ಬೆಂಗಳೂರು: ‘ಕನಕದಾಸರ ಸಮಗ್ರ ಸಾಹಿತ್ಯ ಅನುವಾದ ಸಂಪುಟಗಳನ್ನು ವಿವಿಧ ಭಾಷೆಗಳ ಗ್ರಂಥಾಲಯ, ವಿಶ್ವವಿದ್ಯಾಲಯಗಳಿಗೆ ಮುದ್ರಿಸಲು ಬೇಕಾದ ಆರ್ಥಿಕ ನೆರವನ್ನು ಸರ್ಕಾರ ನೀಡಲಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂತಕವಿ ಕನಕದಾಸ ಮತ್ತು ತತ್ವಪದ ಕಾರರ ಅಧ್ಯಯನ ಕೇಂದ್ರ ಹೊರ ತಂದಿರುವ ಕನಕದಾಸರ ಸಮಗ್ರ ಸಾಹಿತ್ಯ ಸಂಪುಟಗಳ 14 ಭಾಷೆಗಳ 40 ಕೃತಿಗಳನ್ನು ನಗರದಲ್ಲಿ ಶುಕ್ರವಾರ ಜನಾರ್ಪಣೆಗೊಳಿಸಿ ಅವರು ಮಾತನಾಡಿದರು.

‘ಕನಕದಾಸರು ಕವಿ ಮಾತ್ರವಲ್ಲ. 16ನೇ ಶತಮಾನದಲ್ಲಿಯೇ ಸಮಾಜದ ಅಂಕುಡೊಂಕು ತಿದ್ದಿ ಮೂಢನಂಬಿಕೆಗಳನ್ನು ದೂರ ಮಾಡಲು ಕೀರ್ತನೆಗಳನ್ನು ಬರೆದರು. ಭಕ್ತಿಪಂಥಕ್ಕೆ ಮಾತ್ರ ಸೀಮಿತರಾಗದೇ ಸಮಾಜ ಸುಧಾರಕರಾಗಿಯೂ ಕೆಲಸ ಮಾಡಿದ್ದರಿಂದ ಅವರನ್ನು ವಿಶ್ವ ಮಾನವ ರಾಗಿಯೇ ನೋಡಬೇಕು. ಇಂದಿಗೂ ಬಸವಣ್ಣ, ಕನಕದಾಸರ ಸಮ ಸಮಾಜದ ಕನಸು ಈಡೇರಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ವಚನ ಸಾಹಿತ್ಯ, ದಾಸ ಸಾಹಿತ್ಯ ವಿಶ್ವದ ಹಲವು ಭಾಷೆಗಳಿಗೆ ಅನುವಾದಗೊಂಡಿವೆ. ಅದೇ ರೀತಿ ಕನಕದಾಸರ ಮೋಹನ ತರಂಗಿಣಿ, ಹರಿಭಕ್ತಿಸಾರ, ರಾಮಧಾನ್ಯ ಚರಿತ್ರೆ, ನಳಚರಿತ್ರೆ, ಕೀರ್ತನೆಗಳು ಹಾಗೂ ಮುಂಡಿಗೆಗಳನ್ನು ಹಲವು ಭಾಷೆಗಳಿಗೆ ಅನುವಾದ ಮಾಡಲಾಗಿದೆ. ಇದು ಸುಲಭದ ಕೆಲಸವಲ್ಲ. ಇದಕ್ಕಾಗಿ ಶ್ರಮಿಸಿದ ಅನುವಾದಕಾರರು, ಸಾಹಿತಿಗಳು ಅಭಿನಂದನಾರ್ಹರು. ಕೇಂದ್ರವು ಶ್ರದ್ಧೆ ಯಿಂದಲೇ ಮಹತ್ವದ ಕೆಲಸ ಮಾಡಿದೆ’ ಎಂದರು.

ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಮಾತನಾಡಿ,‘ಕನಕದಾಸರ ಸಮಗ್ರ ಸಾಹಿತ್ಯ ಅನುವಾದದ 14 ಭಾಷೆಗಳ ಸಂಪುಟಗಳನ್ನು ಉಚಿತವಾಗಿ ಆಯಾರಾಜ್ಯದ ಸಂಸ್ಕೃತಿ ಇಲಾಖೆ, ವಿಶ್ವ ವಿದ್ಯಾಲಯಗಳ ಗ್ರಂಥಾಲಯಗಳಿಗೆ ಒದಗಿಸಲು ಇಲಾಖೆ ಅನುಮತಿ ನೀಡಲಿದೆ’ ಎಂದು ಹೇಳಿದರು.

