ಕಲಬುರಗಿ: ಈವರೆಗೆ ವಿಶೇಷ ರೈಲಾಗಿದ್ದ ಬೆಂಗಳೂರು ಕಂಟೋನ್ಮೆಂಟ್–ಕಲಬುರಗಿ ರೈಲನ್ನು (16563/ 16564) ಕಾಯಂ ಆಗಿ ಓಡಿಸಲು ರೈಲ್ವೆ ಮಂಡಳಿ ಅನುಮೋದನೆ ನೀಡಿದೆ.

ಪ್ರತಿ ಶನಿವಾರ ರಾತ್ರಿ 10ಕ್ಕೆ ಬೆಂಗಳೂರು ಕಂಟೋನ್ಮೆಂಟ್ನಿಂದ ಹೊರಡುವ ರೈಲು ಭಾನುವಾರ ಬೆಳಿಗ್ಗೆ 10.20ಕ್ಕೆ ಕಲಬುರಗಿ ತಲುಪಲಿದೆ. ಕಲಬುರಗಿಯಿಂದ ಭಾನುವಾರ ಬೆಳಿಗ್ಗೆ 11.20ಕ್ಕೆ ಹೊರಡುವ ರೈಲು (16564) ಅದೇ ದಿನ ರಾತ್ರಿ 11ಕ್ಕೆ ತಲುಪಲಿದೆ.

ವಾರದಲ್ಲಿ ಎರಡು ದಿನ ಸಂಚರಿಸುವ ಬೆಂಗಳೂರು ಎಸ್ಎಂವಿಟಿ–ಕಲಬುರಗಿ ರೈಲನ್ನು ಸಹ ಕಾಯಂಗೊಳಿಸಲಾಗಿದೆ. ಪ್ರತಿ ಶುಕ್ರವಾರ ಹಾಗೂ ಭಾನುವಾರ ರಾತ್ರಿ 9.15ಕ್ಕೆ ಬೆಂಗಳೂರಿನಿಂದ ಹೊರಡುವ ರೈಲು (16559) ಮರುದಿನ ಬೆಳಿಗ್ಗೆ 9.10ಕ್ಕೆ ಕಲಬುರಗಿಗೆ ಬರಲಿದೆ. ಮಧ್ಯಾಹ್ನ 12.15ಕ್ಕೆ ಬೀದರ್ ತಲುಪಲಿದೆ. ಬೀದರ್ನಿಂದ ಪ್ರತಿ ಶನಿವಾರ ಮತ್ತು ಸೋಮವಾರ ಮಧ್ಯಾಹ್ನ 2ಕ್ಕೆ ಹೊರಡುವ ರೈಲು (16560) ಸಂಜೆ 5.05ಕ್ಕೆ ಕಲಬುರಗಿ ತಲುಪಲಿದೆ. ಭಾನುವಾರ ಮತ್ತು ಮಂಗಳವಾರ ಬೆಳಿಗ್ಗೆ 4ಕ್ಕೆ ಬೆಂಗಳೂರು ತಲುಪಲಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260323-33-614608261

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.