ಬೆಂಗಳೂರು: ಏರ್ಪೋರ್ಟ್ಸ್ ಕೌನ್ಸಿಲ್ ಇಂಟರ್ನ್ಯಾಷನಲ್ (ಎಸಿಐ) ಏಷ್ಯಾ-ಪೆಸಿಫಿಕ್ ಮತ್ತು ಮಧ್ಯಪ್ರಾಚ್ಯ ಸುರಕ್ಷತಾ ಮಾನ್ಯತಾ ಪ್ರಶಸ್ತಿ 2026ರಲ್ಲಿ ‘ಡೈಮಂಡ್ ಅವಾರ್ಡ್’ಗೆ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪಾತ್ರವಾಗಿದೆ.

ಸುರಕ್ಷಾ ಕ್ರಮಗಳನ್ನು ಉತ್ತೇಜಿಸುವ, ಪರಿಣಾಮಕಾರಿ, ಪ್ರಾಯೋಗಿಕ ಮತ್ತು ನವೀನ ಪರಿಹಾರ ಕ್ರಮಗಳ ಮೂಲಕ ಸುರಕ್ಷತೆಯನ್ನು ನಿರ್ವಹಿಸುವ ವಿಮಾನ ನಿಲ್ದಾಣ ನಿರ್ವಾಹಕರಿಗೆ ಈ ಪ್ರಶಸ್ತಿ ನೀಡಲಾಗುತ್ತದೆ. ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರನ್ವೇ ಸುರಕ್ಷತೆ ಮೇಲಿನ ನಿರಂತರ ಗಮನ ಮತ್ತು ವಿಮಾನ ನಿಲ್ದಾಣ ಪರಿಸರದ ವಿವಿಧ ಪಾಲುದಾರರ ಸಹಯೋಗದೊಂದಿಗೆ ಜಾರಿಯಾಗಿರುವ ದತ್ತಾಂಶ ಆಧಾರಿತ ಕಾರ್ಯಾಚರಣೆ ಮಾದರಿಗೆ ಪ್ರಶಸ್ತಿ ಲಭಿಸಿದೆ.

ರನ್ವೇ ಸೇಫ್ಟಿ ಟೀಮ್ (ಆರ್ಎಸ್ಟಿ) ನೇತೃತ್ವದಲ್ಲಿ ರೂಪಿಸಲಾದ ಸ್ವದೇಶಿ ‘ರನ್ವೇ ಸೇಫ್ಟಿ ಮೆಚ್ಯುರಿಟಿ ಮ್ಯಾಟ್ರಿಕ್ಸ್’, ಅಪಾಯದ ಸ್ಥಳಗಳ ನಿರ್ವಹಣಾ ಕ್ರಮಗಳು, ಪೈಲಟ್ ಜಾಗೃತಿ ಕಾರ್ಯಕ್ರಮಗಳು, ಸುಧಾರಿತ ಫಾರಿನ್ ಆಬ್ಜೆಕ್ಟ್ ಡೆಬ್ರಿಸ್ (ಎಫ್ಒಡಿ) ನಿರ್ವಹಣಾ ಪದ್ಧತಿ ಹಾಗೂ ಏರ್ಸೈಡ್ ಸುರಕ್ಷತೆ ಮತ್ತು ಕಾರ್ಯಾಚರಣಾ ದಕ್ಷತೆಯನ್ನು ಹೆಚ್ಚಿಸುವ ನಿರಂತರ ಕ್ರಮಗಳು ಈ ಸಾಧನೆಗೆ ಪ್ರಮುಖ ಕಾರಣ ಎಂದು ಮುಖ್ಯ ಕಾರ್ಯಾಚರಣೆ ಅಧಿಕಾರಿ ಗಿರೀಶ್ ನಾಯರ್ ಮಾಹಿತಿ ನೀಡಿದ್ದಾರೆ.

‘ವಿಮಾನಯಾನ ಸುರಕ್ಷತೆ ಮತ್ತು ಕಾರ್ಯಾಚರಣೆ ದಕ್ಷತೆ ನಮ್ಮ ಉದ್ಯಮದ ಮೂಲಾಧಾರ. ಹೆಚ್ಚುತ್ತಿರುವ ಸಂಕೀರ್ಣ ಕಾರ್ಯಾಚರಣೆ ಪರಿಸರದಲ್ಲಿ ಪ್ರಯಾಣಿಕರ ವಿಶ್ವಾಸವನ್ನು ಉಳಿಸಿಕೊಳ್ಳಲು ಸುರಕ್ಷಿತ ಕಾರ್ಯಾಚರಣೆ ಮತ್ತು ರನ್ವೇ ನಿರ್ವಹಣೆ ಅತ್ಯಂತ ಪ್ರಮುಖವಾಗಿದೆ. ಈ ಪ್ರದೇಶದ ವಿಮಾನ ನಿಲ್ದಾಣವು ಬದಲಾಗುತ್ತಿರುವ ಪರಿಸ್ಥಿತಿಗೆ ಹೊಂದಿಕೊಳ್ಳುವಲ್ಲಿ ಅತ್ಯುತ್ತಮ ನಾಯಕತ್ವ ಮತ್ತು ಸ್ಥೈರ್ಯವನ್ನು ಪ್ರದರ್ಶಿಸಿವೆ’ ಎಂದು ಎಸಿಐ ಏಷ್ಯಾ-ಪೆಸಿಫಿಕ್ ಮತ್ತು ಮಧ್ಯಪ್ರಾಚ್ಯದ ಮಹಾನಿರ್ದೇಶಕ ಸ್ಟೆಫಾನೊ ಬರೋನ್ಸಿ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260602-4-1305870463

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.