ಬೆಂಗಳೂರು: ತಾಯಿ ಕಳೆದುಕೊಂಡು ಅನಾಥವಾಗಿದ್ದ 46 ಗಿಳಿಮರಿಗಳ ರಕ್ಷಣೆಗೆ 3ಡಿ ತಂತ್ರಜ್ಞಾನದೊಂದಿಗೆ ತಾಯಿ ಪ್ರತಿಕೃತಿ ನಿರ್ಮಿಸಿ ಆಹಾರ ಉಣಿಸುವಲ್ಲಿ ನಗರದ ಗೋಪಾಲನ್ ಕಾಲೇಜು ವಿದ್ಯಾರ್ಥಿಗಳು ಯಶಸ್ವಿಯಾಗಿದ್ದಾರೆ.

ಅತಿ ಸೂಕ್ಷ್ಮ ಸ್ಥಿತಿಯಲ್ಲಿದ್ದ ಭಾರತೀಯ ಗಿಳಿಮರಿಗಳನ್ನು ರಕ್ಷಿಸಲಾಗಿತ್ತು. ಇವುಗಳಿಗೆ ಆಹಾರ ಉಣಿಸಲು ಸಿರಿಂಜ್ಗೆ ಮೊರೆ ಹೋಗಲಾಗಿತ್ತು. ಆದರೆ ಅವು ಆಹಾರ ಸೇವಿಸದೇ ಆರೋಗ್ಯದ ಮೇಲೆ ಪರಿಣಾಮ ಬೀರುವ ಆತಂಕ ಎದುರಾಗಿತ್ತು.

ಗೋಪಾಲನ್ ಕಾಲೇಜ್ ಆಫ್ ಮ್ಯಾನೇಜ್ಮೆಂಟ್ (ಜೆಸಿಇಎಂ) ಅಂತಿಮ ವರ್ಷದ ಏರೋನಾಟಿಕಲ್ ಎಂಜಿನಿಯರಿಂಗ್ ವಿದ್ಯಾರ್ಥಿಗಳ ತಂಡ, ತಾಯಿ ಗಿಳಿ ಹೋಲುವ ‘ಬಯೋ ಮಿಮೆಟಿಕ್ ಮದರ್ ಪ್ಯಾರಾಕೀಟ್’ ರೂಪಿಸಿದ್ದರು. 3ಡಿ ಪ್ರಿಂಟೆಡ್ ಸಾಧನದಲ್ಲಿ ಗಿಳಿಯ ಕೊಕ್ಕಿನ ಮಾದರಿಯಲ್ಲಿ ಸಿರಿಂಜ್ ಅಳವಡಿಸಿ ಆ ಮೂಲಕ ಆಹಾರ ನೀಡಲಾಯಿತು.

‘ತಾಯಿಯಿಂದಲೇ ಆಹಾರ ಪಡೆಯುತ್ತಿರುವ ಭಾವನೆಯನ್ನು ಮರಿಗಳು ಹೊಂದಿದ್ದು, ಸುರಕ್ಷಿತವಾಗಿ ಉಣಿಸಲಾಗುತ್ತಿದೆ. ಇದು ತಾಂತ್ರಿಕ ಕೌಶಲ ಹಾಗೂ ಕರುಣೆಯ ಸಂಯೋಜನೆ ಯಾಗಿದೆ’ ಎಂದು ಗೋಪಾಲನ್ ಫೌಂಡೇಷನ್ ನಿರ್ದೇಶಕಿ ಸುನೀತಾ ಪ್ರಭಾಕರ್ ಹೇಳಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260314-4-345169218

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.