ಬೆಂಗಳೂರು: ‘ಸದ್ಯವೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜತೆಗೆ ಚರ್ಚಿಸಿ ಎಷ್ಟು ಶೇಕಡ ವೇತನ ಹೆಚ್ಚಳ ಮಾಡಲಾಗುತ್ತದೆ ಎಂದು ತಿಳಿಸಿದ ನಂತರವೂ ಸಾರಿಗೆ ನೌಕರರು ಮುಷ್ಕರ ಮಾಡಿದರೆ ಅದಕ್ಕೆ ಅವರೇ ಹೊಣೆ’ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

‘2026ರ ಮಾರ್ಚ್ ಅಂತ್ಯಕ್ಕೆ ನಾಲ್ಕು ಸಾರಿಗೆ ನಿಗಮಗಳ ಬಾಕಿ ಪ್ರಮಾಣ ₹7,130.80 ಕೋಟಿಯಿದ್ದು, ಇದರಲ್ಲಿ ನೌಕರರ ಭವಿಷ್ಯ ನಿಧಿ ₹2,298.20 ಕೋಟಿ, ಇಂಧನ ಪಾವತಿ ಬಾಕಿ ₹822.26 ಕೋಟಿ ಸೇರಿದೆ. ಕಾರ್ಮಿಕ ಸಂಘಟನೆಗಳ ಬೇಡಿಕೆಯಂತೆ ಶೇ 25 ವೇತನ ಪರಿಷ್ಕರಣೆ ಮಾಡಿದಲ್ಲಿ, ಪ್ರತಿ ತಿಂಗಳು ನಾಲ್ಕು ಸಾರಿಗೆ ಸಂಸ್ಥೆಗಳಿಗೆ ₹131.52 ಕೋಟಿ (ವಾರ್ಷಿಕ ₹1,578.18 ಕೋಟಿ) ಭರಿಸಬೇಕಾಗುತ್ತದೆ’ ಎಂದು ತಿಳಿಸಿದ್ದಾರೆ.

‘ಹಿಂದಿನ ಬಿಜೆಪಿ ಸರ್ಕಾರದ ಆಡಳಿತ ಅವಧಿಯ ಬಾಕಿ ಪಾವತಿಗೆ ಕಳೆದ ವರ್ಷ ಬ್ಯಾಂಕ್ನಿಂದ ಸಾರಿಗೆ ಸಂಸ್ಥೆಗಳು ₹2,000 ಕೋಟಿ ಸಾಲ ಪಡೆದಿದ್ದು, ಸರ್ಕಾರವೇ ಅಸಲು, ಬಡ್ಡಿ ಪಾವತಿಸುತ್ತಿದೆ. ಪ್ರತಿ ವರ್ಷ ನಾಲ್ಕು ಸಾರಿಗೆ ಸಂಸ್ಥೆಗಳು ಗಳಿಸುವ ಆದಾಯದಲ್ಲಿ ಶೇ 49.15 ಸಿಬ್ಬಂದಿ ವೆಚ್ಚ (₹6,759.68 ಕೋಟಿ) ಶೇ 34.49 ಡೀಸೆಲ್ ವೆಚ್ಚ (₹4,744.41 ಕೋಟಿ) ವ್ಯಯ ಮಾಡುತ್ತಿವೆ ಎಂದು ವಿವರಿಸಿದ್ದಾರೆ.

‘2023ರ ಮಾರ್ಚ್ ತಿಂಗಳಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಸಾರಿಗೆ ಸಂಸ್ಥೆಗಳ ನೌಕರರ ವೇತನ ಪರಿಷ್ಕರಣೆ ಮಾಡಿ, 38 ತಿಂಗಳ ಹಿಂಬಾಕಿ ವೇತನ ಪಾವತಿ ಬಾಕಿಯಿಟ್ಟು, ಬಜೆಟ್ನಲ್ಲಿ ಯಾವುದೇ ಅನುದಾನವನ್ನು ಮೀಸಲಿಡದೆ ತಪ್ಪಾದ ಸರ್ಕಾರಿ ಆದೇಶ ಹೊರಡಿಸಿರುವುದೇ ಈ ಎಲ್ಲಾ ತೊಡಕುಗಳಿಗೆ ಮೂಲ ಕಾರಣವಾಗಿದೆ’ ಎಂದು ಆರೋಪಿಸಿದ್ದಾರೆ.

‘15 ದಿನ ಮುಷ್ಕರ: ಅಶೋಕಗೆ ಕೀರ್ತಿ ಸಲ್ಲಬೇಕು’

‘ಸಾರಿಗೆ ಸಂಸ್ಥೆಗಳ ಇತಿಹಾಸದಲ್ಲಿ ಮೊದಲ ಬಾರಿ 15 ದಿನ ಮುಷ್ಕರ ಮಾಡಿಸಿದ ಕೀರ್ತಿ ಅಂದಿನ ಸಾರಿಗೆ ಸಚಿವ ಆರ್. ಅಶೋಕಗೆ ಸಲ್ಲಬೇಕು. ಮುಷ್ಕರದ ಹೆಸರಿನಲ್ಲಿ ಸುಮಾರು 3500 ನೌಕರರನ್ನು ಕೆಲಸದಿಂದ ವಜಾ, ಅಮಾನತು ಮಾಡಿದ್ದೂ ಅಲ್ಲದೇ ಎಫ್ಐಆರ್ ಹಾಕಿಸಿದ್ದರಿಂದ ನ್ಯಾಯಾಲಯಕ್ಕೆ ಅಲೆಯುತ್ತಿದ್ದಾರೆ. ಈಗ ಸಾರಿಗೆ ನೌಕರರ ಬಗ್ಗೆ ಅನುಕಂಪದ ಮಾತನ್ನು ಆಡಲು ಅವರಿಗೆ ಯಾವ ನೈತಿಕತೆ ಇದೆ’ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಟೀಕಿಸಿದ್ದಾರೆ.

‘ಮುಖ್ಯಮಂತ್ರಿ ಅನುಮತಿ ಇಲ್ಲದೇ ವೇತನ ಹೆಚ್ಚಳ ಘೋಷಣೆ ಮಾಡಲು ಸಚಿವರೊಬ್ಬರಿಗೆ ಸಾಧ್ಯವೇ ಎನ್ನುವುದು ಉಪಮುಖ್ಯಮಂತ್ರಿ, ಸಾರಿಗೆ ಸಚಿವರಾಗಿ ಕೆಲಸ ಮಾಡಿರುವ ಅಶೋಕ ಅವರಿಗೆ ತಿಳಿದಿಲ್ಲವೇ. ಬಿಜೆಪಿ ಆಡಳಿತದ ಅವಧಿಯಲ್ಲಿ ಸಾರಿಗೆ ಸಂಸ್ಥೆಗಳು ಉತ್ತುಂಗದಲ್ಲಿದ್ದವು ಎನ್ನುವ ಭ್ರಮೆಯಿಂದ ಅವರು ಹೊರ ಬರಬೇಕು’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.