ಬೇಲೂರು: ಇಲ್ಲಿನ ಪುರಸಭೆ ಸದಸ್ಯ ಎ.ಆರ್.ಅಶೋಕ್ ಅವರ ಸದಸ್ಯತ್ವ ಅನರ್ಹಗೊಳಿಸಿ, ಜಿಲ್ಲಾಧಿಕಾರಿ ನ್ಯಾಯಾಲಯ ಹೊರಡಿಸಿದ್ದ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಙೆ ನೀಡಿದೆ.

ತಡೆಯಾಜ್ಙೆ ಪತ್ರವನ್ನು ಶುಕ್ರವಾರ ಪುರಸಭೆ ಮುಖ್ಯಾಧಿಕಾರಿಗೆ ಸಲ್ಲಿಸಿದ ಎ.ಆರ್.ಅಶೋಕ್, ಸೋಮವಾರ ನಡೆಯಲಿರುವ ಪುರಸಭೆ ಅಧ್ಯಕ್ಷರ ಚುನಾವಣೆಯಲ್ಲಿ ಭಾಗವಹಿಸಲು ಅವಕಾಶ ನೀಡುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಎ.ಆರ್.ಅಶೋಕ್, ಎಐಸಿಸಿ ಸದಸ್ಯ ಬಿ.ಶಿವರಾಂ ವಿರುದ್ದ ತೀವ್ರ ವಾಗ್ದಾಳಿ ನಡೆಸಿದರು.

‘ನನ್ನನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿದ ಬಿ.ಶಿವರಾಂ ಅವರಿಗೆ ಮುಖಭಂಗವಾಗಿದೆ. ಒಂದು ವರ್ಷದಿಂದ ಬಿ.ಶಿವರಾಂ ತೊಂದರೆ ಕೊಡುತ್ತಿದ್ದಾರೆ. ಆದರೆ ಚನ್ನಕೇಶವ ನನ್ನ ಪರವಾಗಿದ್ದಾನೆ. ಇವರಿಗೆ ಒಂದು ವರ್ಷದಿಂದ ಪುರಸಭೆಗೆ ಹೊಸ ಅಧ್ಯಕ್ಷರನ್ನು ಮಾಡಲು ಅಗಿಲ್ಲ. ನನ್ನ ವಿರುದ್ದ ಪಿತೂರಿ ಮಾಡಿ ನಿಂದಿಸಿದರು. ಶಾಸಕರ ಜೊತೆ ಸೇರಿಕೊಂಡಿರುವುದಾಗಿ ದೂರಿದರು’ ಎಂದು ಹೇಳಿದರು.

‘ಶಾಸಕರು ನನ್ನ ಕಾರ್ಯವೈಖರಿ ಮೆಚ್ಚಿದ್ದಾರಷ್ಟೇ. ಬಿಜೆಪಿಗೆ ಬಾ ಎಂದು ಎಂದಿಗೂ ಹೇಳಿರಲಿಲ್ಲ. ನಿಮ್ಮ ರೀತಿ ಹಿಂದೆ ಒಂದು, ಮುಂದೆ ಒಂದು ತರ ಹೇಳುವವರು ಈ ಶಾಸಕರಲ್ಲ. ನಿಮ್ಮ ಚೇಲಾಗಳನ್ನು ಬಿಟ್ಟು ತೊಂದರೆ ಕೊಡುತ್ತಿದ್ದೀರಿ. ಕೊರ್ಟ್, ಕಚೇರಿ ಸುತ್ತಿ ನಾನು ತೊಂದರೆ ಅನುಭವಿಸಿದ್ದು, ನಿಮಗೆ ಒಳ್ಳೆಯದಾಗಲ್ಲ’ ಎಂದರು.

‘ನೀವು ಶಾಸಕರಾದರೆ ಹೊಡೆದಾಟ ಮಾಡಿಸುತ್ತೀರಾ. ಅದನ್ನು ಬಿಟ್ಟು ನಾಲ್ಕು ಜನಕ್ಕೆ ಬುದ್ಧಿ ಹೇಳಿಕೊಂಡು, ಮೊಮ್ಮಕ್ಕಳನ್ನು ಅಡಿಸಿಕೊಂಡು ಒಳ್ಳೆಯ ಹೆಸರು ಮಾಡಿಕೊಳ್ಳಿ. ನಿಮಗೆ ಈಗ ರಾಜಕಾರಣ ಬೇಕಾ? ನೀವು ನನ್ನ ಕೊಲೆ ಮಾಡಿಸಲು ಪ್ರಯತ್ನಪಟ್ಟಿರಿ. ನಾನು ನಿಮಗೆ ಏನು ತೊಂದರೆ ಕೊಟ್ಟಿದ್ದೇನೆ’ ಎಂದು ಪ್ರಶ್ನಿಸಿದರು.

‘ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷನಾಗಿ ನನ್ನ ವಾರ್ಡ್ನಲ್ಲಿ ನಿಮಗೆ ಹೆಚ್ಚಿನ ಮತ ಹಾಕಿಸಿದ್ದೇನೆ. ಪುರಸಭೆಯಲ್ಲಿ 17 ಜನ ಗೆಲ್ಲಲು ನನ್ನ ಪಾತ್ರವೂ ಇದೆ. ನೀವು ಮನೆಯಲ್ಲಿ ಕುಳಿತು ಫೋನ್ನಲ್ಲಿ ಮಾತನಾಡುವುದನ್ನು ಬಿಟ್ಟು, ಏನು ಮಾಡಬೇಕೋ ಮಾಡಿ. ನಾನು ಅದಕ್ಕೆ ಸಿದ್ಧನಾಗಿದ್ದೇನೆ. ಇದು ಮುಕ್ತ ಸವಾಲು’ ಎಂದರು.

‘ಪುರಸಭೆ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡುವುದಿಲ್ಲ. ಅಕ್ರಂ ಅವರಿಗೆ ಬೆಂಬಲ ನೀಡುತ್ತಿದ್ದೇನೆ. ಬಿ.ಶಿವರಾಂ ಅವಶ್ಯಕತೆ ಇಲ್ಲದೇ ಅಕ್ರಂ ಅಧ್ಯಕ್ಷರಾಗುತ್ತಾರೆ. ನಾನು ಬಿ.ಶಿವರಾಂ ವಿರುದ್ದವಾಗಿಯೇ ಕೆಲಸ ಮಾಡುತ್ತೇನೆ. ಪುರಸಭೆಯಲ್ಲಿ ನನ್ನ ಸದಸ್ಯತ್ವದ ಅವಧಿ ಇರುವವರೆಗೆ ಕಾಂಗ್ರೆಸ್ನಲ್ಲೇ ಇರುತ್ತೇನೆ. ನಂತರ ನನ್ನ ವಾರ್ಡ್ ಮತದಾರರು ಮತ್ತು ಬೆಂಬಲಿಗರ ಸಲಹೆ ಪಡೆದು ಮುಂದಿನ ನಡೆಯ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತೇನೆ’ ಎಂದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260509-36-1606815685

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.