ಬೆಂಗಳೂರು: ನೂತನ ಅಬಕಾರಿ ನೀತಿ ಜಾರಿಯ ಬೆನ್ನಲ್ಲೇ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಅವರು ಡಿಸ್ಟಿಲರಿ ಮಾಲೀಕರ ಸಂಘಟನೆಯ ಪ್ರತಿನಿಧಿಗಳ ಜತೆ ಮಂಗಳವಾರ ಸಭೆ ನಡೆಸಿದರು.

ಮದ್ಯದ ಬೆಲೆ ನಿಗದಿ ಅಧಿಕಾರವನ್ನು ಸರ್ಕಾರವು ತ್ಯಜಿಸಿರುವುದರ ಕುರಿತಾಗಿ ಮದ್ಯ ತಯಾರಕರು ಮೆಚ್ಚುಗೆ ವ್ಯಕ್ತಪಡಿಸಿದರು. ಪರವಾನಗಿ ನವೀಕರಣ, ಲೇಬಲ್ ಪರಿಶೀಲನೆ ಪ್ರಕ್ರಿಯೆಗಳನ್ನು ಸಂಪೂರ್ಣವಾಗಿ ಆನ್ಲೈನ್ಗೊಳಿಸಲಾಗಿದ್ದು, ಈ ಬಗ್ಗೆ ಇದ್ದ ಕೆಲವು ಸಂದೇಹಗಳನ್ನು ಪ್ರತಿನಿಧಿಗಳು ಪರಿಹರಿಸಿಕೊಂಡರು ಎಂದು ಮೂಲಗಳು ತಿಳಿಸಿವೆ.

ಮದ್ಯದಲ್ಲಿರುವ ಆಲ್ಕೋಹಾಲ್ ಪ್ರಮಾಣದ ಆಧಾರದಲ್ಲಿ ಅಬಕಾರಿ ಸುಂಕ ವಿಧಿಸುವ ಪದ್ಧತಿಯು ಇದೇ 11ರಿಂದ ಜಾರಿಗೆ ಬಂದಿದೆ. ಹಳೆಯ ಅಬಕಾರಿ ಸುಂಕ ನೀತಿ ಜಾರಿಯಲ್ಲಿದ್ದಾಗ ತಯಾರಾದ ಮದ್ಯವನ್ನು ಮಾರಾಟ ಮಾಡುವ ಬಗ್ಗೆ ಇದ್ದ ಗೊಂದಲಗಳ ಬಗ್ಗೆ ಸಭೆಯಲ್ಲಿ ಚರ್ಚೆಯಾಯಿತು ಎಂದು ಮಾಹಿತಿ ನೀಡಿವೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260513-51-1050346971

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.