ಬೆಂಗಳೂರು: ‘ಒಳಮೀಸಲಾತಿ ಜಾರಿ ವೇಳೆ ಯಾವುದೇ ವೃಂದದಲ್ಲಿ ಪರಿಶಿಷ್ಟ ಜಾತಿಯ ರೋಸ್ಟರ್ ಬಿಂದುಗಳು ಮೂರಕ್ಕಿಂತ ಕಡಿಮೆ ಇದ್ದರೆ ‘ಎಸ್ಸಿ ಸಾಮಾನ್ಯ’ ಎಂದು ಪರಿಗಣಿಸುವ ಆದೇಶ ಹಿಂಪಡೆಯಬೇಕು. ರೋಸ್ಟರ್ ಬಿಂದುವಿನಲ್ಲಿ ಇರುವ ದೋಷಗಳನ್ನು ಸರಿಪಡಿಸಲು ಸಮಾಜ ಕಲ್ಯಾಣ ಇಲಾಖೆಗೆ ವಹಿಸಿರುವ ಜವಾಬ್ದಾರಿಯನ್ನು ಹಿಂಪಡೆದು, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ ವಹಿಸಬೇಕು’ ಎಂದು ಮಾದಿಗರ ಚಿಂತಕರ ದುಂಡು ಮೇಜಿನ ಸಭೆ ಒತ್ತಾಯಿಸಿದೆ.

ಶಾಸಕರ ಭವನದಲ್ಲಿ ಮಾದಿಗ ಸಮುದಾಯದ ಮಾಜಿ ಸಚಿವರು, ಸಂಸದರು, ನಿವೃತ್ತ ಅಧಿಕಾರಿಗಳು, ಚಿಂತಕರು, ಸಾಹಿತಿಗಳ ಸಭೆ ಭಾನುವಾರ ನಡೆಯಿತು.

ಸಚಿವರಾದ ಕೆ.ಎಚ್. ಮುನಿಯಪ್ಪ ಮತ್ತು ಆರ್.ಬಿ. ತಿಮ್ಮಾಪುರ ನೇತೃತ್ವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಿಗೆ ನಿಯೋಗ ತೆರಳಿ ಒಳಮೀಸಲಾತಿ ಜಾರಿಯಲ್ಲಿನ ಲೋಪಗಳನ್ನು ಸರಿಪಡಿಸುವಂತೆ ಒತ್ತಾಯಿಸಲು ಸಭೆಯಲ್ಲಿ ನಿರ್ಣಯ ಕೈಗೊಂಡಿದೆ.

ಕರ್ನಾಟಕ ಮತ್ತು ತೆಲಂಗಾಣದಲ್ಲಿ ಕಾಂಗ್ರೆಸ್ ಸರ್ಕಾರವೇ ಇದೆ. ಆದ್ದರಿಂದ, ಎರಡೂ ಕಡೆ ಒಳಮೀಸಲಾತಿ ನೀತಿ ಒಂದೇ ರೀತಿಯಲ್ಲಿ ಇರಬೇಕು. ತೆಲಂಗಾಣ ಮಾದರಿ ಒಳಮೀಸಲಾತಿ ನೀತಿಯನ್ನು ರಾಜ್ಯದಲ್ಲಿಯೂ ಅನುಷ್ಠಾನಗೊಳಿಸಬೇಕೆಂದು ಸಭೆ ಆಗ್ರಹಿಸಿದೆ.

ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ ಜಾತಿ ಸೂಚಕದಡಿ ಮಾದಿಗರು, ಛಲವಾದಿಗರು ಇಬ್ಬರೂ ಜಾತಿ ಪ್ರಮಾಣಪತ್ರ ಪಡೆಯುತ್ತಿದ್ದಾರೆ. ಸದ್ಯ ಪ್ರವರ್ಗ ‘ಎ’, ಪ್ರವರ್ಗ ‘ಬಿ’, ಪ್ರವರ್ಗ ‘ಸಿ’ ಎಂದು ಜಾತಿಗಳನ್ನು ವರ್ಗೀಕರಣ ಮಾಡಲಾಗಿದೆ. ಪ್ರವರ್ಗ ‘ಎ’ ಗುಂಪಿನಲ್ಲಿ ಮಾದಿಗ ಮತ್ತು ಸಂಬಂಧಿತ ಜಾತಿಗಳಿದ್ದು, ಈ ಗುಂಪಿಗೆ ಕಳ್ಳದಾರಿಯಲ್ಲಿ ಅನೇಕರು ನುಸುಳುವ ಸಾಧ್ಯತೆಯಿದೆ. ಇದಕ್ಕೆ ಕಡಿವಾಣ ಹಾಕಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಸಭೆ ಒತ್ತಾಯಿಸಿದೆ.

ಮಾಜಿ ಸಚಿವ ಎಚ್. ಆಂಜನೇಯ ಮಾತನಾಡಿ, ‘ಯಾರೊಂದಿಗೂ ಸ್ಪರ್ಧೆ ಮಾಡಲು ಶಕ್ತರಲ್ಲವೆಂದೇ ಒಳಮೀಸಲಾತಿ ಜಾರಿಗೆ ಮಾದಿಗರು ಹೋರಾಟ ನಡೆಸಿದ್ದರು. ಪರಿಶಿಷ್ಟ ಜಾತಿಯಲ್ಲಿಯೇ ಸಿಂಹಪಾಲು ಆಗಿರುವ ಮಾದಿಗರು, ಬಡತನ, ಸಂಕಷ್ಟದಿಂದ ಸೌಲಭ್ಯ ಪಡೆಯಲು ಸಾಧ್ಯವಾಗಿಲ್ಲ. ಸಮುದಾಯದ ಕೂಗಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನ್ಯಾಯ ಕೊಟ್ಟಿದ್ದಾರೆ. ಸರ್ಕಾರವು ಸಣ್ಣಪುಟ್ಟ ಲೋಪಗಳನ್ನು ಸರಿಪಡಿಸಿದರೆ ಸಮುದಾಯಕ್ಕೆ ಇನ್ನಷ್ಟು ಸಹಕಾರ ಮಾಡಿದಂತೆ ಆಗಲಿದೆ’ ಎಂದರು.

ಸಭೆಯನ್ನು ಕೆಪಿಎಸ್ಸಿ ಮಾಜಿ ಅಧ್ಯಕ್ಷ ಗೋನಾಳ್ ಭೀಮಪ್ಪ ಉದ್ಘಾಟಿಸಿದರು. ಕೆಪಿಎಸ್ಸಿ ಮಾಜಿ ಸದಸ್ಯ ಎಚ್. ದುಗ್ಗಪ್ಪ, ನಿವೃತ್ತ ಅಧಿಕಾರಿಗಳಾದ ಬಾಬುರಾವ್ ಮುಡಬಿ, ಎಚ್.ಆರ್.ತೇಗನೂರು, ಭೀಮಾಶಂಕರ್, ಸಾಹಿತಿ ದಾಸನೂರು ಕೂಸಣ್ಣ, ಮಾದಿಗ ನೌಕರ ಸಂಘದ ರಾಜ್ಯಾಧ್ಯಕ್ಷ ಮಂಜುನಾಥ್ ಹೊಣಿಕೇರಿ, ಪ್ರಧಾನ ಕಾರ್ಯದರ್ಶಿ ಸುಮಂತ್ ಕಟ್ಟಿಮನಿ, ದೇವೇಂದ್ರಪ್ಪ, ಕೆ.ಜಿ. ಜಗದೀಶ್, ರೇವಣ್ಣಸಿದ್ದಪ್ಪ, ಲಕ್ಷ್ಮೀನಾರಾಯಣ, ಕೆಂಚಮಾರಯ್ಯ, ಶರಣು ರಾಯಚೂರು, ಸತೀಶ್, ಕಿರಣ್ ಶಿವಪುರ, ವಕೀಲ ರವೀಂದ್ರ ಮುಂತಾದವರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260504-51-709556329

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.