ಬೆಂಗಳೂರು: ಜೆಡಿಎಸ್ ಮುಖಂಡ ಬಿ.ಎಂ. ಫಾರೂಕ್ ಮಾಲೀಕತ್ವದ ಮೆ. ಫಿಜಾ ಗ್ಲೋಬಲ್ ಆಗ್ರೋವೆಂಚರ್ಸ್ ಸಂಸ್ಥೆಯ ಹಿಡಿತದಲ್ಲಿರುವ ಪೂಜೇನಹಳ್ಳಿ ಸಮಗ್ರ ಶೀತಲ ಸರಪಳಿ ಘಟಕವನ್ನು ಕೆಪೆಕ್ಗೆ ವಾಪಸ್ ಮಾಡಿ, ಜಾಗ ಖಾಲಿ ಮಾಡುವಂತೆ ಸ್ವಾಧೀನ ಅಧಿಕಾರಿ ಸಿ.ಎನ್. ಶಿವಪ್ರಕಾಶ್ ನೋಟಿಸ್ ನೀಡಿದ್ದಾರೆ.

ಕೆಪೆಕ್ ಸಂಸ್ಥೆಯು ತನ್ನ ಆಂತರಿಕ ಸಂಪನ್ಮೂಲ ಹಾಗೂ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ದೇವನಹಳ್ಳಿ ತಾಲ್ಲೂಕಿನ ಕನ್ನಮಂಗಲ ಗ್ರಾಮದ ಪೂಜೇನಹಳ್ಳಿ ತೋಟಗಾರಿಕಾ ಕ್ಷೇತ್ರದಲ್ಲಿ ₹27.50 ಕೋಟಿ ವೆಚ್ಚದಲ್ಲಿ ಸಮಗ್ರ ಶೀತಲ ಸರಪಳಿ ಘಟಕವನ್ನು ನಿರ್ಮಿಸಿತ್ತು.

15 ವರ್ಷಗಳ ಅವಧಿಗೆ ವಾರ್ಷಿಕ ₹1.55 ಕೋಟಿ ಪರವಾನಗಿ ಶುಲ್ಕದ ಆಧಾರದ ಮೇಲೆ ಕಾರ್ಯಾಚರಣೆ ಮತ್ತು ನಿರ್ವಹಣೆ ಒಪ್ಪಂದವನ್ನು ಮೆ. ಫಿಜಾ ಗ್ಲೋಬಲ್ ಆಗ್ರೋವೆಂಚರ್ಸ್ ಸಂಸ್ಥೆಯೊಂದಿಗೆ 2024ರಲ್ಲಿ ಮಾಡಿಕೊಂಡು ಈ ಸಂಸ್ಥೆಗೆ ವಹಿಸಲಾಗಿತ್ತು.

ಮೊದಲ ವರ್ಷ ಶೇ 10ರಷ್ಟು ಮಾತ್ರ ಫಿಜಾ ಗ್ಲೋಬಲ್ ಆಗ್ರೋವೆಂಚರ್ಸ್ ಪಾವತಿಸಿದ್ದು, ಉಳಿದ ಮೊತ್ತ ಪಾವತಿ ಮಾಡಿರಲಿಲ್ಲ. ಬಾಕಿ ಮೊತ್ತವು ₹ 2.48 ಕೋಟಿಗೆ ಏರಿದ್ದು, ಪ್ರತಿದಿನ ₹ 50,969 ಹೆಚ್ಚಾಗುತ್ತಿದೆ. ಅಲ್ಲದೇ ಉದ್ದೇಶಿತ ಕೆಲಸಕ್ಕಾಗಿ ಸೌಲಭ್ಯವನ್ನು ಬಳಸದೇ ಅನ್ಯ ಉದ್ದೇಶಕ್ಕೆ ಬಳಸಲಾಗಿದೆ. ವಿದ್ಯುತ್ ಬಿಲ್ ಪಾವತಿ ಮಾಡದ ಕಾರಣ ವಿದ್ಯುತ್ ಸಂಪರ್ಕವನ್ನು ಬೆಸ್ಕಾಂ ಕಡಿತಗೊಳಿಸಿದೆ. ಮಾಲಿನ್ಯ ನಿಯಂತ್ರಣ ಮಂಡಳಿಯ ನಿಯಮಗಳನ್ನು ಪಾಲನೆ ಮಾಡಿಲ್ಲ. ಬಾಳೆಹಣ್ಣು ಸಂಸ್ಕರಣಾ ಹಾಲ್ನಲ್ಲಿ ದಾಖಲೆಗಳಿಲ್ಲದ ಸಿದ್ಧ ಉಡುಪುಗಳು ಪತ್ತೆಯಾಗಿದ್ದವು.

ಈ ಎಲ್ಲ ಕಾರಣಗಳಿಗಾಗಿ 2025ರ ಜುಲೈ 28ರಂದು ಒಪ್ಪಂದ ರದ್ದುಗೊಳಿಸಲಾಗಿತ್ತು. ಆದರೆ, ಈ ಆವರಣವನ್ನು ತೊರೆಯದೇ ಆಕ್ರಮಿಸಿಕೊಂಡಿದ್ದು, ನೋಟಿಸ್ ನೀಡಿದರೂ ವಿಚಾರಣೆಗೆ ಹಾಜರಾಗಿರಲಿಲ್ಲ.

ಕರ್ನಾಟಕ ಸಾರ್ವಜನಿಕ ಆವರಣಗಳ (ಅನಧಿಕೃತ ಆಕ್ರಮಣದಾರರನ್ನು ಒಕ್ಕಲೆಬ್ಬಿಸುವ) ಕಾಯ್ದೆ, 1974 ರ ಕಲಂ 5 ರ ಉಪ-ಕಲಂ (1) ರ ಅಡಿಯಲ್ಲಿ ದತ್ತವಾದ ಅಧಿಕಾರವನ್ನು ಚಲಾಯಿಸಿ, ನಾನು ಈ ಮೂಲಕ ಮೆಸರ್ಸ್ ಫಿಜಾ ಗ್ಲೋಬಲ್ ಆಗ್ರೋವೆಂಚರ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಅದರ ಎಲ್ಲಾ ಸಂಬಂಧಿತ ವ್ಯಕ್ತಿಗಳಿಗೆ ಈ ಆದೇಶ ಪ್ರಕಟವಾದ ನಲವತ್ತೈದು ದಿನಗಳೊಳಗೆ ಆ ಸಾರ್ವಜನಿಕ ಆವರಣವನ್ನು ಖಾಲಿ ಮಾಡಬೇಕು. ವಿಫಲವಾದರೆ ಬಲಪ್ರಯೋಗದ ಮೂಲಕ ಒಕ್ಕಲೆಬ್ಬಿಸಲಾಗುವುದು. ಅನಧಿಕೃತ ಆಕ್ರಮಣದ ಅವಧಿಯ ಹಾನಿ ಮತ್ತು ಬಾಕಿ ಶುಲ್ಕವನ್ನು ಭೂಕಂದಾಯ ಬಾಕಿಯಂತೆ ವಸೂಲಿ ಮಾಡಲಾಗುವುದು’ ಎಂದು ಕೆಪೆಕ್ ವ್ಯವಸ್ಥಾಪಕ ನಿರ್ದೇಶಕರೂ ಸ್ವಾಧೀನ ಅಧಿಕಾರಿಯೂ ಆಗಿರುವ ಸಿ.ಎನ್. ಶಿವಪ್ರಕಾಶ್ ಆದೇಶದಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.