ಬೆಂಗಳೂರು: ‘ಹೊಸ ಪಿಂಚಣಿ ಪದ್ಧತಿಯನ್ನು (ಎನ್ಪಿಎಸ್) ರದ್ದು ಮಾಡಿ ಹಳೇ ಪಿಂಚಣಿ ಪದ್ಧತಿಯನ್ನು (ಒಪಿಎಸ್) ಜಾರಿ ಮಾಡದೇ ಇದ್ದರೆ ಹೋರಾಟ ಅನಿವಾರ್ಯ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ತಿಳಿಸಿದರು.

ಸರ್ಕಾರಿ ನೌಕರರ ಸಂಘದ ರಾಜ್ಯಮಟ್ಟದ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಶನಿವಾರ ಅವರು ಮಾತನಾಡಿದರು.

‘ಬೇರೆ ಬೇರೆ ದೇಶಗಳ ನಡುವೆ ಯುದ್ಧ ನಡೆದ ಬಳಿಕ ಷೇರು ಮಾರುಕಟ್ಟೆ ಕುಸಿದು ಹೋಗಿದ್ದು, ಅದರ ಕೆಟ್ಟ ಪರಿಣಾಮ ನೌಕರರ ಮೇಲಾಗಿದೆ. ಹೋರಾಟದ ಹಾದಿ ಹಿಡಿಯದೇ ಒಪಿಎಸ್ ಜಾರಿಯಾಗುತ್ತದಾ ಎಂಬುದು ಗೊತ್ತಿಲ್ಲ. ಹೋರಾಟ ಬೇಡ, ನಿಮ್ಮ ಜೊತೆಗೆ ನಾವಿದ್ದೇವೆ ಎಂದು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ. ಈ ಭರವಸೆ ಈಡೇರಿಸಲು ಒತ್ತಡ ಹಾಕಲಾಗುವುದು. ಆಗದೇ ಇದ್ದರೆ ಹೋರಾಟವೇ ದಾರಿ’ ಎಂದು ಹೇಳಿದರು.

‘6ನೇ ಮತ್ತು 7ನೇ ಹಣಕಾಸು ಆಯೋಗದ ವರದಿಯನ್ನು ಸರ್ಕಾರ ಜಾರಿ ಮಾಡಿದೆ. 7ನೇ ಹಣಕಾಸು ಆಯೊಗದ ಎರಡನೇ ವರದಿಯನ್ನು ಕೂಡ ಅನುಷ್ಠಾನಗೊಳಿಸಬೇಕು. ಆರೋಗ್ಯ ಯೋಜನೆಯಲ್ಲಿ ಗೊಂದಲಗಳಿವೆ. ಅವುಗಳನ್ನು ಮುಖ್ಯಮಂತ್ರಿ ಸರಿಪಡಿಸಲಿದ್ದಾರೆ. ಚಿಕಿತ್ಸೆಗೆ ದರವನ್ನು ದುಪ್ಪಟ್ಟು ಮಾಡಿ ನಿಗದಿ ಮಾಡಿರುವುದರಿಂದ ಹೆಚ್ಚಿನ ಆಸ್ಪತ್ರೆಗಳು ಈ ಯೋಜನೆಯಡಿ ಒಳಗೊಳ್ಳಲಿವೆ’ ಎಂದರು.

‘ಸಂಘಟನೆಗಳಲ್ಲಿ ಗೊಂದಲ ಇರಬಹುದು. ಆದರೆ, ನೌಕರರ ವಿಚಾರ ಬಂದರೆ ಎಲ್ಲರನ್ನು ಕರೆದುಕೊಂಡು ಒಟ್ಟಿಗೆ ಸಾಗಲಿದ್ದೇವೆ’ ಎಂದು ಹೇಳಿದರು.

‘ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು ನೌಕರರ ನಡುವೆ ಬಾಂಧವ್ಯ ಬೆಸೆದಿದೆ. 175 ವಿಭಾಗದಲ್ಲಿ ಸ್ಪರ್ಧೆಗಳು ನಡೆಯುತ್ತಿವೆ. 13 ಸಾವಿರ ನೌಕರರು ಭಾಗವಹಿಸಿದ್ದಾರೆ’ ಎಂದು ಮಾಹಿತಿ ನೀಡಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260524-4-1497191816

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.