ಬೆಂಗಳೂರು: ‘ಪಕ್ಷಕ್ಕಿಂತ ಯಾರೂ ದೊಡ್ಡವರಿಲ್ಲ. ಜಮೀರ್ ಕೂಡ ಪಕ್ಷ ಕ್ಕಿಂತ ದೊಡ್ಡವನಲ್ಲ. ಪಕ್ಷ ವಿರೋಧಿ ಕೆಲಸ ನಾನು ಮಾಡಿದರೂ ಶಿಸ್ತು ಕ್ರಮ ಆಗಬೇಕು. ಆದರೆ, ಅದಕ್ಕೊಂದು ರೀತಿ, ನೀತಿ ಇದೆಯಲ್ಲವೇ’ ಎಂದು ವಸತಿ ಸಚಿವ ಬಿ.ಝಡ್. ಜಮೀರ್ ಅಹಮದ್ ಖಾನ್ ಪ್ರಶ್ನಿಸಿದರು.

ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರನ್ನು ಗುರುವಾರ ಭೇಟಿ ಮಾಡಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಜಮೀರ್, ‘ಪಕ್ಷ ವಿರೋಧಿ ಚಟುವಟಿಕೆ ನಡೆಸಿದರೆ ಮೊದಲು ನೋಟಿಸ್ ನೀಡಬೇಕು. ಆಮೇಲೆ ಕ್ರಮ ಕೈಗೊಳ್ಳಬೇಕು’ ಎಂದ ರು. ಆ ಮೂಲಕ, ನಸೀರ್ ಅಹಮದ್ ಮತ್ತು ಅಬ್ದುಲ್ ಜಬ್ಬಾರ್ ವಿರುದ್ಧದ ಕ್ರಮಕ್ಕೆ ಜಮೀರ್ ಅಸಮಾಧಾನ ವ್ಯಕ್ತಪಡಿಸಿದರು.

‘ಕಾಂಗ್ರೆಸ್ ಪಕ್ಷದಲ್ಲಿ ನನ್ನನ್ನು ಯಾರೂ ಗುರಿ ಮಾಡಿಲ್ಲ. ಹಾಗೆಂದು ನಾನೊಬ್ಬ ಮಾತ್ರಮುಸ್ಲಿಂ ನಾಯಕನೇ? ನಾನು ನಾಯಕನೇ ಅಲ್ಲ. ಪಕ್ಷದಲ್ಲಿ ಆರೋಪ ಮಾಡಿದ ವರು ಯಾರೂ ನನ್ನ ಹೆಸರು ಹೇಳಿಲ್ಲ. ಧರ್ಮ ಗುರುಗಳು ಹೇಳಿದ್ದನ್ನು ನೀವು ಅವರ ಬಳಿಯೇ ಕೇಳಬೇಕು. ಯಾರೂ ನನ್ನ ಹೆಸರನ್ನು ಹೇಳಲಿಲ್ಲ’ ಎಂದರು.

‘ಧರ್ಮಗುರುಗಳ ಜೊತೆ ಶುಕ್ರವಾರ ನಮಾಜ್ ಬಳಿಕ ಮಾತನಾಡಿ, ಗೊಂದಲಗಳನ್ನು ಬಗೆಹರಿಸುತ್ತೇನೆ. ರಿಜ್ವಾನ್ ಅರ್ಷದ್, ಎನ್.ಎ. ಹ್ಯಾರಿಸ್, ಸಲೀಂಅಹಮದ್ ಕೂಡ ಕರೆ ಮಾಡಿ ಮಾತಾಡಿ ದ್ದಾರೆ. ದಾವಣಗೆರೆ ದಕ್ಷಿಣ ಕ್ಷೇತ್ರದ ಟಿಕೆಟ್ ಕೊಟ್ಟಿಲ್ಲ ಎಂದು ಸಮುದಾಯಕ್ಕೆ ಬೇಸರ ಆಗಿರುವುದು ನಿಜ. ಧರ್ಮಗುರುಗಳಿಗೂ ಅಸಮಾಧಾನ ಆಗಿದೆ’ ಎಂದರು.

‘ಸಾರ್ವತ್ರಿಕ ಚುನಾವಣೆಯಲ್ಲಿ ಟಿಕೆಟ್ ಕೊಡೋಣವೆಂದು ಹೈಕಮಾಂಡ್ ಹೇಳಿದೆ’ ಎಂದೂ ಹೇಳಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260424-51-883491989

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.