ಕಸ ವಿಲೇವಾರಿಯನ್ನು ಅತ್ಯಗತ್ಯ ಸೇವೆ ಎಂದು ಪರಿಗಣಿಸಿ ‘ಎಸ್ಮಾ’ ಕಾಯ್ದೆಯಡಿ ತರಲಾಗಿದೆ. ಗುತ್ತಿಗೆದಾರರು ಸೋಮವಾರದಂದು (ಮಾರ್ಚ್ 23), ತ್ಯಾಜ್ಯ ಸಂಗ್ರಹಿಸದೆ ತಮ್ಮ ಕರ್ತವ್ಯದಲ್ಲಿ ತೀವ್ರ ನಿರ್ಲಕ್ಷ್ಯ ತೋರಿರುತ್ತಾರೆ. ಈ ಕೃತ್ಯವು ಸಾರ್ವಜನಿಕ ಆರೋಗ್ಯಕ್ಕೆ ಭಂಗ ತರುವಂತ ಹದ್ದಾಗಿದ್ದು, ‘ಎಸ್ಮಾ’ ಕಾಯ್ದೆಯ ಸ್ಪಷ್ಟ ಉಲ್ಲಂಘನೆಯಾಗಿರುತ್ತದೆ. ಸಾರ್ವಜನಿಕ ಹಿತದೃಷ್ಟಿಯಿಂದ ಹಾಗೂ ನಗರದ ನೈರ್ಮಲ್ಯವನ್ನು ಕಾಪಾಡುವ ನಿಟ್ಟಿಯಲ್ಲಿ ಕರ್ತವ್ಯಲೋಪ ಎಸಗಿರುವ ಗುತ್ತಿಗೆದಾರರ ವಿರುದ್ಧ ‘ಎಸ್ಮಾ’ ಕಾಯ್ದೆಯನುಸಾರ ಕಾನೂನು ಕ್ರಮ ಜರುಗಿಸಬೇಕು’ ಎಂದು ಎಜಿಎಂಗಳು ದೂರಿನಲ್ಲಿ ತಿಳಿಸಿದ್ದಾರೆ.

ಊರುಗಳಿಗೆ ಹೊರಟ ಕಾರ್ಮಿಕರು: ‘ಮನೆಗಳಿಂದ ಕಸ ಸಂಗ್ರಹ, ಸಾಗಣೆ ಮಾಡುವ ಕಾರ್ಮಿಕರು ರಸ್ತೆಯಲ್ಲಿ ತ್ಯಾಜ್ಯ ಆಯುವುದರಿಂದ ಸಾಕಷ್ಟು ನೊಂದಿದ್ದಾರೆ. ಹಲವು ರೀತಿಯ ರೋಗಗಳೂ ಬಂದಿವೆ. ಹೀಗಾಗಿ, ಅವರು ಕೆಲಸಕ್ಕೆ ಬರುವುದಿಲ್ಲ ಎಂದು ಹೇಳಿ ಊರುಗಳತ್ತ ಹೊರಡುತ್ತಿದ್ದಾರೆ’ ಎಂದು ಗುತ್ತಿಗೆದಾರರು ಹೇಳಿದರು.

‘ಕಾರ್ಮಿಕರಲ್ಲಿ ಬಹುತೇಕರು ತಮಿಳು ನಾಡು ಹಾಗೂ ಪಶ್ಚಿಮ ಬಂಗಾಳದವರು. ಆ ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ಘೋಷಣೆ ಆಗಿರುವುದರಿಂದ, ಕಾರ್ಮಿಕರು ತಮ್ಮ ಊರುಗಳತ್ತ ಪ್ರಯಾಣಿಸುತ್ತಿದ್ದಾರೆ. ಹೀಗಾಗಿ, ಕಾರ್ಮಿಕರ ಸಂಖ್ಯೆ ಸುಮಾರು ಶೇ 80ರಷ್ಟು ಕಡಿಮೆಯಾಗಿದೆ. ಉಳಿದವರು ಕಸ ಆಯುವುದಿಲ್ಲ ಎನ್ನುತ್ತಿದ್ದಾರೆ’ ಎಂದು ಗುತ್ತಿಗೆದಾರರು ತಮ್ಮ ಸಮಸ್ಯೆ ಹೇಳಿಕೊಂಡರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260324-4-1263478276

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.