ಬೆಂಗಳೂರು: ‘ನಾನು ಕನ್ನಡದ ಅಭಿಮಾನಿಯಾಗಿದ್ದು, ನ್ಯಾಯಾಲಯದ ವ್ಯವಹಾರಗಳು ಕಡ್ಡಾಯವಾಗಿ ಇಂಗ್ಲಿಷ್ನಲ್ಲಿ ಇರಬೇಕಾದ ಕಾರಣ ಅನಿವಾರ್ಯವಾಗಿ ಆಂಗ್ಲ ಭಾಷೆ ಬಳಸಿದ್ದೇನೆ’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ ) ಅಧ್ಯಕ್ಷ ಸ್ಥಾನದಿಂದ ವಜಾಗೊಂಡಿರುವ ಮಹೇಶ ಜೋಶಿ ತಿಳಿಸಿದ್ದಾರೆ.

‘ಕನ್ನಡದಲ್ಲಿ ವ್ಯವಹರಿಸುವಂತೆ’ಬರೆದಿದ್ದ ಕಸಾಪ ಆಡಳಿತಾಧಿಕಾರಿ ಕೆ.ಎ. ದಯಾನಂದ ಅವರು ಮನವಿಪತ್ರಕ್ಕೆ ಸ್ಪಷ್ಟನೆ ನೀಡಿರುವ ಅವರು, ‘ನಾನು ಪರಿಷತ್ತಿಗೆ ಮಾಹಿತಿ ಹಕ್ಕಿನಡಿ ಕೇಳಿರುವ ವಿವರಗಳು ಹೈಕೋರ್ಟ್ಗೆ ಸಲ್ಲಿಸಲು ಅಗತ್ಯವಾಗಿವೆ. ಸಂವಿಧಾನದ ಅನುಚ್ಛೇದ 348ರಲ್ಲಿ ತಿಳಿಸಿರುವಂತೆ, ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ತೀರ್ಪುಗಳೂ ಸೇರಿದಂತೆ ಎಲ್ಲ ವ್ಯವಹಾರಗಳು ಕಡ್ಡಾಯವಾಗಿ ಇಂಗ್ಲಿಷ್ನಲ್ಲಿ ಇರಬೇಕಾಗಿದೆ. ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಿರುವ ಅರ್ಜಿ ಇಂಗ್ಲಿಷ್ನಲ್ಲಿ ಇರುವುದರಿಂದ, ಈ ಅರ್ಜಿಯ ಪ್ರತಿಯನ್ನು ಹೈಕೋರ್ಟ್ಗೆ ಸಲ್ಲಿಸಿ, ‘ಕಸಾಪದಿಂದ ಬರುವ ಉತ್ತರಕ್ಕಾಗಿ ಕಾಯುತ್ತಿರುವೆ’ ಎಂಬ ವಿಷಯವನ್ನು ನ್ಯಾಯಾಲಯದ ಗಮನಕ್ಕೆ ತರುವ ಉದ್ದೇಶದಿಂದ ಅನಿವಾರ್ಯವಾಗಿ ಇಂಗ್ಲಿಷ್ ಭಾಷೆ ಬಳಸಿದ್ದೇನೆ’ ಎಂದಿದ್ದಾರೆ.

‘ಪ್ರಾಥಮಿಕ ಶಾಲೆಯಿಂದ ಪ್ರೌಢ ಶಿಕ್ಷಣದವರೆಗೆ ಕನ್ನಡ ಭಾಷೆಯಲ್ಲಿಯೇ ಅಧ್ಯಯನ ಮಾಡಿದ್ದೇನೆ. ಪದವಿಯಲ್ಲಿ ಐಚ್ಛಿಕ ಕನ್ನಡ ವಿಷಯದೊಂದಿಗೆ ಅಧ್ಯಯನ ಮಾಡಿದ್ದು, ಮುಂದೆ ಕೇಂದ್ರ ನಾಗರೀಕ ಸೇವಾ ಸ್ಪರ್ಧೆಗಳಲ್ಲಿ ಕನ್ನಡದಲ್ಲಿಯೇ ಬರೆದು ಉತ್ತೀರ್ಣನಾಗಿದ್ದೇನೆ. ನನ್ನ ಸಹಿ, ರಹದಾರಿ ಸೇರಿದಂತೆ ಎಲ್ಲ ದಾಖಲೆಗಳಲ್ಲಿಯೂ ಕನ್ನಡ ಇರುತ್ತದೆ. ಇದುವೇ ನನ್ನ ಕನ್ನಡದ ಅಭಿಮಾನಕ್ಕೆ ಸಾಕ್ಷಿ’ ಎಂದು ಹೇಳಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260419-4-1695350989

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.