ಬೆಂಗಳೂರು: ‘ರಾಜ್ಯ ಸರ್ಕಾರವು ‘ವಿಶೇಷ ಸಮಗ್ರ ಪರಿಷ್ಕರಣೆ’ಯನ್ನು (ಎಸ್ಐಆರ್) ತಿರಸ್ಕರಿಸಬೇಕು.2027ರ ಜನಗಣತಿವರೆಗೆ ಈ ಪ್ರಕ್ರಿಯೆ ನಿಲ್ಲಿಸಬೇಕು’ ಎಂದು ಸಿವಿಕ್ ಬೆಂಗಳೂರು ಸಂಸ್ಥೆ ಆಗ್ರಹಿಸಿದೆ.

ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿಸಂಸ್ಥೆಯ ಪರವಾಗಿ ಮಾತನಾಡಿದ ತ್ರಿಲೋಚನ್ ಶಾಸ್ತ್ರಿ, ‘ಎಸ್ಐಆರ್ ಜಾರಿ ಬಗ್ಗೆ ಹೆಚ್ಚಿನ ಚರ್ಚೆಗಳು ನಡೆಯಬೇಕಿದೆ. ಆತುರದಲ್ಲಿ ಈ ಪ್ರಕ್ರಿಯೆ ಜಾರಿ ಮಾಡುವುದು ಸರಿಯಲ್ಲ’ ಎಂದರು.

‘ಈ ಪ್ರಕ್ರಿಯೆಯನ್ನು ಸಮಗ್ರವಾಗಿ ಪರಿಶೀಲಿಸಬೇಕಾದ ಅಗತ್ಯವಿದೆ. 2027ರ ಜನಗಣತಿ ಪ್ರಕ್ರಿಯೆ ಮುಗಿಯುವ ತನಕ ಎಸ್ಐಆರ್ ಪ್ರಕ್ರಿಯೆ ನಿಲ್ಲಿಸಿ, ಜನಗಣತಿಯ ದತ್ತಾಂಶವನ್ನು ಹೊಸ ಮತದಾರರ ಪಟ್ಟಿ ರಚಿಸಲು ಬಳಸಿಕೊಳ್ಳಬೇಕು’ ಎಂದು ಅಭಿಪ್ರಾಯಪಟ್ಟರು.

‘ಎಸ್ಐಆರ್ ವಿರುದ್ಧ ರಾಜ್ಯ ಸರ್ಕಾರ ದೃಢ ನಿಲುವು ಕೈಗೊಳ್ಳಬೇಕು. ಮತ ಹಕ್ಕು ಕಾಪಾಡಲು ಕಾನೂನು ಇಲಾಖೆಯಿಂದ ಸೂಕ್ತ ಕ್ರಮಕ್ಕೆ ಶಿಫಾರಸು ಪಡೆದು, ಅದರಂತೆ ಕ್ರಮ ವಹಿಸಬೇಕು’ ಎಂದು ಆಗ್ರಹಿಸಿದರು.ಸಿವಿಕ್ ಬೆಂಗಳೂರು ಸಂಸ್ಥೆಯ ಕಾರ್ಯನಿರ್ವಾಹಕ ಟ್ರಸ್ಟಿ ಕಾತ್ಯಾಯಿನಿ ಚಾಮರಾಜ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.