ಬೆಂಗಳೂರು: ಶಾಸಕಾಂಗ ಪಕ್ಷದ ಸಭೆಯ ನಂತರ ವಿಧಾನಸೌಧದಿಂದ ಡಿ.ಕೆ.ಶಿವಕುಮಾರ್ ಅವರು ಹೊರಬಂದಾಗ ಅವರ ಬೆಂಬಲಿಗರು ಘೋಷಣೆ ಕೂಗುತ್ತಾ, ಅವರ ಕಾಲಿಗೆ ಬೀಳಲು ಮುಂದಾದರು. ಈ ವೇಳೆ ಭಾರಿ ನೂಕುನುಗ್ಗಲು ಉಂಟಾಯಿತು. ಬೆಂಬಲಿಗರನ್ನು ತಡೆಯುವ ಭದ್ರತಾ ಸಿಬ್ಬಂದಿ ಯತ್ನ ವಿಫಲವಾಯಿತು.

ಬೆಂಬಲಿಗರು ಮತ್ತು ಅಭಿಮಾನಿಗಳು ತಮ್ಮತ್ತ ನುಗ್ಗಿದ್ದರಿಂದ ತುಸು ವಿಚಲಿತರಾದಂತೆ ಕಂಡ ಶಿವಕುಮಾರ್ ಅವರು, ನಿಧಾನಗತಿಯಲ್ಲೇ ತಮ್ಮ ಕಾರಿನತ್ತ ತೆರಳಿದರು. ಈ ವೇಳೆ ಅವರ ಜತೆಗಿದ್ದ ರಣದೀಪ್ ಸಿಂಗ್ ಸುರ್ಜೇವಾಲಾ ಮತ್ತು ಕೆ.ಸಿ.ವೇಣುಗೋಪಾಲ್ ಅವರನ್ನು ಶಿವಕುಮಾರ್ ಅವರ ಅಭಿಮಾನಿಗಳು ತಳ್ಳಾಡಿದರು. ಒಂದು ಹಂತದಲ್ಲಿ ಶಿವಕುಮಾರ್ ಅವರು ಕಾರು ಮತ್ತು ತಮ್ಮ ಅಭಿಮಾನಿಗಳ ಮಧ್ಯೆ ಸಿಲುಕಿದರು. ಅವರ ಬೆಂಬಲಿಗರ ಹರ್ಷೋದ್ಗಾರ ಜೋರಾಗುತ್ತಲೇ ಇತ್ತು.

ಆಗ ಶಿವಕುಮಾರ್ ಅವರು ಹಿಂತಿರುಗಿ ವಿಧಾನಸೌಧದ ಕಾರಿಡಾರ್ನ ಗೇಟಿನತ್ತ ನೋಟ ನೆಟ್ಟರು. ನೂಕು ನುಗ್ಗಲು, ಹರ್ಷೋದ್ಗಾರಗಳಿಗೆ ಪ್ರತಿಕ್ರಿಯಿಸದೆ ತದೇಕಚಿತ್ತರಾಗಿ ನೋಡುತ್ತಲಿದ್ದರು. ಆ ವೇಳೆಗೆ ಸಿದ್ದರಾಮಯ್ಯ ಅವರು ಬಂದರು. ಶಿವಕುಮಾರ್ ಅವರ ಅಭಿಮಾನಿಗಳು ಆಗ ಸಿದ್ದರಾಮಯ್ಯ ಪರವಾಗಿಯೂ ಘೋಷಣೆ ಕೂಗಿದರು. ಕೆಲವರು ಪಾದಮುಟ್ಟಿ ನಮಸ್ಕರಿಸಿದರು. ನೂಕುನುಗ್ಗಲು ವಿಪರೀತವಾಗಿ ಇದ್ದ ಕಾರಣ ಸಿದ್ದರಾಮಯ್ಯ ಅವರು ಅಲ್ಲಿಯೇ ಕೆಲಕ್ಷಣ ನಿಂತರು.

ಸಿದ್ದರಾಮಯ್ಯ ಅವರು ಮೆಟ್ಟಿಲಿಳಿದು ಕಾರಿನವರೆಗೆ ಬರುವವರೆಗೂ ಶಿವಕುಮಾರ್ ಅಲ್ಲಿಯೇ ನಿಂತಿದ್ದರು. ನಂತರ ಸಿದ್ದರಾಮಯ್ಯ ಅವರನ್ನು ತಾವೇ ಕರೆದುಕೊಂಡು ಬಂದು, ಕಾರಿನ ಮುಂಬದಿಯ ಸೀಟಿನಲ್ಲಿ ಕೂರಿಸಿದರು. ತಾವು ಹಿಂಭಾಗದ ಸೀಟಿನಲ್ಲಿ ಕೂತರು. ಅದೇ ಕಾರಿನಲ್ಲಿ ಲೋಕಭವನದತ್ತ ಹೊರಟರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260531-51-651578861

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.