ಬೆಳಗಾವಿ: ಬೆಳಗಾವಿ ಮತ್ತು ರಾಜ್ಯದ ಇತರೆ ಗಡಿ ಪ್ರದೇಶಗಳು ರಾಜ್ಯದ ಅವಿಭಾಜ್ಯ ಅಂಗ ಎಂಬ ನಿರ್ಣಯವನ್ನು ಕನ್ನಡ ಭಾಷಿಕ ಸದಸ್ಯರು ಮಹಾನಗರ ಪಾಲಿಕೆಯಲ್ಲಿ ಮಂಡಿಸಿದರೆ, ‘ಬೆಳಗಾವಿ ಮತ್ತು ರಾಜ್ಯದಲ್ಲಿ ಮರಾಠಿ ಮಾತನಾಡುವ ಪ್ರದೇಶಗಳನ್ನು ಮಹಾರಾಷ್ಟ್ರದೊಂದಿಗೆ ವಿಲೀನಗೊಳಿಸಬೇಕು ಎಂಬ ನಿರ್ಣಯ ನಾವು ಮಂಡಿಸುತ್ತೇವೆ’ ಎಂದು ಮಹಾ ರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್) ಬೆಂಬಲಿತ ಪಕ್ಷೇತರ ಸದಸ್ಯರು ಎಚ್ಚರಿಕೆ ಕೊಟ್ಟಿದ್ದಾರೆ.

ಬೆಳಗಾವಿ ನೂತನ ಮೇಯರ್ ಆಗಿ ಪ್ರೀತಿ ಕಾಮಕರ ಮತ್ತು ಉಪಮೇಯರ್ ಆಗಿ ಹನುಮಂತ ಕೊಂಗಾಲಿ ಈಚೆಗೆ ಆಯ್ಕೆಯಾಗಿದ್ದಾರೆ.

ಕನ್ನಡ ಸಂಘಟನೆಗಳ ಕಾರ್ಯಕರ್ತರು ಅವರನ್ನು ಭೇಟಿಯಾಗಿ, ‘ಬೆಳಗಾವಿ ಮತ್ತು ರಾಜ್ಯದ ಇತರೆ ಗಡಿ ಪ್ರದೇಶಗಳು ರಾಜ್ಯದ ಅವಿಭಾಜ್ಯ ಅಂಗ’ ಎಂಬ ನಿರ್ಣಯವನ್ನು ಪರಿಷತ್ ಸಭೆಯಲ್ಲಿ ಅಂಗೀಕರಿಸುವಂತೆ ಒತ್ತಾಯಿಸಿದ್ದರು. ಇದಕ್ಕೆ ಇಬ್ಬರೂ ಒಪ್ಪಿ, ಬೇಡಿಕೆ ಈಡೇರಿಸುವ ಭರವಸೆ ಕೊಟ್ಟಿದ್ದರು.

ಪಾಲಿಕೆಯಲ್ಲಿ 58 ಸದಸ್ಯರು ಇದ್ದಾರೆ. ಈ ಪೈಕಿ 55 ಮಂದಿ ಬಿಜೆಪಿ, ಕಾಂಗ್ರೆಸ್ ಸೇರಿ ವಿವಿಧ ಪಕ್ಷಗಳಿಂದ ಹಾಗೂ ಸ್ವತಂತ್ರ ಅಭ್ಯರ್ಥಿಗಳಾಗಿ ಆಯ್ಕೆಯಾಗಿದ್ದು, ನಾಡಿನ ಪರ ಇದ್ದಾರೆ.

ಆದರೆ, ಎಂಇಎಸ್ ಬೆಂಬಲಿತ ಮೂವರು ಪಕ್ಷೇತರ ಸದಸ್ಯರಾದ ರವಿ ಸಾಳುಂಕೆ, ವೈಶಾಲಿ ಭಾತಕಾಂಡೆ ಮತ್ತು ಶಿವಾಜಿ ಮಂಡೋಳಕರ ಆಗಾಗ ನಾಡವಿರೋಧಿ ನಿಲುವು ತಳೆಯುತ್ತಲೇ ಬಂದಿದ್ದಾರೆ. ಈಗ ಮತ್ತೊಂದು ವಿವಾದ ಸೃಷ್ಟಿಗೆ ಮುಂದಾಗಿದ್ದಾರೆ.

‘ಗಡಿ ವಿವಾದ ಈಗ ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆ ಹಂತದಲ್ಲಿದೆ. ಹಾಗಾಗಿ ಬೆಳಗಾವಿ ಹಾಗೂ ರಾಜ್ಯದ ಗಡಿ ಪ್ರದೇಶಗಳು ಕರ್ನಾಟಕದ ಅವಿಭಾಜ್ಯ ಅಂಗ ಎಂಬ ನಿರ್ಣಯ ಮಂಡನೆಗೆ ಅವಕಾಶ ನೀಡುವುದಿಲ್ಲ. ಒಂದುವೇಳೆ ನಿರ್ಣಯ ಅಂಗೀಕರಿಸಿದರೆ, ಬೆಳಗಾವಿ ಮತ್ತು ರಾಜ್ಯದ ಗಡಿ ಪ್ರದೇಶಗಳನ್ನು ಮಹಾರಾಷ್ಟ್ರದೊಂದಿಗೆ ವಿಲೀನಗೊಳಿಸಬೇಕು ಎಂದು ಒತ್ತಾಯಿಸುವ ನಿರ್ಣಯ ಮಂಡಿಸುತ್ತೇವೆ’ ಎಂದು ರವಿ ಸಾಳುಂಕೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಪಾಲಿಕೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ನಿಂದ ಮರಾಠಿ ಭಾಷಿಕರು ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರಾಗಿ ಆಯ್ಕೆ ಆಗಿದ್ದಾರೆ. ಮರಾಠಿ ಭಾಷೆ ಮೇಲಿನ ಅಭಿಮಾನಕ್ಕಾಗಿ ನೀವೆಲ್ಲರೂ ನಮ್ಮ ನಿರ್ಣಯ ಬೆಂಬಲಿಸಬೇಕು ಎಂದು ಅವರನ್ನು ಕೋರುತ್ತೇವೆ’ ಎಂದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260329-21-1551108201

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.