ಬೆಂಗಳೂರು: ‘ದಲಿತ ಸಮುದಾಯಗಳು ತುಂಡು ತುಂಡಾಗಿ ಹೋಗಿವೆ. ಒಡೆಯುವ ಕೆಲಸ ಮುಗಿದಿದೆ. ಇನ್ನೇನಿದ್ದರೂ ಕೂಡಿಸುವ ಕೆಲಸ ಆಗಬೇಕು. ರಾಜಕೀಯ ನೀಲನಕ್ಷೆ ಇಟ್ಟುಕೊಂಡು, ದಮ್ಮದ ನೆರಳಿನಲ್ಲಿ ಒಗ್ಗೂಡಬೇಕು’ ಎಂದು ಹೋರಾಟಗಾರ ಕೋಟಿಗಾನಹಳ್ಳಿ ರಾಮಯ್ಯ ಹೇಳಿದರು.

‘ಒಳ ಮೀಸಲಾತಿ ಹೆಸರಿನಲ್ಲಿ ಸೋದರ ಸಮುದಾಯಗಳನ್ನು ಒಡೆದು ಆಳುವ ಮನುವಾದಿಗಳ ಕುತಂತ್ರ ಮತ್ತು ಸರ್ಕಾರದ ಹುನ್ನಾರ’ ವಿರೋಧಿಸಿ ಪರಿಶಿಷ್ಟ ಜಾತಿ–ಪಂಗಡಗಳ ಸೌಹಾರ್ದ ಸೋದರತ್ವ ಸಮಿತಿ ಬುಧವಾರ ಆಯೋಜಿಸಿದ್ದ ದುಂಡು ಮೇಜಿನ ಸಭೆಯಲ್ಲಿ ಅವರು ಮಾತನಾಡಿದರು.

ಅಸ್ಪೃಶ್ಯರಲ್ಲಿನ ಜಾತಿಗಳು ಹೊಸದಾಗಿ ಹುಟ್ಟಿಕೊಂಡಿದ್ದಲ್ಲ. ಅದು ಹಿಂದೆಯೇ ಇತ್ತು. ಜಾತಿ ಅಪ್ರಜ್ಞಾ ಪೂರ್ವಕವಾಗಿ ಇದ್ದಿದ್ದರಿಂದ ದಲಿತ ಸಂಘರ್ಷ ಸಮಿತಿ ಕಟ್ಟಲು ಸಾಧ್ಯವಾಗಿತ್ತು. ದಲಿತರು ದೊಡ್ಡ ಶಕ್ತಿಯಾಗಲು ಸಾಧ್ಯವಾಗಿತ್ತು. ಆದರೆ, ಈಗ ಜಾತಿಗಳು ಪ್ರಜ್ಞಾಪೂರ್ವಕವಾಗಿ ಬಿಟ್ಟಿವೆ. ಸಮುದಾಯಗಳು ಒಡೆದು ಹೋಗಿವೆ ಎಂದು ಬೇಸರ ವ್ಯಕ್ತಪಡಿಸಿದರು.

ರಾಜಕೀಯವಾಗಿ ಬಹುಜನ ಚಳವಳಿಯನ್ನು ಕಾನ್ಶಿರಾಂ ಕಟ್ಟಿದ್ದರು. ಆದರೆ, ಪ್ರಸ್ತುತ ಬಹುಜನ ಚಳವಳಿಯೂ ಬಿಕ್ಕಟ್ಟನ್ನು ಎದುರಿಸುತ್ತಿದೆ. ಈಗಿನ ಕಾಲದ ರಾಜಕಾರಣವನ್ನು ಎದುರಿಸಲು ಆಗದ ಪರಿಸ್ಥಿತಿಗೆ ಬಹುಜನ ಸಮಾಜ ಪಕ್ಷ ಯಾಕೆ ತಲುಪಿತು ಎಂದು ಕೇಳಿಕೊಳ್ಳಬೇಕಾಗಿದೆ ಎಂದು ಹೇಳಿದರು.

