ಬೆಂಗಳೂರು: ‘ಆಸ್ತಿ ನೋಂದಣಿಗೆ ಆಧಾರ್, ಪಾನ್ ಕಾರ್ಡ್, ಪಾಸ್ಪೋರ್ಟ್ ಈ ಮೂರು ದಾಖಲೆಗಳಲ್ಲಿ ಒಂದನ್ನು ಕಡ್ಡಾಯ ಮಾಡಲಾಗಿದೆ. ವಾಹನ ನೋಂದಣಿಗೂ ‘ಆಧಾರ್ ಇ–ಕೆವೈಸಿ’ ಕಡ್ಡಾಯ ಮಾಡುವುದು ಸೂಕ್ತ’ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಸಲಹೆ ನೀಡಿದರು.

ಸಕಾಲ ಸೇವೆಗಳ ಅಡಿಯಲ್ಲಿ ಕೃಷಿ, ಸಾರಿಗೆ, ಶಿಕ್ಷಣ ಮತ್ತು ಆದಾಯ ತೆರಿಗೆ ಇಲಾಖೆಗಳ ಇ-ಆಡಳಿತ ಸೇವೆ ಯನ್ನು ತ್ವರಿತ ಗೊಳಿಸಲು ಮತ್ತು ಲಂಚ ಮುಕ್ತಗೊಳಿಸುವ ಕುರಿತು ಅಧಿಕಾರಿ ಗಳ ಜೊತೆ ಶುಕ್ರವಾರ ಅವರು ಚರ್ಚೆ ನಡೆಸಿದರು. ‘ಚಾಲನಾ ಪರವಾನಗಿ ಪಡೆಯಲು ಆಧಾರ್ ಕಡ್ಡಾಯ ಗೊಳಿಸಿ ರುವಾಗ, ವಾಹನ ನೋಂದಣಿಗೂ ಆಧಾರ್ ಇ–ಕೆವೈಸಿ ಏಕೆ ಕಡ್ಡಾಯ ಮಾಡ ಬಾರದು’ ಎಂದು ಪ್ರಶ್ನಿಸಿದರು.

‘ಸಕಾಲ ಗ್ಯಾರಂಟಿ ಸೇವೆ ಯನ್ನು ನಿಗದಿತ ಸಮಯದಲ್ಲಿ ನೀಡಬೇಕು. ನಿಗದಿತ ಸಮಯಕ್ಕೆಸೇವೆ ಲಭ್ಯವಾಗುವಂತೆ ಮಾಡಲು ಸಕಾಲಕ್ಕೆ ಸಂಬಂಧಿಸಿದ ಎಲ್ಲ ಇಲಾಖೆ ಗಳ ಸೇವೆಗಳ ಕುರಿತ ದತ್ತಾಂಶ ಬೆರಳ ತುದಿಯಲ್ಲಿ ಇರಬೇಕು. ಈ ಕಾರಣಕ್ಕೆ ಕಳೆದ ಎರಡೂವರೆ ವರ್ಷ ದಿಂದ ನಿರಂತರವಾಗಿ ಸಕಾಲ ಕುಟುಂಬ ದತ್ತಾಂಶವನ್ನು ಅಪ್ಡೇಟ್ ಮಾಡಲಾಗು ತ್ತಿದೆ. ಕೆಲವು ಸೇವೆಗಳನ್ನು ಸ್ವಯಂಚಾಲಿತ ಗೊಳಿಸಲಾಗುತ್ತಿದೆ. ಇದ ರಿಂದ ಜನರಿಗೆ ಯಾವುದೇ ವಿಳಂಬ, ಭ್ರಷ್ಟಾಚಾರಕ್ಕೆ ಅವಕಾಶ ಇಲ್ಲದೆ ಸೇವೆ ಲಭ್ಯವಾಗಲಿದೆ. ಶೋಷಣೆಯಿಂದಲೂ ಜನರಿಗೆ ಮುಕ್ತಿ ಸಿಗಲಿದೆ’ ಎಂದು ಅವರು ಹೇಳಿದರು.

‘ಸಕಾಲದಲ್ಲಿ ಹತ್ತಾರು ಇಲಾಖೆ ಗಳಿದ್ದು ಹಲವು ಸೇವೆಗಳನ್ನು ಹೊರ ಗುತ್ತಿಗೆ ನೀಡಲಾಗಿದೆ. ಹೊರಗುತ್ತಿಗೆ ನೌಕರರ ಸಂಬಳವನ್ನು ಕುಟುಂಬ ಆ್ಯಪ್ ಮೂಲಕ ನೀಡುವಂತೆ ಆಗ ಬೇಕು. ವೈಯಕ್ತಿಕ ತೆರಿಗೆ ಕೂಡಾ ಕುಟುಂಬ ತಂತ್ರಾಂಶದ ಜೊತೆ ಸಂಯೋಜಿತ ವಾಗಿರಬೇಕು. ವೃತ್ತಿ ತೆರಿಗೆ ಯನ್ನು ಆನ್ಲೈನ್ ಮೂಲಕ ಸಂಗ್ರಹಿಸುವುದರಿಂದ ಸಂಯೋಜಿತ ಗೊಳಿಸು ವುದು ಕಷ್ಟವೇನಲ್ಲ. ಜೊತೆಗೆ ಜಿಎಸ್ಟಿ ಯನ್ನೂ ಸಂಯೋಜಿತ ಗೊಳಿಸಬಹುದು’ ಎಂದು ಸಚಿವರು ಅಭಿಪ್ರಾಯಪಟ್ಟರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260509-44-1008122288

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.