ಬೆಂಗಳೂರು: ‘ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಬೀಜ ಕಾಯ್ದೆಗೆ ಸಂಬಂಧಿಸಿದ ಮಸೂದೆಯನ್ನು ಆಧಾರವಾಗಿಟ್ಟುಕೊಂಡು ಸಗಟು, ಚಿಲ್ಲರೆ ಮತ್ತು ವಿತರಣೆಗೆ ಪ್ರತ್ಯೇಕವಾದ ಹೊಸ ಪರವಾನಗಿ ಪಡೆಯುವಂತೆ ಬೀಜ ವ್ಯಾಪಾರಸ್ಥರಿಗೆ ಒತ್ತಾಯ ಮಾಡಬಾರದು’ ಎಂದು ಹೈಕೋರ್ಟ್, ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.

‘ಸುವರ್ಣ ಹೈಬ್ರೀಡ್ ಸೀಡ್ಸ್ ಪ್ರೈವೆಟ್ ಲಿಮಿಟೆಡ್ ಕಂಪನಿ’ ಸೇರಿದಂತೆ ಒಟ್ಟು ಎಂಟು ಬೀಜ ಮಾರಾಟ ಕಂಪನಿಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಶಂಕರ ಎಸ್. ಮಗದುಂ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ.

‘ಕೇಂದ್ರ ಸರ್ಕಾರ ಜಾರಿಗೆ ತರಲು ಆಲೋಚಿಸಿರುವ, ಬೀಜಗಳ ಕಾಯ್ದೆ-2025 ಇನ್ನೂ ಜಾರಿಗೆಬಂದಿಲ್ಲ. ಹಾಗಾಗಿ, ಅರ್ಜಿದಾರರಚಟುವಟಿಕೆಗಳನ್ನು ಅಸ್ತಿತ್ವದಲ್ಲಿರುವ ಬೀಜಗಳ ನಿಯಂತ್ರಣ–1983ರ ಆದೇಶದ ಅಡಿಯಲ್ಲಿ ನೀಡಲಾದ ಪರವಾನಗಿ ಅನುಸಾರ ಕಟ್ಟುನಿಟ್ಟಾಗಿ ನಿಯಂತ್ರಿಸಬೇಕು’ ಎಂದು ನಿರ್ದೇಶಿಸಿದೆ.

‘ಬೀಜಗಳ ಕಾಯ್ದೆ–1966 ಮತ್ತು ಬೀಜಗಳ ನಿಯಂತ್ರಣ ಆದೇಶ 1983ರ ಅನುಸಾರ ಕೃಷಿ ಮತ್ತು ತೋಟಗಾರಿಕೆ ಬೀಜಗಳ ನಡುವೆ ಪ್ರತ್ಯೇಕ ವ್ಯಾಖ್ಯಾನ ವಿಲ್ಲ. ಒಮ್ಮೆ ರಾಜ್ಯ ಸರ್ಕಾರದಿಂದ ಬೀಜಗಳ ಪರವಾನಗಿ ಪಡೆದರೆ ಸಾಕು, ಬೀಜಗಳ ಆಮದು ಅಥವಾ ರಫ್ತು ಮಾಡಬಹುದು. ನಮ್ಮದೇ ಬ್ರಾಂಡ್ ಅನ್ನೂ ಪ್ಯಾಕ್ ಮಾಡಬಹುದು. ವಿತರಣೆ ಮಾಡಬಹುದು. ಚಿಲ್ಲರೆ ಕೇಂದ್ರಗಳಲ್ಲಿ ಮಾರಾಟ ಮಾಡ ಬಹುದು’ ಎಂಬ ಅರ್ಜಿದಾರರ ವಾದ ವನ್ನು ನ್ಯಾಯಪೀಠ ಮಾನ್ಯ ಮಾಡಿದೆ.

ಆಕ್ಷೇಪ ಏನು?: ‘ಕೇಂದ್ರದ ಉದ್ದೇಶಿತ ಮಸೂದೆಯು, ಬಹುರಾಷ್ಟ್ರೀಯ ಕಂಪನಿಗಳಿಗೆ ಅನುಕೂಲ ಮಾಡಿಕೊಡುವ ಇರಾದೆ ಹೊಂದಿದೆ. ಇದರ ಪ್ರಕಾರ, ಕೃಷಿ ಮತ್ತು ತೋಟಗಾರಿಕೆ ಬೆಳೆಗಳ ಬೀಜಗಳ ವ್ಯಾಪಾರಸ್ಥರು ಸಗಟು, ಚಿಲ್ಲರೆ ಮತ್ತು ವಿತರಣೆಗೆ ರಾಜ್ಯ ಮತ್ತು ರಾಷ್ಟ್ರೀಯ ವ್ಯಾಪ್ತಿಯಲ್ಲಿ ಪ್ರತ್ಯೇಕವಾಗಿ ಪರವಾನಗಿ ಪಡೆಯಬೇಕಿದೆ. ಈ ಮೊದಲು ಪರವಾನಗಿಯನ್ನು ರಾಜ್ಯ ಸರ್ಕಾರದ ಕೃಷಿ ಇಲಾಖೆಯ ಜಂಟಿ ನಿರ್ದೇಶಕರಿಂದ ಪಡೆದರೆ ಸಾಕಿತ್ತು. ಆದರೆ, ಉದ್ದೇಶಿತ ಶಾಸನದಲ್ಲಿ ವರ್ಗೀಕರಣಗೊಂಡ ದಕ್ಷಿಣ, ಉತ್ತರ, ಪೂರ್ವ, ಪಶ್ಚಿಮ ಮತ್ತು ಕೇಂದ್ರ ವಲಯ ಸಮಿತಿಗಳು ಕಂಪನಿಗಳಿಗೆ ಪರವಾನಗಿ ನೀಡಬೇಕಾಗುತ್ತದೆ ಎಂಬ ಅಂಶ ಒಳಗೊಂಡಿದೆ’ ಎಂಬುದು ಅರ್ಜಿದಾರರ ಆಕ್ಷೇಪ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260516-51-565858626

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.