ಬೆಂಗಳೂರು: ‘ಕೃಷಿ ಮಾರುಕಟ್ಟೆಗಾಗಿ ಭೂ ಸ್ವಾಧೀನ ಮಾಡಿಕೊಳ್ಳಲಾಗಿದ್ದ ಮೂರು ಪ್ರಕರಣಗಳಲ್ಲಿ ಸುದೀರ್ಘ ಕಾನೂನು ಹೋರಾಟದ ನಂತರ ಎಪಿಎಂಸಿ ಪರವಾಗಿ ತೀರ್ಪು ಬಂದಿದೆ. ರಾಜ್ಯದ ವಿವಿಧೆಡೆ ಒಟ್ಟು 454 ಎಕರೆಯಷ್ಟು ಜಮೀನು ದೊರೆತಿದೆ’ ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯದ ವಿವಿಧ ಎಪಿಎಂಸಿಗಳು ಹೊಸ ಮಾರುಕಟ್ಟೆ ನಿರ್ಮಾಣ ಮತ್ತು ಮಾರುಕಟ್ಟೆ ವಿಸ್ತರಣೆ ಗಾಗಿ ಸರ್ಕಾರಕ್ಕೆ ಹಣ ಪಾವತಿಸಿ, ರಾಜ್ಯದ ಹಲವೆಡೆ ಭೂಸ್ವಾಧೀನದ ಮೂಲಕ ಜಮೀನನ್ನು ಪಡೆದುಕೊಂಡಿದ್ದವು. ಭೂಸ್ವಾಧೀನದ ವಿರುದ್ಧ ವ್ಯಾಜ್ಯಗಳು ದಾಖಲಾದ ಕಾರಣ, ಎಪಿಎಂಸಿಗಳಿಗೆ ಜಮೀನು ಹಸ್ತಾಂತರವಾಗಿರಲಿಲ್ಲ’ ಎಂದರು.

‘ಹಿಂದಿನ ಸರ್ಕಾರ ಈ ವ್ಯಾಜ್ಯ ಗಳನ್ನು ಕಡೆಗಣಿಸಿದ್ದ ಕಾರಣ, ಎಪಿಎಂಸಿಗಳ ಜಮೀನು ಕೈತಪ್ಪುವ ಅಪಾಯ ಎದುರಾಗಿತ್ತು. ನಾನು ಕೃಷಿ ಮಾರುಕಟ್ಟೆ ಸಚಿವನಾದ ನಂತರ, ಪ್ರಕರಣಗಳತ್ತಗಮನ ನೀಡಲು ಅಧಿಕಾರಿಗಳಿಗೆ ಸೂಚಿಸಿದ್ದೆ. ಸುಪ್ರೀಂ ಕೋರ್ಟ್ನಲ್ಲಿ ಎಪಿಎಂಸಿ ಪರವಾಗಿ ವಾದ ಮಾಡಲು ಹಿರಿಯ ವಕೀಲರನ್ನು ನೇಮಕ ಮಾಡಿದ ಕಾರಣಕ್ಕೆ, ನಮ್ಮ ಪರವಾಗಿ ತೀರ್ಪು ಬಂದಿದೆ’ ಎಂದು ಹೇಳಿದರು.

