಪಳ: ’ರಾಜ್ಯದ ಬಿಜೆಪಿಯಲ್ಲಿ ಮೊದಲಿನ ಹಾಗೆ ಯಾವ ಸಿದ್ಧಾಂತಗಳು ಉಳಿದುಕೊಂಡಿಲ್ಲ. ಹಿಂದೂತ್ವದ ಬಗ್ಗೆ ಚಿಂತನೆ ಹೊಂದಿರುವವರೇ ಪಕ್ಷದ ರಾಜ್ಯಾಧ್ಯಕ್ಷರಾಗಬೇಕು’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ನವೆಂಬರ್ ತನಕ ಬಿ.ವೈ. ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿ ಮುಂದುವರಿದರೆ ಮನೆಯಲ್ಲಿ ಮತ್ತೆ ಮೂವರು ತಯಾರಾಗುತ್ತಾರೆ. ಅಲ್ಲಿಗೆ ಅವರ ಅವಧಿ ಮುಗಿಯಲಿದ್ದು, ಬಿಜೆಪಿ ಹೈಕಮಾಂಡ್ ಅನ್ನು ಬ್ಲಾಕ್ಮೇಲ್ ಮಾಡಲು ಈಗ ಚಿತ್ರದುರ್ಗದಲ್ಲಿ ಕಾರ್ಯಕ್ರಮ ಮಾಡಲಾಗುತ್ತಿದೆ. ನಮ್ಮ ಜೊತೆ ಲಿಂಗಾಯತರು ಇದ್ದಾರೆ ಎಂದು ತೋರಿಸಿಕೊಳ್ಳಲು ಹೀಗೆ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

‘ಯಡಿಯೂರಪ್ಪ ಕುಟುಂಬದ ಬಗ್ಗೆ ವಿಶ್ವನಾಥ್ ಕೂಡ ಗಂಭೀರ ಆರೋಪ ಮಾಡಿದ್ದಾರೆ. ಕೇಂದ್ರದವರು ಇದನ್ನು ಅರ್ಥ ಮಾಡಿಕೊಳ್ಳಬೇಕು. ಬಿಜೆಪಿ ವರಿಷ್ಠರಿಗೆ ರಾಜ್ಯದ ಜನರ ಭಾವನೆಗಳು ಅರ್ಥವಾಗುತ್ತಿಲ್ಲ. ಪ್ರಧಾನಿ ನರೇಂದ್ರ ಮೋದಿ ಕುಟುಂಬ ರಾಜಕಾರಣಕ್ಕೆ ಕಡಿವಾಣ ಹಾಕುತ್ತಿದ್ದು, ಕರ್ನಾಟಕದಲ್ಲಿ ಮುಂದುವರಿದಿದೆ‘ ಎಂದು ಬೇಸರ ವ್ಯಕ್ತಪಡಿಸಿದರು.

‘ಡಿ.ಕೆ. ಶಿವಕುಮಾರ್ ದೊಡ್ಡ ರಾಕ್ಷಸನಿದ್ದಂತೆ. ಅವರು ಮುಖ್ಯಮಂತ್ರಿಯಾದರೆ ಅಪಾಯವಿದ್ದು ರಾಜ್ಯವನ್ನು ಹತ್ತು ಬಾರಿ ಮಾರಾಟ ಮಾಡುತ್ತಾನೆ. ಯಾರೇ ಸಿ.ಎಂ. ಆದರೂ ಭ್ರಷ್ಟಾಚಾರ ತಪ್ಪುವುದಿಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.