ಬೆಂಗಳೂರು: ಕಗ್ಗಲೀಪುರ ಪೊಲೀಸ್ ಠಾಣಾ ವ್ಯಾಪ್ತಿಯ ವಡೇರಹಳ್ಳಿಯ ಸೇತುವೆ ಬಳಿ ಜಿಲೆಟಿನ್ ಕಡ್ಡಿಗಳು ಪತ್ತೆಯಾದ ಪ್ರಕರಣದ ತನಿಖೆ ಚುರುಕುಗೊಳಿಸಿರುವ ವಿಶೇಷ ಪೊಲೀಸ್ ತಂಡವು, ಶಂಕಿತರನ್ನು ತಮಿಳುನಾಡಿನಲ್ಲಿ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ.

ತಾಂತ್ರಿಕ ಸುಳಿವು ಹಾಗೂ ನೈಸ್ ರಸ್ತೆಯ ಪ್ರವೇಶ ದ್ವಾರದಲ್ಲಿ ಇರುವ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯಾವಳಿ ಆಧರಿಸಿ ತಮಿಳುನಾಡಿಗೆ ತೆರಳಿರುವ ವಿಶೇಷ ಪೊಲೀಸ್ ತಂಡವು, ಆ ರಾಜ್ಯದಲ್ಲಿ ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ ಎಂದು ಗೊತ್ತಾಗಿದೆ.

ಎಚ್ಎಎಲ್ ವಿಮಾನ ನಿಲ್ದಾಣಹಾಗೂ ಆರ್ಟ್ ಆಫ್ ಲಿವಿಂಗ್ ಆವರಣದಲ್ಲಿ ಬಾಂಬ್ ಸ್ಫೋಟಿಸುವುದಾಗಿ ಬೆದರಿಕೆ ಒಡ್ಡಿದ ಕೋರಮಂಗಲದ ಲೋಹಿತ್ಗೂ, ತಮಿಳುನಾಡಿನಲ್ಲಿ ವಿಚಾರಣೆ ನಡೆಸುತ್ತಿರುವ ವ್ಯಕ್ತಿಗಳಿಗೂ ಯಾವುದೇ ಸಂಬಂಧ ಇಲ್ಲ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ. ವಿಚಾರಣೆ ಪೂರ್ಣವಾದ ಮೇಲಷ್ಟೇ ವಡೇರಹಳ್ಳಿ ಸೇತುವೆಯ ಬಳಿ ಜಿಲೆಟಿನ್ ಕಡ್ಡಿಗಳು ಎಸೆದಿದ್ದು ಯಾರು ಎಂಬುದು ಪತ್ತೆ ಆಗಲಿದೆ ಎಂದು ತನಿಖಾ ತಂಡದ ಮೂಲಗಳು ತಿಳಿಸಿವೆ.

‘ಕನಕಪುರದ ಸುತ್ತಮುತ್ತ ಕಲ್ಲು ಕ್ವಾರಿಗಳು ಇವೆ. ಕ್ವಾರಿ ಮಾಲೀಕರು ಹಾಗೂ ಕಾರ್ಮಿಕರನ್ನು ಕರೆಯಿಸಿ ವಿಚಾರಣೆ ನಡೆಸಲಾಗುತ್ತಿದೆ. ಕ್ವಾರಿ ಮಾಲೀಕರ ಕೃತ್ಯ ಅಲ್ಲ ಎಂಬುದು ಕಂಡುಬಂದಿದೆ. ರಟ್ಟಿನ ಬಾಕ್ಸ್ನಲ್ಲಿ ಜಿಲೆಟಿನ್ ಕಡ್ಡಿಗಳು, ಅಗರಬತ್ತಿ, ಕರ್ಪೂರದ ಡಬ್ಬಿ ಇಟ್ಟಿರುವುದರಿಂದ ಹಲವು ಸಂಶಯಗಳಿವೆ. ಜಿಲೆಟಿನ್ ಕಡ್ಡಿಗಳ ಪರಿಶೀಲನೆ ನಡೆಸಲಾಗಿದೆ. ಅವುಗಳು ಹಳೆಯ ಜಿಲೆಟಿನ್ ಕಡ್ಡಿಗಳು ಎಂಬುದು ಕಂಡುಬಂದಿದೆ’ ಎಂದು ಪೊಲೀಸರು ಹೇಳಿದರು.