ಹೋರಾಟದಲ್ಲಿ 40 ವರ್ಷಗಳಿಂದ ಒಟ್ಟಾಗಿ ಇದ್ದಾಗ ನಮಗೆ ನಮ್ಮ ಜಾತಿಗಳು ಕಾಡಿರಲಿಲ್ಲ. ಆದರೆ, ಈಗ ಪರಸ್ಪರ ಬೇರೆ ಎಂಬ ಭಾವನೆ ಕಾಣತೊಡಗಿದೆ. ಯಾರೋ ಮುಖ್ಯಮಂತ್ರಿಯಾಗಲು, ಶೇ 2ರಷ್ಟು ಇರುವ ಉದ್ಯೋಗದಲ್ಲಿ ಪಾಲು ಪಡೆಯಲು ಇಷ್ಟೊಂದು ಚೂರು ಚೂರು ಆಗಬೇಕೇ? ಐಎಎಸ್, ಐಪಿಎಸ್ ಅಧಿಕಾರಿಗಳ ಕುತಂತ್ರಕ್ಕೆ ಬಲಿಯಾಗುತ್ತಿದ್ದೇವೆ. ವರ್ಣಾಶ್ರಮ ಧರ್ಮ ಮತ್ತೆ ಹೂಬಿಟ್ಟು ಫಲ ಕೊಡತೊಡಗಿದೆ ಎಂದರು.

ಬಿಎಸ್ಪಿ ನಾಯಕ ಹ.ರಾ. ಮಹೇಶ್ ಮಾತನಾಡಿ, ‘ಒಳಮೀಸಲಾತಿ ಜಾರಿಗೆ ವಿಳಂಬ ಮಾಡುತ್ತಿರುವುದು ಸರ್ಕಾರ. ಒಳಮೀಸಲಾತಿಯ ಹೆಸರಲ್ಲಿ ನಮ್ಮನ್ನು ಒಡೆಯುತ್ತಿರುವುದು ಮನುವಾದಿಗಳು. ನಾವು ಅವರನ್ನು ಪ್ರಶ್ನಿಸಬೇಕೇ ಹೊರತು ಪರಸ್ಪರ ನಮ್ಮೊಳಗಿನ ಸಮುದಾಯಗಳೇ ಕೆಸರೆರಚಾಟ ಮಾಡಬಾರದು’ ಎಂದು ಹೇಳಿದರು.

‘ಇಡೀ ಮಾನವಕುಲದ ಒಳಿತಿನ ಬಗ್ಗೆ ಮಾತನಾಡಿದ್ದ, ಕೆಲಸ ಮಾಡಿದ್ದ ಅಂಬೇಡ್ಕರ್ ಅವರನ್ನು ಎಸ್ಸಿ–ಎಸ್ಟಿ ನಾಯಕ ಎಂದು ಮನುವಾದಿಗಳು ಬಿಂಬಿಸಿದ್ದರು. ಆ ನಂತರ ಬರೀ ಎಸ್ಸಿಗಳ ನಾಯಕ ಎಂದು ಬಿಂಬಿಸಲಾಯಿತು. ಈಗ ಎಸ್ಸಿಗಳಲ್ಲಿಯೂ ಒಂದು ಒಳಜಾತಿಯ ನಾಯಕ ಎಂದು ಸೀಮಿತಗೊಳಿಸಲು ಮನುವಾದಿಗಳು ಕೆಲಸ ಮಾಡುತ್ತಿದ್ದು, ಬಹುತೇಕ ಯಶಸ್ವಿಯಾಗುತ್ತಿದ್ದಾರೆ. ಇದಕ್ಕೆ ಉತ್ತರ ನೀಡಬೇಕಾದರೆ ನಾವು ಸೋದರ ಸಮುದಾಯಗಳು ಸೌಹಾರ್ದವಾಗಿ ಬದುಕಬೇಕು. ಸತ್ಯ, ನ್ಯಾಯ, ಸಮಾನತೆಯ ಪರ ಇರಬೇಕು’ ಎಂದರು.

ಜೇತವನ ಬೌದ್ಧ ವಿಹಾರದ ಭಂತೇಜಿ ಮನೋರಖ್ಖಿತ, ಬೌದ್ಧ ಮಹಾಸಭಾದ ಧಮ್ಮವೀರ ಭಂತೇಜಿ ಸಾನ್ನಿಧ್ಯ ವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260409-51-1709939676

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.