ಬೆಂಗಳೂರು: ಗುಜರಿ ವಸ್ತುಗಳ ಹೆಸರಿನಲ್ಲಿ ರಾಜ್ಯ ಸರ್ಕಾರಕ್ಕೆ ₹420 ಕೋಟಿಯಷ್ಟು ಜಿಎಸ್ಟಿ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ (ಐಟಿಸಿ) ವಂಚಿಸಿದ್ದ ಪ್ರಕರಣದಲ್ಲಿ ನಗರದ ಪ್ರತಿಷ್ಠಿತ ಟ್ರಾವೆಲ್ಸ್ ಕಂಪನಿ ಒಂದಕ್ಕೆ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ.

ನಗರದ ನಾಯಂಡಹಳ್ಳಿಯಲ್ಲಿ ಎಸ್ಕೆಎಸ್ ಟ್ರೇಡರ್ಸ್ ಮತ್ತು ಕೆಎಚ್ ಇ–ವೇಸ್ಟ್ ರಿಸೈಕ್ಲರ್ ಎಂಬ ಕಂಪನಿಗಳನ್ನು ನಡೆಸುತ್ತಿದ್ದ ಸಲೀಮುಲ್ಲಾ ಬೇಗ್ ಮತ್ತು ಹಸನ್ ಬೇಗ್ ಎಂಬುವವರನ್ನು ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಈಚೆಗೆ ಬಂಧಿಸಿದ್ದರು. ಈ ಇಬ್ಬರೂ 127 ಖೊಟ್ಟಿ ಕಂಪನಿಗಳನ್ನು ಸೃಷ್ಟಿಸಿ, ಅವುಗಳೊಂದಿಗೆ ₹2,384 ಕೋಟಿಯಷ್ಟು ವಹಿವಾಟು ನಡೆಸಿರುವುದಾಗಿ ಇನ್ವಾಯ್ಸ್ಗಳನ್ನು ಸೃಷ್ಟಿಸಿದ್ದರು.

ತೆರಿಗೆ ಮತ್ತು ಐಟಿಸಿ ವಂಚನೆ ಬಗ್ಗೆ ನೋಟಿಸ್ ನೀಡುತ್ತಿದ್ದಂತೆಯೇ ಖೊಟ್ಟಿ ಕಂಪನಿಗಳ ನೋಂದಣಿ ರದ್ದುಮಾಡಿಸುತ್ತಿದ್ದರು. ಇವರು ₹2,000 ಕೋಟಿಗೂ ಹೆಚ್ಚು ಮೊತ್ತದ ನಕಲಿ ಇನ್ವಾಯ್ಸ್ ಮತ್ತು ಇ–ವೇ ಬಿಲ್ಗಳನ್ನು ಸೃಷ್ಟಿಸಿದ್ದಾರೆ. ಇ–ವೇ ಬಿಲ್ಗಳಲ್ಲಿ ಟ್ರಕ್ಗಳ ನೋಂದಣಿ ಸಂಖ್ಯೆ ನಮೂದಾಗಿದ್ದು, ಅವುಗಳ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.

ಬಸ್ ಮತ್ತು ಟ್ರಕ್ ಪಾರ್ಸಲ್ ಸೇವೆ ಒದಗಿಸುವ ನಗರದ ಪ್ರತಿಷ್ಠಿತ ಟ್ರಾವೆಲ್ಸ್ ಕಂಪನಿಯ 25ಕ್ಕೂ ಹೆಚ್ಚು ವಾಹನಗಳ ನೋಂದಣಿ ಸಂಖ್ಯೆ ಈ ಇ–ವೇ ಬಿಲ್ಗಳಲ್ಲಿ ನಮೂದಾಗಿದೆ. ಇ–ವೇ ಬಿಲ್ಗಳಲ್ಲಿ ಕೆಲವು ಬಸ್ಗಳ ನೋಂದಣಿ ಸಂಖ್ಯೆಯೂ ಇದೆ. ಆರೋಪಿಗಳು ಈ ಟ್ರಕ್ಗಳ ಸೇವೆಯನ್ನು ಪಡೆದುಕೊಂಡಿದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಟ್ರಾವೆಲ್ಸ್ ಕಂಪನಿಗೆ ನೋಟಿಸ್ ನೀಡಲಾಗಿದೆ ಎಂದು ಮಾಹಿತಿ ನೀಡಿವೆ.

ಇ–ವೇ ಬಿಲ್ಗಳಲ್ಲಿ ನಮೂದಾಗಿರುವ 25 ಟ್ರಕ್ಗಳ ಪೈಕಿ, 20 ಟ್ರಕ್ಗಳನ್ನು ಟ್ರಾವೆಲ್ಸ್ ಕಂಪನಿಯು ಇತರರಿಂದ ಗುತ್ತಿಗೆ ಪಡೆದುಕೊಂಡಿತ್ತು. ಆ ಟ್ರಕ್ಗಳನ್ನು ಎಸ್ಕೆಎಸ್ ಟ್ರೇಡರ್ಸ್ ಮತ್ತು ಕೆಎಚ್ ಇ–ವೇಸ್ಟ್ ರಿಸೈಕ್ಲರ್ ಕಂಪನಿಗಳಿಗೆ ಬಾಡಿಗೆಗೆ ನೀಡಲಾಗಿತ್ತೇ ಎಂಬುದನ್ನು ಪರಿಶೀಲಿಸಿ ಮಾಹಿತಿ ಒದಗಿಸುತ್ತೇವೆ ಎಂದು ಟ್ರಾವೆಲ್ಸ್ ಕಂಪನಿಯು ತಿಳಿಸಿದೆ ಎಂದು ವಿವರಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.