ಕೃತಿಗಳ ಕುರಿತು ಮಾತನಾಡಿದ ಚಿಂತಕ ಬಂಜಗೆರೆ ಜಯಪ್ರಕಾಶ್, ‘ಪ್ರಾಚೀನ ಭಾಷೆಗಳಿಗೆ ಕನಕದಾಸರ ಸಾಹಿತ್ಯ ಹಾಗೂ ಚಿಂತನೆಗಳು ಅನುವಾದಗೊಂಡು, ಅವರ ವಿಚಾರಗಳನ್ನು ಅಖಿಲ ಭಾರತ ಮಟ್ಟಕ್ಕೆ ತೆಗೆದುಕೊಂಡು ಹೋಗುತ್ತಿರು ವುದು ಸ್ತುತ್ಯರ್ಹ ಕಾರ್ಯ’ ಎಂದು ಹೇಳಿದರು.

‘ಹಾರ್ವರ್ಡ್ ವಿಶ್ವವಿದ್ಯಾಲಯದ ಸಂಸ್ಕೃತಿ ವಿಭಾಗದಲ್ಲಿ ಈಗಾಗಲೇ ಕುಮಾರವ್ಯಾಸರ ಕೃತಿಗಳನ್ನು ಇಂಗ್ಲಿಷ್ಗೆ ಅನುವಾದಿಸಲಾಗಿದೆ. ಕನಕದಾಸರ ವಿಚಾರಗಳು ಜಾಗತಿಕ ಮಟ್ಟಕ್ಕೂ ತಲುಪಬೇಕಾಗಿರುವುದರಿಂದ ಅಲ್ಲಿಯೂ ಅನುವಾದ ಮಾಡಿಸುವ ಕೆಲಸವನ್ನು ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರ ಮಾಡಬೇಕು’ ಎಂದು ಸಲಹೆ ನೀಡಿದರು.

ಶಾಸಕ ಆರ್.ಮುನಿರತ್ನ ಅಧ್ಯಕ್ಷತೆ ವಹಿಸಿದ್ದರು. ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ.ರೇವಣ್ಣ, ವಿಧಾನ ಪರಿಷತ್ನ ಸರ್ಕಾರದ ಮುಖ್ಯ ಸಚೇತಕ ಸಲೀಂ ಅಹಮದ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಜೆ.ಮಂಜುನಾಥ್, ಅಧ್ಯಯನ ಕೇಂದ್ರದ ಸದಸ್ಯ ಕಾರ್ಯದರ್ಶಿ ಎನ್.ಕರಿಯಪ್ಪ ಉಪಸ್ಥಿತರಿದ್ದರು.

'90 ಲಕ್ಷ ಉಳಿತಾಯ'

'ಕರ್ನಾಟಕ ಸರ್ಕಾರವು ಕನಕದಾಸರ ಸಮಗ್ರ ಸಾಹಿತ್ಯ ಸಂಪುಟಗಳ 40 ಕೃತಗಳ ಬಿಡುಗಡೆಗೆ ₹2 ಕೋಟಿ ಆರ್ಥಿಕ ನೆರವು ನೀಡಿದ್ದು, ಇದರಲ್ಲಿ ₹90 ಲಕ್ಷ ಉಳಿಸಿದ್ದೇವೆ. ಇದನ್ನು 14 ಭಾಷೆಗಳಿಗೆ ಅನುವಾದಗೊಂಡಿರುವ ರಾಜ್ಯಗಳ ಗ್ರಂಥಾಲಯಗಳಿಗೆ ಉಚಿತವಾಗಿ ವಿತರಣೆಗೆ ಬಳಸಲು ಅನುಮತಿ ನೀಡಬೇಕು' ಎಂದು ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ಅಧ್ಯಕ್ಷ ಕಾ.ತ.ಚಿಕ್ಕಣ್ಣ ತಿಳಿಸಿದರು.

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ವಾಗಿ ಮಾತನಾಡಿದ ಅವರು, 'ತುಳು, ಕೊಡವ, ಕೊಂಕಣಿ, ಬ್ಯಾರಿ, ತಮಿಳು, ತೆಲುಗು, ಮಲಯಾಳ, ಸಂಸ್ಕೃತ, ಇಂಗ್ಲಿಷ್, ಹಿಂದಿ, ಉರ್ದು, ಮರಾಠಿ, ಗುಜರಾತಿ, ಬೆಂಗಾಲಿ ಭಾಷೆಗಳ ಅನುವಾದಕರು, ವಿವಿಧ ಅಕಾಡೆಮಿಗಳ ಪ್ರಮುಖ ಸಹಕಾರದಿಂದ ಇದು ಸಾಧ್ಯವಾಗಿದೆ. ಕನಕ ಶಿಲ್ಪವನವನ್ನು ಕಲಾವಿದ ವೆಂಕಟಾಚಲಪತಿ ಹಾಗೂ ತಂಡ ದವರು ಬರೀ ₹12 ಲಕ್ಷಕ್ಕೆ ಮುಗಿಸಿಕೊಟ್ಟಿದ್ದಾರೆ' ಎಂದು ಶ್ಲಾಘಿಸಿದರು.

