ಬೆಂಗಳೂರು: ‘ಚಿನ್ನ ಖರೀದಿ ಮಾಡಬೇಡಿ, ಇಂಧನ ಬಳಕೆ ಕಡಿಮೆ ಮಾಡಿ ಎನ್ನುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬೆಲೆ ಏರಿಕೆ ಏಕೆ? ಯಾರಿಂದ ಆಗಿದೆ ಎನ್ನುವುದನ್ನೂ ವಿವರಿಸಬೇಕು’ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆಗ್ರಹಿಸಿದರು.

ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಮದುವೆ ಸಮಾರಂಭಕ್ಕೆ ಚಿನ್ನ ಖರೀದಿಸದೆ ಇರಲು ಸಾಧ್ಯವೇ? ಮಹಿಳೆ ಚಿನ್ನದ ತಾಳಿ, ಸರ ಹಾಕಿಕೊಳ್ಳುವುದು ಬೇಡವೇ? ಕಷ್ಟವಿದ್ದರೂ ಜನರು ಸಾಲ ಮಾಡಿ ಚಿನ್ನ ಖರೀದಿ ಮಾಡುತ್ತಾರೆ. ಇಂತಹ ವಿಷಯಗಳಲ್ಲಿ ಉಚಿತ ಸಲಹೆಗಳು ಪ್ರಯೋಜನಕ್ಕೆ ಬರುವುದಿಲ್ಲ. ಅದರ ಬದಲಿಗೆ ಬೆಲೆ ಏರಿಕೆ ನಿಯಂತ್ರಿಸಬೇಕು. ಜನರು ಸುಲಭವಾಗಿ ಚಿನ್ನ ಖರೀದಿಸಲು ಅವಕಾಶ ಮಾಡಿಕೊಡಬೇಕು’ ಎಂದು ಒತ್ತಾಯಿಸಿದರು.

‘ಕೋವಿಡ್ ಸಮಯದಲ್ಲಿ ದೀಪ ಹಚ್ಚಿಸಿ, ತಟ್ಟೆ ಬಾರಿಸಲು ಹೇಳಿದ್ದರು. ಅದರಿಂದ ಸಮಸ್ಯೆ ನಿಂತು ಹೋಯಿತಾ? ಸಾರ್ವಜನಿಕ ಸಾರಿಗೆ ಬಳಸಿ ಎಂದು ಜನರಿಗೆ ಬುದ್ಧಿ ಹೇಳುವ ಮೊದಲು ಕೇಂದ್ರ ಸರ್ಕಾರದ ಸಚಿವರು, ಅಧಿಕಾರಿಗಳು ಸಾರ್ವಜನಿಕ ಸಾರಿಗೆಯಲ್ಲಿ ಸಂಚರಿಸಲು ಸೂಚಿಸಬೇಕು. ಬಿಜೆಪಿ ಕಾರ್ಯಕರ್ತರು ಮೊದಲು ತ್ಯಾಗ ಮಾಡಬೇಕು. ನಂತರ ಜನರಿಗೆ ಸಂದೇಶ ನೀಡಬೇಕು’ ಎಂದು ಅವರು ಸಲಹೆ ನೀಡಿದರು.

‘ಮಲೇಷ್ಯಾ ಅಣಬೆ ತಿನ್ನುವುದನ್ನು ನಿಲ್ಲಿಸಲಿ’

‘ಮೋದಿ ಅವರು ಈಗ ಪೆಟ್ರೋಲ್ ಮಿತವ್ಯಯ ಮಾಡಿ, ಚಿನ್ನ ಖರೀದಿ ಮಾಡಬೇಡಿ, ವಿದೇಶ ಪ್ರವಾಸಕ್ಕೆ ಹೋಗಬೇಡಿ ಎನ್ನುತ್ತಿದ್ದಾರೆ. ಐದು ತಿಂಗಳಿಂದ ಏನು ಮಾಡುತ್ತಿದ್ದರು? ಮಲೇಷ್ಯಾ, ಇಂಡೋನೇಷ್ಯಾದಿಂದ ಅಣಬೆ ತಂದು ತಿನ್ನುವುದನ್ನು ನಿಲ್ಲಿಸಲಿ ಎಂದು ವಿಧಾನ ಪರಿಷತ್ತಿನ ಕಾಂಗ್ರೆಸ್ ಸದಸ್ಯ ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ.

ಇವರಿಗೆ ₹8,000ಕೋಟಿ ವಿಮಾನ ಬೇಕು. ಮಿತವ್ಯಯ ಮಾಡಬೇಕಾದರೆ ಮೊದಲು ಸಾಮಾನ್ಯ ವಿಮಾನ ಬಳಕೆ ಮಾಡಬೇಕು. ಸಣ್ಣ ಕಾರಿನಲ್ಲಿ ಸಂಚರಿಸಬೇಕು. ಇಂದಿರಾ ಗಾಂಧಿ ಅವರು ಅಂಬಾಸಿಡರ್ ಕಾರಿನಲ್ಲಿ ಓಡಾಡುತ್ತಿದ್ದರು. ಇಂದು ಜನ ಸಾಮಾನ್ಯರು ಜೀವನ ನಡೆಸುವುದೇ ಕಷ್ಟವಾಗಿದೆ. ಸಾಮಾನ್ಯರ ಕಷ್ಟ ಬಿಜೆಪಿ ನಾಯಕರಿಗೆ ಅರ್ಥವಾಗುವುದೇ ಇಲ್ಲ’ ಎಂದು ಟೀಕಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260512-4-2008457120

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.