ಬೆಂಗಳೂರು: ಸರ್ಕಾರಿ ಸಭೆ, ಸಮಾರಂಭಗಳಲ್ಲಿ ಪೌಷ್ಟಿಕ ಆಹಾರ ನೀಡಲು ಸೂಚಿಸಿರುವ ಆರೋಗ್ಯ ಇಲಾಖೆ, ಸಿರಿಧಾನ್ಯ ಆಧಾರಿತ ಲಘು ಉಪಾಹಾರ, ಹಣ್ಣು–ತರಕಾರಿಗಳ ಸಲಾಡ್ ವಿತರಣೆಗೆ ಶಿಫಾರಸು ಮಾಡಿದೆ.

ಈ ಬಗ್ಗೆ ಇಲಾಖೆ ಆಯುಕ್ತ ಗುರುದತ್ತ ಹೆಗಡೆ ಅವರು ಸುತ್ತೋಲೆ ಹೊರಡಿಸಿದ್ದಾರೆ. ‘ಸರ್ಕಾರಿ ಕಚೇರಿ ಹಾಗೂ ಸಂಬಂಧಿತ ಸ್ಥಳಗಳಲ್ಲಿ ಪೌಷ್ಟಿಕ ಆಹಾರ ಮತ್ತು ಪಾನೀಯಗಳನ್ನು ನೀಡದಿರುವುದು ಗಮನಕ್ಕೆ ಬಂದಿದೆ. ಆದ್ದರಿಂದ ಸರ್ಕಾರಿ ಸಭೆಗಳಲ್ಲಿ ಇವುಗಳನ್ನೇ ನೀಡಬೇಕಿದೆ’ ಎಂದು ತಿಳಿಸಿರುವ ಅವರು, ಸರ್ಕಾರಿ ಕಚೇರಿ ಆವರಣದಲ್ಲಿರುವ ಎಲ್ಲ ಖಾನಾವಳಿ, ಹೋಟೆಲ್ ಹಾಗೂ ಕ್ಯಾಂಟೀನ್ಗಳಲ್ಲಿಯೂ ಪೌಷ್ಟಿಕ ಆಹಾರ ವಿತರಣೆಗೆ ಶಿಫಾರಸು ಮಾಡಿದ್ದಾರೆ.

ಏನೆಲ್ಲ ವಿತರಣೆಗೆ ಶಿಫಾರಸು?

ಸಿರಿಧಾನ್ಯವುಳ್ಳ ಲಘು ಉಪಾಹಾರ

ಕಡಿಮೆ ಕೊಬ್ಬು, ಕಡಿಮೆ ಸಕ್ಕರೆ, ಹೆಚ್ಚು ನಾರು ಇರುವ ಹಾಗೂ ಅಜಿನೊಮೋಟೊ ಬಳಸದ ಲಘು ಉಪಾಹಾರ

ಕತ್ತರಿಸಿದ ತಾಜಾ ಹಣ್ಣು ಹಾಗೂ ತರಕಾರಿಯಿಂದ ಸಿದ್ಧಪಡಿಸಿದ ಸಲಾಡ್ ಅಥವಾ ಮೊಳಕೆ ಕಟ್ಟಿದ ಕಾಳುಗಳು

ಬೇಯಿಸಿದ ಹುರಳಿಕಾಳು, ಬಟಾಣಿ, ಜೋಳ

ಉಪ್ಪು ರಹಿತ ಹುರಿದ ಬೀಜಧಾನ್ಯಗಳಾದ ಬಾದಾಮಿ, ವಾಲ್ನಟ್, ನೆಲಗಡಲೆ

ಕುಂಬಳಕಾಯಿ, ಸೂರ್ಯಕಾಂತಿ, ಕುಸುಬೆ, ಅಗಸೆ ಮುಂತಾದ ಹುರಿದ ಬೀಜಗಳು

ಕಡಿಮೆ ಕೊಬ್ಬು ಹಾಗೂ ಕಡಿಮೆ ಸಕ್ಕರೆಯುಳ್ಳ ಲಘು ಪಾನೀಯ

ಗ್ರೀನ್ ಟೀ ಅಥವಾ ಕಡಿಮೆ ಕೊಬ್ಬುಳ್ಳ ಮಜ್ಜಿಗೆ

ಸ್ಥಳೀಯವಾಗಿ ಸಂಸ್ಕರಿಸಿದ ಅಥವಾ ಕುದಿಸಿದ ನೀರನ್ನು ಗಾಜಿನ ಬಾಟಲ್ನಲ್ಲಿ ನೀಡುವುದು

ಏನೆಲ್ಲ ನೀಡದಂತೆ ಸೂಚನೆ?

ಮೈಕ್ರೋವೇವ್ನಲ್ಲಿ ತಯಾರಿಸಿರುವ, ಬಿಸಿ ಮಾಡಿರುವ ಆಹಾರ

ಕೈಗಾರಿಕೆಗಳಿಂದ ಸಂಸ್ಕರಿಸಲ್ಪಟ್ಟ ಆಹಾರ

ಅಧಿಕ ಕೊಬ್ಬು, ಎಣ್ಣೆ, ಮಸಾಲೆಯುಕ್ತ ಆಹಾರ

ಎಣ್ಣೆಯಲ್ಲಿ ಕರಿದ ತಿಂಡಿಗಳು

ಕಾರ್ಬೋನೆಟೆಡ್ ಪಾನೀಯಗಳು

ಅಧಿಕ ಸಕ್ಕರೆ ಸೇರಿಸಿರುವ ಹಣ್ಣಿನ ರಸಗಳು

ಆಲ್ಕೋಹಾಲ್ ಆಧರಿತ ಪಾನೀಯಗಳು

ಹಾಲು, ಕಾಫಿ, ಚಹಾ

ಪ್ಲಾಸ್ಟಿಕ್ ಬಾಟಲಿಯಲ್ಲಿನ ನೀರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.