ಬೆಂಗಳೂರು: ‘ವಾಹನ ಮಾರಾಟದ ಬಳಿಕ ಅದರ ನೋಂದಣಿ ಪ್ರಮಾಣ ಪತ್ರದಲ್ಲಿ (ಆರ್ಸಿ) ಮಾಲೀಕರ ಹೆಸರು ಅಧಿಕೃತವಾಗಿ ಬದಲಾಗುವ ತನಕ ಆ ವಾಹನದ ಸಂಪೂರ್ಣ ಜವಾಬ್ದಾರಿಯನ್ನುನೋಂದಾಯಿತ ಮಾಲೀಕನೇ ಹೊರಬೇಕಾಗುತ್ತದೆ’ ಎಂದು ಹೈಕೋರ್ಟ್ ಪ್ರಕರಣವೊಂದರಲ್ಲಿ ವಿಶದಪಡಿಸಿದೆ.

ಪರಿಹಾರ ಪಾವತಿಗೆ ಸಂಬಂಧಿಸಿದಂತೆ ನಿರ್ದೇಶನ ನೀಡಿದ್ದ ಮೋಟಾರು ಅಪಘಾತ ಕ್ಲೇಮ್ (ಪರಿಹಾರ ಪಡೆಯುವ ಹಕ್ಕು) ನ್ಯಾಯಮಂಡಳಿ (ಎಂಎಸಿಟಿ) ಆದೇಶವನ್ನು ಪ್ರಶ್ನಿಸಿ ವಾಹನದ ಮಾಲೀಕ ಮಾರತ್ತಹಳ್ಳಿಯ ವಿ.ಸುನಿಲ್ ಕುಮಾರ್, ವಾಹನ ಖರೀದಿಸಿದ್ದ ಶಬ್ರೇಜ್ ಮತ್ತು ಪರಿಹಾರ ಹೆಚ್ಚಳ ಕೋರಿ ಮೃತರ ಕುಟುಂಬಸ್ಥರು ಸಲ್ಲಿಸಿದ್ದ ಮಿಶ್ರಿತ ಮೊದಲ ಮೇಲ್ಮನವಿಯನ್ನು ಭಾಗಶಃ ಪುರಸ್ಕರಿಸಲಾಗಿದೆ.

ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಜಿ.ಪಂಡಿತ್ ನೇತೃತ್ವದ ವಿಭಾಗೀಯ ನ್ಯಾಯಪೀಠ ಈ ಕುರಿತಂತೆ ಇತ್ತೀಚೆಗೆ ಆದೇಶಿಸಿದ್ದು, ‘ಅಪಘಾತಕ್ಕೆ ಈಡಾದ ಬೈಕ್ ನೋಂದಣಿ ಇನ್ನೂ ಸುನಿಲ್ ಕುಮಾರ್ ಅವರ ಹೆಸರಿನಲ್ಲೇ ಇರುವುದರಿಂದ ಪರಿಹಾರ ಪಾವತಿ ಜವಾಬ್ದಾರಿ ಅವರದ್ದೇ ಆಗಿರುತ್ತದೆ’ ಎಂದು ಸ್ಪಷ್ಟಪಡಿಸಿದೆ.

‘ಪರಿಹಾರದ ಮೊತ್ತ ನಿಗದಿ ಪಡಿಸುವಾಗ ನ್ಯಾಯಮಂಡಳಿ ತೆಗೆದುಕೊಂಡಿರುವ ನಿರ್ಧಾರ ಸಮಂಜಸವಾಗಿಲ್ಲ. ಹೀಗಾಗಿ, ಪರಿಹಾರ ಮೊತ್ತದ ₹33.07 ಲಕ್ಷಕ್ಕೆ ₹14 ಲಕ್ಷ ಹೆಚ್ಚುವರಿಯಾಗಿ ಸೇರಿಸಬೇಕು ಮತ್ತು ಒಟ್ಟು ₹47.15 ಲಕ್ಷ ಪಾವತಿಸಬೇಕು. ಈ ಮೊತ್ತವನ್ನು ವಾಹನದ ಮೂಲ ಮಾಲೀಕ ಸುನಿಲ್ ಕುಮಾರ್ ಅವರೇ ಪಾವತಿಸಬೇಕು’ ಎಂದು ಪೀಠ ಆದೇಶಿಸಿದೆ.

ಪ್ರಕರಣವೇನು?:

ಸುನಿಲ್ ಕುಮಾರ್ ಬೈಕ್ ಅನ್ನು ಶಬ್ರೇಜ್ಗೆ ಮಾರಾಟ ಮಾಡಿದ್ದರು. 2020ರ ಜೂನ್ 18ರಂದು ಬೈಕ್ ಡಿಕ್ಕಿ ಹೊಡೆದು ದೇವನಹಳ್ಳಿ ತಾಲ್ಲೂಕಿನ ಆವತಿ ಗ್ರಾಮದ ವೈ.ಹನುಮಂತ (42) ಮೃತಪಟ್ಟಿದ್ದರು. ‘ಮೃತರ ಕುಟುಂಬಕ್ಕೆ ನ್ಯಾಯಮಂಡಳಿ ₹33 ಲಕ್ಷವನ್ನು ಸುನಿಲ್ ಕುಮಾರ್ ಮತ್ತು ಶಬ್ರೇಜ್ ಜಂಟಿಯಾಗಿ ಪಾವತಿ ಮಾಡಬೇಕು’ ಎಂದು ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಸುನಿಲ್ ಕುಮಾರ್ ಮತ್ತು ಶಬ್ರೇಜ್ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು. ಅಂತೆಯೇ, ಮೃತ ಹನುಮಂತ ಅವರ ಕುಟುಂಬದ ಸದಸ್ಯರು ಪರಿಹಾರದ ಮೊತ್ತ ಹೆಚ್ಚಿಸುವಂತೆ ಕೋರಿ ಪ್ರತ್ಯೇಕ ಮೇಲ್ಮನವಿ ಸಲ್ಲಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.