ಬೆಂಗಳೂರು: ‘ಇಹಪರದ ಚರ್ಚೆ ನಡೆಯುತ್ತಿದ್ದ ಮಹಾಮನೆಗೂ, ಅಧ್ಯಕ್ಷರೇ ಸಭಾತ್ಯಾಗ ಮಾಡುವ ಈಗಿನ ಸದನಗಳಿಗೂ ಅಜಗಜಾಂತರ ವ್ಯತ್ಯಾಸವಿದೆ’ ಎಂದು ಚಿಂತಕ ಶಿವರಾಮಯ್ಯ ಹೇಳಿದರು.

ನಯನ ಸಭಾಂಗಣದಲ್ಲಿ ಬುಧವಾರಆಯೋಜಿಸಿದ್ದ ಸಮಾರಂಭದಲ್ಲಿ ಎಸ್.ಜಿ. ಸಿದ್ಧರಾಮಯ್ಯ ಅವರ ‘ಮಹಾಮನೆ’ ನಾಟಕ ಜನಾರ್ಪಣೆಗೊಳಿಸಿ ಅವರು ಮಾತನಾಡಿದರು.

‘ಬಸವಣ್ಣ ಅವರು ಎಲ್ಲ ಸಮುದಾಯದವರನ್ನು ಒಳಗೊಂಡು ವಚನಕಾರರೊಂದಿಗೆ ಮಹಾಮನೆಯಲ್ಲಿ ಮುಕ್ತವಾಗಿ ಮಾತನಾಡುತ್ತಿದ್ದರು.ಅಲ್ಲಿ ಸಮಾಜದ ಎಲ್ಲ ಸ್ತರಗಳ ಜನರ ಚರ್ಚೆಗಳು ಒಳಿತಿನ ಕುರಿತೇ ಇರುತ್ತಿದ್ದವು. ಮಹಾಮನೆಯ ಪರಿಕಲ್ಪನೆಯಲ್ಲಿ ಮೂಡಿ ಬಂದ ಸಂಸತ್ತು, ವಿಧಾನಸಭೆಗಳಲ್ಲಿ ನಡೆಯುವ ಚರ್ಚೆಗಳಲ್ಲಿ ಜಗಳಗಳನ್ನೇ ನೋಡುತ್ತಿದ್ದೇವೆ’ ಎಂದು ಬೇಸರ ವ್ಯಕ್ತಪಡಿಸಿದರು.

ಎಸ್.ಜಿ.ಸಿದ್ದರಾಮಯ್ಯ ಮಾತನಾಡಿ, ‘ಮಹಾಮನೆ ಎಲ್ಲರನ್ನೂ ಒಳಗೊಂಡ ಮನೆಯೇ ಆಗಿತ್ತು. ಈಗಲೂ ಚಾತುರ್ವರ್ಣ ವ್ಯವಸ್ಥೆ ನಮ್ಮಲ್ಲಿ ಜೀವಂತವಾಗಿದೆ. ದೇವಸ್ಥಾನದ ಒಳಕ್ಕೆ ಬಿಡದ ಘಟನೆಗಳನ್ನು ಕಾಣುತ್ತಿರುವುದು ಬೇಸರದ ಸಂಗತಿ. ಇದೇ ಕಾರಣದಿಂದ ಮಹಾಮನೆ, ವಚನಗಳ ಮಹತ್ವ ತಿಳಿಸಲು ನಾಟಕ ರಚಿಸಿದೆ’ ಎಂದರು.

ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ.ನಾಗರಾಜಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಲೇಖಕ ಬೇಲೂರುರಘುನಂದನ ಪುಸ್ತಕ ಕುರಿತು ಮಾತನಾಡಿದರು. ಕಸಾಪ ನಗರ ಅಧ್ಯಕ್ಷ ಎಂ.ಪ್ರಕಾಶಮೂರ್ತಿ, ರಾಧಾಕೃಷ್ಣ ಹೆಗಡೆ, ಬಿ.ಎಸ್. ವಿದ್ಯಾರಣ್ಯ ಉಪಸ್ಥಿತರಿದ್ದರು.

ಲೇಖಕಿ ಎಚ್.ಎಲ್. ಪುಷ್ಪ, ಪದ್ಮಾ ಟಿ. ಚಿನ್ಮಯಿ, ವಡವಾಟಿ ಶಾರದಾ ಭರತ್, ಕಾವೇರಿ ಶ್ರೀಧರ್, ಭಾಸ್ಕರ್ ಕುಪ್ಪೂರು ಅವರಿಗೆ ರಂಗಗೌರವ ಸಲ್ಲಿಸಲಾಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260416-4-2106909065

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.