‘ಕಾಂಗ್ರೆಸ್ ಬಿಟ್ಟ ಮೇಲೆ ತೃಪ್ತಿಯಿಲ್ಲ’

‘ನಾನು ಹತ್ತು ವರ್ಷದ ಹಿಂದೆ ಶಾಸಕನಾದಾಗ ತೃಪ್ತಿಯಿಂದ ಇದ್ದೆ. ಅಲ್ಲಿದ್ದಾಗ ಸಿದ್ದರಾಮಯ್ಯ ಅವರು ನನ್ನನ್ನು ಚೆನ್ನಾಗಿಯೇ ನೋಡಿಕೊಂಡಿದ್ದರು. ಆ ಪಕ್ಷ ಬಿಟ್ಟು ಬಂದ ಮೇಲೆ ತೃಪ್ತಿಯೇ ಇಲ್ಲದಾಗಿದೆ’ ಎಂದು ರಾಜರಾಜೇಶ್ವರಿ ನಗರ ಕ್ಷೇತ್ರದ ಬಿಜೆಪಿ ಶಾಸಕ ಆರ್.ಮುನಿರತ್ನ ಹೇಳಿದರು.

ಸಂತಕವಿ ಕನಕದಾಸ ಮತ್ತು ತತ್ವ ಪದಕಾರರ ಅಧ್ಯಯನ ಕೇಂದ್ರ ಆಯೋಜಿಸಿದ್ದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಎದುರು ತಮ್ಮ ಕಷ್ಟ ಹೇಳಿಕೊಂಡರು.

‘2013ರಲ್ಲಿ ಮೊದಲ ಬಾರಿ ಕಾಂಗ್ರೆಸ್ನಿಂದ ಶಾಸಕನಾದಾಗ ಸಿದ್ದರಾಮಯ್ಯ ಅವರು ನಮ್ಮ ಕಷ್ಟಗಳಿಗೆ ಸ್ಪಂದಿಸುತ್ತಿದ್ದರು. ಆ ಪಕ್ಷ ಬಿಟ್ಟು ಬಂದ ನಂತರ, ನನ್ನ ಮೇಲೆ ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ. ಅದು ಕಡಿಮೆಯಾಗುವಂತೆ ಕಾಣಿಸುತ್ತಿಲ್ಲ’ ಎಂದು ಹೇಳಿದರು.

‘ಕೆಲವರು ನನಗೆ ಅಪಘಾತ ಆಗಿ ಬಿಡುತ್ತದೆ. ಹೃದಯಾಘಾತವೂ ಆಗಿ ಬಿಡಬಹುದು ಎಂದು ಅಂದುಕೊಂಡಿದ್ದರು. ಕ್ಷೇತ್ರದ ಜನರ ಆಶೀರ್ವಾದ ಇರುವವರೆಗೂ ಏನೂ ಆಗುವುದಿಲ್ಲ’ ಎಂದರು.

ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ, ಸಚಿವ ಶಿವರಾಜ ತಂಗಡಗಿ, ಗ್ಯಾರಂಟಿ ಸಮಿತಿಗಳ ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ.ರೇವಣ್ಣ ಅವರೊಂದಿಗೆ ಮುನಿರತ್ನ ಲವಲವಿಕೆಯಿಂದ ಇದ್ದರು. ಮುನಿರತ್ನ ಅವರು 2013, 2018ರಲ್ಲಿ ಕಾಂಗ್ರೆಸ್ನಿಂದ ಜಯಗಳಿಸಿದ್ದರು. 2019ರಲ್ಲಿ ಬಿಜೆಪಿ ಸೇರಿ ಆ ಪಕ್ಷದಿಂದ ಉಪಚುನಾವಣೆಯಲ್ಲಿ ಗೆದ್ದಿದ್ದರು. 2023ರಲ್ಲೂ ಬಿಜೆಪಿಯಿಂದ ಸ್ಪರ್ಧಿಸಿ ಶಾಸಕರಾಗಿದ್ದಾರೆ.

ನಾನು ಶಾಸಕನಾಗಿದ್ದಾಗ ಸತತ 10 ವರ್ಷ ಕಾಲ ಕನಕದಾಸರ ಜಯಂತಿಗೆ ಹೋಗಿ ಅವರ ವಿಚಾರಗಳನ್ನು ಜನರಿಗೆ ತಿಳಿಸುತ್ತಿದ್ದೆ. ಇದರಿಂದಲೇ ನನ್ನ ರಾಜಕೀಯ ಬೆಳವಣಿಗೆಗೂ ಅನುಕೂಲ ಆಯಿತು.
ಸಿದ್ದರಾಮಯ್ಯ, ಮುಖ್ಯಮಂತ್ರಿ

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260516-4-231291521

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.