ಬೆಂಗಳೂರು: ‘ನಗರ ಮತ್ತು ಪಟ್ಟಣಕ್ಕೆ ಹೊಂದಿಕೊಂಡಿರುವ ನೂರಾರು ಕೋಟಿ ಮೌಲ್ಯದ ಅರಣ್ಯ ಪ್ರದೇಶ ಒತ್ತುವರಿ ಆಗದಂತೆ ತಡೆಯಲು ಬೇಲಿ ಹಾಕಬೇಕು’ ಎಂದು ಇಲಾಖೆಯ ಅಧಿಕಾರಿಗಳಿಗೆ ಅರಣ್ಯ ಸಚಿವ ಈಶ್ವರ ಖಂಡ್ರೆ ಸೂಚನೆ ನೀಡಿದರು.

ಹಿರಿಯ ಅಧಿಕಾರಿಗಳ ಜೊತೆ ಗುರುವಾರ ಸಭೆ ನಡೆಸಿದ ಅವರು, ‘ಅರಣ್ಯೀಕರಣ ಪರಿಹಾರ ನಿಧಿ ನಿರ್ವಹಣೆ ಮತ್ತು ಯೋಜನಾ ಪ್ರಾಧಿಕಾರದ (ಕಾಂಪಾ) ನಿಧಿಯಲ್ಲಿ ಅರಣ್ಯ ಭೂಮಿ ರಕ್ಷಣೆಗೆ ಹಣ ಒದಗಿಸಲು ಅವಕಾಶವಿದೆ’ ಎಂದರು.

‘ಹಾಸನ ನಗರಕ್ಕೆ ಹೊಂದಿಕೊಂಡಿರುವ ಮಡೆನೂರು ಅರಣ್ಯ ಪ್ರದೇಶಕ್ಕೆ ಇತ್ತೀಚೆಗೆ ಭೇಟಿ ನೀಡಿದಾಗ, ಇಲಾಖೆಯ ಹೆಸರಿನಲ್ಲಿ ಆರ್ಟಿಸಿ ಇದ್ದರೂ ಅಲ್ಲಿ ಅರಣ್ಯ ಬೆಳೆಸದಿರುವುದು ಗಮನಕ್ಕೆ ಬಂದಿದೆ. ಹೀಗಾಗಿ, ಒತ್ತುವರಿ ನಡೆದಿದೆ. ಇಂತಹ ಭೂಮಿಯನ್ನು ತಕ್ಷಣ ಗುರುತಿಸಿ ಬೇಲಿ ಹಾಕಿ, ಸ್ಥಳೀಯ ಪ್ರಭೇದದ ಸಸಿಗಳನ್ನು ನೆಟ್ಟು ನೆಡುತೋಪು ಅಭಿವೃದ್ಧಿಪಡಿಸಬೇಕು’ ಎಂದು ಸಚಿವರು ಸೂಚಿಸಿದರು.

ಕೂಡಲೇ ಮ್ಯುಟೇಷನ್ ಮಾಡಿ: ‘ಸರ್ಕಾರದಿಂದ ಮತ್ತು ಹಿಂದೆ ರಾಜರ ಕಾಲದಲ್ಲಿ ‘ಅರಣ್ಯ’ ಎಂದು ಗೆಜೆಟ್ ಅಧಿಸೂಚನೆಯಾಗಿ ಅರಣ್ಯ ಸ್ವರೂಪ ಇದ್ದರೂ ಕೆಲವು ಕಡೆ ಇನ್ನೂ ಅರಣ್ಯ ಎಂದು ಮ್ಯುಟೇಷನ್ (ಇಂಡೀಕರಣ) ಆಗಿಲ್ಲ. ಆರ್ಟಿಸಿಯಲ್ಲಿ ಅರಣ್ಯ ಎಂದು ದಾಖಲಾಗದ ಕಾರಣ ಅಕ್ರಮ ಮಂಜೂರಾತಿ, ಒತ್ತುವರಿ ನಡೆಯುತ್ತಿದೆ. ಕೂಡಲೇ ಮ್ಯುಟೇಷನ್ ಮಾಡಲು ಕ್ರಮ ತೆಗೆದುಕೊಳ್ಳಬೇಕು’ ಎಂದು ಖಂಡ್ರೆ ನಿರ್ದೇಶನ ನೀಡಿದರು.

ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಅರಣ್ಯ ಕಾರ್ಯಪಡೆ ಮುಖ್ಯಸ್ಥರಾದ ಮೀನಾಕ್ಷಿ ನೇಗಿ, ಮುಖ್ಯ ವನ್ಯಜೀವಿ ಪರಿಪಾಲಕರಾದ ಕುಮಾರ್ ಪುಷ್ಕರ್, ಕಾಂಪಾ ವಿಭಾಗದ ಪಿಸಿಸಿಎಫ್ ರಾಧಾದೇವಿ ಸಭೆಯಲ್ಲಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260522-51-1785030571

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.