ಬೆಂಗಳೂರು: ಹೃದಯದ ಕವಾಟಕ್ಕೆ ಸಂಬಂಧಿಸಿದ ಕಾಯಿಲೆಯಾದ ‘ಅಯೋರ್ಟಿಕ್ ರಿಗರ್ಜಿಟೇಷನ್’ಗೆ ಒಳಗಾದ ರೋಗಿಗಳಿಗೆ ನಾರಾಯಣ ಹೆಲ್ತ್ ಸಿಟಿ ವೈದ್ಯರು ವಿಶೇಷ ಟಿಎವಿಆರ್ (ಟ್ರಾನ್ಸ್ಕ್ಯಾಥೆಟರ್ ವಾಲ್ವ್ ರಿಪ್ಲೇಸ್ಮೆಂಟ್) ಸಾಧನ ಅಳವಡಿಸಿದ್ದಾರೆ.

ಆಸ್ಪತ್ರೆಯ ಹೃದ್ರೋಗ ತಜ್ಞ ಡಾ. ಸೂರಜ್ ನರಸಿಂಹನ್ ಅವರು ಟಿಎವಿಆರ್ ಸಾಧನ ಅಳವಡಿಕೆ ಮೂಲಕ ಚಿಕಿತ್ಸೆ ಒದಗಿಸಿದ್ದಾರೆ.

‘ಅಯೋರ್ಟಿಕ್ ರಿಗರ್ಜಿಟೇಷನ್ ಕವಾಟದ ಕಾಯಿಲೆಯಾಗಿದೆ. 70 ವರ್ಷ ಮೇಲ್ಪಟ್ಟವರಲ್ಲಿ ಶೇ 2ಕ್ಕಿಂತ ಹೆಚ್ಚು ಜನರು ಈ ಕಾಯಿಲೆಯ ಮಧ್ಯಮ ಅಥವಾ ತೀವ್ರ ಸ್ವರೂಪದ ರೋಗ ಲಕ್ಷಣ ಹೊಂದಿರುತ್ತಾರೆ. ಕಳೆದೊಂದು ದಶಕದಲ್ಲಿ ವೈದ್ಯಕೀಯ ತಂತ್ರಜ್ಞಾನದಲ್ಲಿ ಸಾಕಷ್ಟು ಬದಲಾದರೂ, ಶಸ್ತ್ರಚಿಕಿತ್ಸೆ ನೀಡುವುದು ಹೆಚ್ಚು ಕಷ್ಟವಾಗಿತ್ತು’ ಎಂದು ಡಾ. ಸೂರಜ್ ನರಸಿಂಹನ್ ಹೇಳಿದರು.

‘80 ವರ್ಷ ಮತ್ತು 69 ವರ್ಷದ ಇಬ್ಬರು ಪುರುಷ ರೋಗಿಗಳು ತೀವ್ರತರದ ಅಯೋರ್ಟಿಕ್ ರಿಗರ್ಜಿಟೇಷನ್ನಿಂದ ಬಳಲುತ್ತಿದ್ದರು. ಅವರಿಗೆ ಟಿಎವಿಆರ್ ಸಾಧನ ಅಳವಡಿಸುವ ಮೂಲಕ ಚಿಕಿತ್ಸೆ ನೀಡಲು ನಿರ್ಧರಿಸಲಾಯಿತು. ಈ ವಿಧಾನದಲ್ಲಿ ಎದೆಯ ಭಾಗದಲ್ಲಿ ಶಸ್ತ್ರಚಿಕಿತ್ಸೆ ನಡೆಸದೆ, ರಕ್ತನಾಳದ ಮೂಲಕ ಹೃದಯದ ಕವಾಟವನ್ನು ಬದಲಾಯಿಸಲಾಗುತ್ತದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.