‘ಬೆಂಗಳೂರಿನ ಸುಂಕದಕಟ್ಟೆ ಸಮೀಪದ ಶ್ರೀಗಂಧ ಕಾವಲು ಮತ್ತು ಹೇರೋಹಳ್ಳಿ ವ್ಯಾಪ್ತಿಯಲ್ಲಿ ಯಶವಂತ ಪುರ ಎಪಿಎಂಸಿ ವತಿಯಿಂದ ಮೆಗಾ ಮಾರುಕಟ್ಟೆ ನಿರ್ಮಿಸಲು 1994ರಲ್ಲಿ 272 ಎಕರೆ 33 ಗುಂಟೆ ಸ್ವಾಧೀನಪಡಿಸಿ ಕೊಳ್ಳಲಾಗಿತ್ತು. ಆದರೆ, ಅದರ ವಿರುದ್ಧ ಜಮ್ನಾಲಾಲ್ ಬಜಾಜ್ ಸೇವಾ ಟ್ರಸ್ಟ್ ನ್ಯಾಯಾಲಯದ ಮೊರೆ ಹೋಗಿತ್ತು.ಸುಪ್ರೀಂ ಕೋರ್ಟ್ನಲ್ಲಿ ಎಪಿಎಂಸಿ ಪರವಾಗಿ ತೀರ್ಪು ಬಂದಿದೆ. ಈ ಜಮೀನಿಗೆ ಎಪಿಎಂಸಿಯೇ ₹186 ಕೋಟಿ ಪಾವತಿ ಸಿದೆ. ಮೆಗಾ ಮಾರುಕಟ್ಟೆ ಯೋಜನೆ ಮತ್ತೆ ಆರಂಭವಾಗಲಿದೆ’ ಎಂದರು.

‘ಸರ್ಜಾಪುರ ಹೋಬಳಿಯ ಗೂಳಿಮಂಗಲದಲ್ಲಿ ಹಣ್ಣು, ಹೂವು, ತರಕಾರಿ ಮಾರುಕಟ್ಟೆ ಯೋಜನೆಗೆ 2003ರಲ್ಲಿ 42 ಎಕರೆ 31 ಗುಂಟೆ ಜಮೀನು ಸ್ವಾಧೀನಪಡಿಸಿಕೊಳ್ಳಲಾಗಿತ್ತು.ಭೂಸ್ವಾಧೀನದ ವಿರುದ್ಧದ ಪ್ರಕರಣದಲ್ಲಿ, ಸುಪ್ರೀಂ ಕೋರ್ಟ್ ನಿರ್ದೇಶನದಂತೆ ರಾಜ್ಯ ಹೈಕೋರ್ಟ್ ತೀರ್ಪು ನೀಡಿದೆ. ಎಪಿಎಂಸಿಗೆ ಭೂಮಿ ಒದಗಿಸಿಕೊಡಲು, ನ್ಯಾಯಾಲಯಕ್ಕೆ ₹211.37 ಕೋಟಿ ಪಾವತಿ ಮಾಡಲಾಗಿದೆ’ ಎಂದು ತಿಳಿಸಿದರು.

‘ಕೊಪ್ಪಳ ಜಿಲ್ಲೆಯ ಗಂಗಾವತಿ ಎಪಿಎಂಸಿಯಿಂದ ಕಾರಟಗಿಯಲ್ಲಿ ರೈಸ್ ಟೆಕ್ನಾಲಜಿ ಪಾರ್ಕ್ ನಿರ್ಮಾಣಕ್ಕೆ 2012ರಲ್ಲಿ, 136 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಈ ಪ್ರಕರಣದಲ್ಲಿ ಜಿಲ್ಲಾ ನ್ಯಾಯಾಲಯ ಚದರ ಅಡಿಗೆ 50 ರೂ. ಪರಿಹಾರ ನೀಡಲು ಆದೇಶ ಮಾಡಿತ್ತು. ಜಿಲ್ಲಾ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಹೈಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಲಾ ಗಿತ್ತು. ಈಗ ಎಪಿಎಂಸಿ ಪರವಾಗಿ ತೀರ್ಪು ಬಂದಿದ್ದು, ಪರಿಹಾರಕ್ಕೆ ₹12 ಕೋಟಿ ಪಾವತಿ ಮಾಡಲಾಗಿದೆ’ ಎಂದರು.

‘ಮೂರೂ ಪ್ರಕರಣಗಳಲ್ಲಿ ಎಪಿಎಂಸಿ ಗಳೇ ತಮ್ಮ ಲಾಭದ ಹಣದಲ್ಲಿ, ಭೂಸ್ವಾಧೀನಕ್ಕೆ ₹450 ಕೋಟಿ ಒದಗಿಸಿವೆ. ಎಪಿಎಂಸಿಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವುದರಿಂದ ಇದು ಸಾಧ್ಯವಾಗಿದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260503-51-1900147754

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.