‘ಬಂಧಿತ ಆರೋಪಿ, ಕೋರಮಂಗಲದ ಲೋಹಿತ್ ಮೇ 10ರ ಬೆಳಿಗ್ಗೆ ಕೇವಲ ಬೆಂಗಳೂರು ಪೊಲೀಸ್ ಸಹಾಯವಾಣಿಗೆ ಕರೆ ಮಾಡಿ ಬೆದರಿಕೆ ಹಾಕಿರಲಿಲ್ಲ. ತಮಿಳುನಾಡು ಪೊಲೀಸ್ ಸಹಾಯವಾಣಿ ಹಾಗೂ ರಾಷ್ಟ್ರದ ಇನ್ನೂ ಕೆಲವು ತನಿಖಾ ಸಂಸ್ಥೆಗಳ ಸಹಾಯವಾಣಿಗಳಿಗೂ ಕರೆ ಮಾಡಿರುವುದು ತನಿಖೆ ವೇಳೆ ದೃಢಪಟ್ಟಿದೆ’ ಎಂದು ಮೂಲಗಳು ಹೇಳಿವೆ.

‘ಮಾನಸಿಕ ಸಮಸ್ಯೆಯಿಂದ ಲೋಹಿತ್ ಬಳಲುತ್ತಿದ್ದ ಎಂಬುದು ಕಂಡುಬಂದಿದೆ. ‘ಡಿ–ಅಡಿಕ್ಷನ್ ಸೆಂಟರ್’ಗೆ ಅವರ ಪೋಷಕರು ದಾಖಲು ಮಾಡಿದ್ದರು. ಕಳೆದ ತಿಂಗಳು ಅಲ್ಲಿಂದ ಬಿಡುಗಡೆ ಮಾಡಿಕೊಂಡು ಮನೆಗೆ ಕರೆ ತಂದಿದ್ದರು. ಸೆಂಟರ್ನಲ್ಲಿ ಇದ್ದಾಗಲೇ ಲೋಹಿತ್ ಆನ್ಲೈನ್ ಮೂಲಕ ಸಹಾಯವಾಣಿಗಳ ಸಂಖ್ಯೆ ಪಡೆದಿರುವ ಸಾಧ್ಯತೆಯಿದೆ’ ಎಂದು ಪೊಲೀಸರು ಹೇಳಿದರು.

ಮಾನಸಿಕ ಸಮಸ್ಯೆಗೆ ಚಿಕಿತ್ಸೆ ಕೊಡಿಸಿರುವ ಸಂಬಂಧ ಲೋಹಿತ್ ಪೋಷಕರು, ವೈದ್ಯಕೀಯ ದಾಖಲೆ ಸಲ್ಲಿಸಿದ್ದಾರೆ. ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಅದರ ವರದಿ ಬಂದ ಬಳಿಕ ಸ್ಪಷ್ಟತೆ ಸಿಗಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಮೇ 10ರ ಬೆಳಿಗ್ಗೆ 7.30ರ ಸುಮಾರಿಗೆ ಲೋಹಿತ್ ಕರೆ ಮಾಡಿ ಆರ್ಟ್ ಆಫ್ ಲಿವಿಂಗ್ ಬಳಿಯೇ ಸ್ಫೋಟಕ ವಸ್ತುಗಳನ್ನು ಇಟ್ಟಿರುವುದಾಗಿ ಹೇಳಿದ್ದರು. ಅದರ ಬೆನ್ನಲ್ಲೇ, ನೈಸ್ ರಸ್ತೆಯ ಆಸುಪಾಸಿನಲ್ಲಿ ಪರಿಶೀಲನೆ ನಡೆಸಿದಾಗ ಜಿಲೆಟಿನ್ ಕಡ್ಡಿಗಳು ಸಿಕ್ಕಿರುವುದು ಅನುಮಾನಕ್ಕೆ ಕಾರಣವಾಗಿದೆ’ ಎಂದು ಪೊಲೀಸರು ಹೇಳಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260514-35-800406963

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.