ದೇವನಹಳ್ಳಿ: ಬ್ಯಾಂಕಾಕ್ನಿಂದ ಜೀವಂತ ಪ್ರಾಣಿಗಳನ್ನು ಕಳ್ಳ ಸಾಗಣೆ ಮಾಡುತ್ತಿದ್ದ ಆರೋಪಿಯನ್ನು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಶುಕ್ರವಾರ ಬಂಧಿಸಿದ್ದು, 47 ವಿವಿಧ ಜೀವಿಗಳನ್ನು ರಕ್ಷಿಸಿದ್ದಾರೆ.

ಪ್ರಯಾಣಿಕನ ಬ್ಯಾಗ್ ತಪಾಸಣೆ ವೇಳೆ 47 ಅಪರೂಪದ ಜೀವಿಗಳು ಪತ್ತೆಯಾಗಿವೆ. ಕೆಂಪು ಕಾಲಿನ ಆಮೆ (ರೆಡ್–ಫುಟೆಡ್ ಟಾರ್ಟಾಯಿಸ್), ಸುಲ್ಕಾಟಾ ಆಮೆ (ಆಫ್ರಿಕನ್ ಸ್ಪರ್ಡ್ ಟಾರ್ಟಾಯಿಸ್), ಅರ್ಜೆಂಟೈನ್ ಬ್ಲ್ಯಾಕ್ ಅಂಡ್ ವೈಟ್ ಟೆಗು(ಹಲ್ಲಿ) ಹಾಗೂ ಗೋಲ್ಡೀಸ್ ಮಾರ್ಮೊಸೆಟ್(ಅಪರೂಪದ ಕೋತಿ) ಬ್ಯಾಗ್ನಲ್ಲಿದ್ದವು.

ಕಸ್ಟಮ್ಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಮುಂದಿನ ಕ್ರಮಕ್ಕಾಗಿ ಪ್ರಯಾಣಿಕ ಮತ್ತು ವನ್ಯಜೀವಿಗಳನ್ನು ಬೆಂಗಳೂರು ಗ್ರಾಮಾಂತರ ವಿಭಾಗದ ಅರಣ್ಯ ವ್ಯಾಪ್ತಿ ಅಧಿಕಾರಿ (ಆರ್ಎಫ್ಒ) ಅವರಿಗೆ ಒಪ್ಪಿಸಲಾಗಿದೆ. ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260517-51-1509554776

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.